ನಾಲ್ಕು ದಿನಗಳಿಗೊಮ್ಮೆ ಸ್ನಾನ ಮಾಡೋದಂತೆ ಈ ಕನ್ನಡ ನಟಿ!! ಕಾರಣ ಕೇಳಿದ್ರೆ ಶಾಕ್ ಆಗ್ತೀರಿ
ಬಿಗ್ ಬಾಸ್ ಮನೆಯಿಂದ ಹೊರ ಬಂದಮೇಲೆ ಎಲ್ಲಾ ಕಡೆ ಪ್ರೇರಣಾಗೆ ಭರ್ಜರಿ ವೆಲ್ ಕಂ ಸಿಗುತ್ತಿದೆ. ಇದೀಗ ಪ್ರೇರಣಾ ಹಾಗೂ ಅಕೆಯ ಪತಿ ಶ್ರೀಪಾದ್ ದೇಶಪಾಂಡೆ ತೆಲುಗು ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಶ್ರೀಪಾದ್ ತಮ್ಮ ಪತ್ನಿಯ ಕುರಿತ ಇಂಟರೆಸ್ಟಿಂಗ್ ಸೀಕ್ರೆಟ್‌ವೊಂದನ್ನು ಎಲ್ಲರೆದುರು ರಟ್ಟು ಮಾಡಿದ್ದಾರೆ. ಅಷ್ಟಕ್ಕೂ ಅಲ್ಲಿ ಆಗಿರೋದು ಏನು? ಶ್ರೀಪಾದ್ ತನ್ನ ಹೆಂಡ್ತಿ ಬಗ್ಗೆ ಹೇಳಿದ ಸೀಕ್ರೆಟ್ ಏನು? ಹಾಗೂ ಅದಕ್ಕೆ ಪ್ರೇರಣ ಉತ್ತರ ಹೇಗಿತ್ತು ಅಂತಾ ತಿಳಿಯಿರಿ..
ನಿರೂಪಕಿ ಪ್ರೇರಣಾ ಕುರಿತು ನಿಮಗಿರುವ ಕಂಪ್ಲೇಂಟ್ ಹೇಳುವಂತೆ ಶ್ರೀಪಾದ್ ಬಳಿ ಕೇಳಲಾಗುತ್ತದೆ. ಈ ಪ್ರಶ್ನೆಗೆ ಉತ್ತರಿಸಿದ ಶ್ರೀಪಾದ್, ʼಎಲ್ಲರೂ ಬೆಳಗ್ಗೆ ಎದ್ದ ನಂತರ ಸ್ನಾನ ಮಾಡ್ತಾರೆ. ಸ್ನಾನ ಮಾಡಿದ ನಂತರವಷ್ಟೇ ಹೊರಗಡೆ ಹೋಗ್ತಾರೆ. ಆದರೆ ಇವಳು ಎರಡು ದಿನ, ಮೂರು ದಿನ, ನಾಲ್ಕು ದಿನ ಸ್ನಾನ ಮಾಡದೇ ಇರುತ್ತಾಳೆ ಎಂದಿದ್ದಾರೆ.
ಶ್ರೀಪಾದ್ ಹೇಳಿದ ಉತ್ತರ ಕೇಳಿದ ನಿರೂಪಕಿಗೆ ಶಾಕ್ ಆಗಿದೆ. ಕೂಡಲೇ ನಿರೂಪಕಿ ಪ್ರೇರಣಾಳಿಂದ ಕೊಂಚ ದೂರ ಹೋಗಿ ನಿಂತು ʼಛೀ..ʼ ಎನ್ನುತ್ತಾ, ಇವತ್ತಾದ್ರೂ ಸ್ನಾನ ಮಾಡಿದ್ಯಾ? ಅಂತಾ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪ್ರೇರಣಾ ಹೌದು, ಇಲ್ಲಿ ಬರೋದಕ್ಕೂ ಮುನ್ನ ಸ್ನಾನ ಮಾಡಿದೆ ಎಂದಿದ್ದಾಳೆ. ಇದಕ್ಕೆ ದ್ವನಿಗೂಡಿಸಿದ ಶ್ರೀಪಾದ್, ʼಹೌದು, ಆಕೆ ಸ್ನಾನ ಮಾಡಿರೋದಕ್ಕೆ ಒಟ್ಟಿಗೆ ಇವತ್ತು ಬಂದೆʼ ಎಂದಿದ್ದಾರೆ.
ನಿರೂಪಕಿಯ ಪ್ರಶ್ನೆಗೆ ಉತ್ತರಿಸಿದ ಪ್ರೇರಣಾ, ʼನಾನು ಕೆಲಸಕ್ಕೆ ಹೋಗದಿದ್ದರೆ ಮನೆಯಲ್ಲಿಯೇ ಕುಳಿತುಕೊಳ್ಳುತ್ತೇನೆ. ಮನೆಯಲ್ಲಿ ಇರೋದು ಅಂದ್ರೆ ರಿಲ್ಯಾಕ್ಸ್ ಆಗಿ ಇರೋದು. ರಿಲ್ಯಾಕ್ಸ್ ಆಗಿರೋದಕ್ಕೆ ಸ್ನಾನ ಯಾಕೆ ಮಾಡಬೇಕು. ನೀರನ್ನು ಉಳಿಸಬೇಕು. ನಾವು ಇಂಡಿಪೆಂಡೆಂಟ್ ಮನೆಯಲ್ಲಿ ಇದ್ದೀವಿ, ಹೀಗಾಗಿ ನಮ್ಮ ಫ್ಯಾಮಿಲಿಗಾಗಿ ನಾನು ನೀರನ್ನು ಉಳಿಸುತ್ತಿದ್ದೇನೆʼ ಎಂದು ಹೇಳಿದ್ದಾರೆ.
ಪ್ರೇರಣಾಳ ಮಾತಿಗೆ ಪ್ರತಿಕ್ರಿಯಿಸಿದ ಶ್ರೀಪಾದ್, ʼನಾನು ನಿನ್ನ ಹತ್ತಿರ ಬರಬೇಕು ಅಂದ್ರೆ ನೀನು ಸ್ನಾನ ಮಾಡಬೇಕು ಅಂದಿದ್ದಾರೆ. ನಾನು ಸ್ನಾನ ಮಾಡದೇ ಇದ್ರೂ ನೀನು ಹತ್ತಿರ ಬರ್ತಿಯಲ್ವಾ ಶ್ರೀಪಾದ್ ಅಂತಾ ಪ್ರೇರಣಾ ಕಿಚಾಯಿಸಿದ್ದಾರೆ. ಮದುವೆ ಆಗಿದೆ ಅಲ್ವಾ? ಇನ್ನೇನು ಮಾಡಕ್ಕಾಗುತ್ತೆ ಅಂತಾ ಪ್ರೇರಣಾರನ್ನು ಗಟ್ಟಿಯಾಗಿ ಹಿಡಿದು ಶ್ರೀಪಾದ್ ತಮಾಷೆ ಮಾಡಿದ್ದಾರೆ.