ನಾಳೆಯಿಂದ 3 ವಾರಗಳ ಕಾಲ ರಾಜ್ಯದ ಎಲ್ಲಾ ಶಾಲೆಗಳಿಗೆ ಅರ್ಧ ದಿನ ರಜೆ: ಸರ್ಕಾರದ ಈ ಮಹತ್ವದ ಘೋಷಣೆಗೆ ಕಾರಣವೇನು?
ದೀಪಾವಳಿ ರಜೆ ಮುಗಿದ ಬೆನ್ನಲ್ಲೇ ಹೇಗಪ್ಪಾ ಶಾಲೆಗೆ ಹೋಗೋದು ಅಂತಿದ್ದ ಮಕ್ಕಳಿಗೆ ಇದೀಗ ಗುಡ್ ನ್ಯೂಸ್ ಸಿಕ್ಕಿದೆ. ಮುಂದೆ 3-4 ದಿನಗಳ ಕಾಲ ಸತತ ರಜೆ ಸಿಗಲಿದೆ. ಇದಕ್ಕೂ ಮುನ್ನ ಮಳೆ- ಹಬ್ಬ ಹರಿದಿನ ಎಂದು ರಜೆ ನೀಡಲಾಗಿತ್ತು. ಆದರೆ ಈ ಬಾರಿ ರಜೆ ಘೋಷಿಸಲು ಕಾರಣ ಏನೆಂಬುದನ್ನು ಮುಂದೆ ತಿಳಿಯೋಣ.
ದಸರಾ ಹಬ್ಬಕ್ಕೆ ಈ ಬಾರಿ ಸುಮಾರು 13 ದಿನಗಳ ಕಾಲ ರಜೆ ನೀಡಲಾಗುತ್ತು. ಅದಾದ ನಂತರ ದೀಪಾವಳಿ ಹಬ್ಬದ ಹಿಂದಿನ ದಿನ ಅಂದರೆ ಅಕ್ಟೋಬರ್ 31 ಮತ್ತು ನವೆಂಬರ್ 1 ಎರಡು ದಿನ ರಜೆ ಇತ್ತು.
ಇದೀಗ ನವೆಂಬರ್ 15 ರಂದು ಗುರುನಾನಕ್ ಜಯಂತಿಯಿದ್ದು, ದೇಶದಾದ್ಯಂತ ಎಲ್ಲಾ ಶಾಲೆಗಳಿಗೆ ರಜೆ ಇರುತ್ತದೆ. ಅಷ್ಟೇ ಅಲ್ಲದೆ, ಮುಹಮ್ಮದ್ ಮಹದಿ ಆಲ್ ಮೌದ್ ಜೌನ್‌ಪುರಿ ಅವರ ಜನ್ಮದಿನದ ಸಂದರ್ಭದಲ್ಲಿ, ಕೆಲವು ಪ್ರದೇಶಗಳಲ್ಲಿ ಶಾಲೆಗಳಿಗೆ 16 ರಂದು ರಜೆ ಇದೆ.
ಇನ್ನು ನವೆಂಬರ್ 17 ಭಾನುವಾರ. ಎಂದಿನಂತೆ ರಜೆ ಬರುತ್ತಿದೆ. ಒಟ್ಟಾರೆ ಶಾಲಾ ಮಕ್ಕಳಿಗೆ ನವೆಂಬರ್ ತಿಂಗಳಲ್ಲಿ ಭರ್ಜರಿ ರಜೆ ಇದ್ದು, ಎಂಜಾಯ್ ಮಾಡಬಹುದಾಗಿದೆ.
ಇನ್ನೊಂದೆಡೆ ತೆಲಂಗಾಣದಲ್ಲಿ ಇದೇ ತಿಂಗಳ 6 ರಿಂದ ಮೂರು ವಾರಗಳ ಕಾಲ ಜಾತಿ ಗಣತಿ ನಡೆಸಲು ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಸುಮಾರು 80 ಸಾವಿರ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ.
ಜಾತಿ ಗಣತಿಯಲ್ಲಿ 36,559 ಎಸ್‌ಜಿಟಿಗಳು ಮತ್ತು 3414 ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರನ್ನು ಸಹ ಬಳಸಿಕೊಳ್ಳಲಾಗುತ್ತದೆ. ಈ ಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಅರ್ಧ ದಿನದ ತರಗತಿಗಳನ್ನು ಮಾತ್ರ ನಡೆಸಲು ತೀರ್ಮಾನಿಸಲಾಗಿದೆ.