ಅಂಜೂರ ಸೇವನೆಯಿಂದ ಆರೋಗ್ಯಕ್ಕಿದೆ 10 ಅದ್ಭುತ ಪ್ರಯೋಜನ
ಆಯುರ್ವೇದದಲ್ಲಿ ಅಂಜೂರವನ್ನು ಶೀತ ಔಷಧೀಯ ಹಣ್ಣು ಎಂದು ಹೇಳಲಾಗುತ್ತದೆ. ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಅಂಜೂರ ಹಣ್ಣಿನಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂದು ತಿಳಿಯೋಣ...
ಅಂಜೂರ ಹಣ್ಣಿನ ನಿಯಮಿತ ಸೇವನೆಯು ದೈಹಿಕ ದೌರ್ಬಲ್ಯವನ್ನು ನಿವಾರಿಸಿ ದೇಹವನ್ನು ಸದೃಢವಾಗಿರಿಸುವಲ್ಲಿ ಪ್ರಯೋಜನಕಾರಿ ಆಗಿದೆ.
ಆಯುರ್ವೇದ ತಜ್ಞರ ಪ್ರಕಾರ, ಅಂಜೂರವನ್ನು ಹಾಲಿನಲ್ಲಿ ಬೆರೆಸಿ ಸೇವಿಸುವುದರಿಂದ ಇದು ದೈಹಿಕ ದೌರ್ಬಲ್ಯವನ್ನು ತೊಡೆದುಹಾಕುವುದರ ಜೊತೆಗೆ ನರಗಳನ್ನು ಬಳಪಡಿಸುವಲ್ಲಿಯೂ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.
ಹಾಲಿನೊಂದಿಗೆ ಮಾಗಿದ ಅಂಜೂರದ ಹಣ್ಣನ್ನು ಬೆರೆಸಿ ಸೇವಿಸುವುದರಿಂದ ಲೈಂಗಿಕ ಶಕ್ತಿ ವೃದ್ಧಿಯಾಗುತ್ತದೆ.
ಅಂಜೂರವು ಕಡಿಮೆ ರಕ್ತದೊತ್ತಡವನ್ನು ನಿಯಂತ್ರಿಸುವ ಮೂಲಕ ಹೃದಯದ ರಕ್ತದೊತ್ತಡವನ್ನು ನಿಯಂತ್ರಿಸುವ ಅಂಶಗಳನ್ನು ಒಳಗೊಂಡಿದೆ ಎಂದು ಹೇಳಲಾಗುತ್ತದೆ.
ಕೆಲವೊಮ್ಮೆ ನಾವು ಇದ್ದಕ್ಕಿದ್ದಂತೆ ಉದ್ವೇಗಕ್ಕೆ ಒಳಗಾಗುತ್ತೇವೆ. ಇಂತಹ ಸಂದರ್ಭದಲ್ಲಿ, ಹಾಲಿನೊಂದಿಗೆ ಅಂಜೂರದ ಹಣ್ಣುಗಳನ್ನು ಸೇವಿಸುವುದರಿಂದ ಪರಿಹಾರ ಅಥವಾ ಬಹಳಷ್ಟು ಪ್ರಯೋಜನಗಳನ್ನು ನೀಡುತ್ತದೆ ಎನ್ನಲಾಗುತ್ತದೆ.
ಅಂಜೂರದ ಹಣ್ಣುಗಳ ಸೇವನೆಯು ದೇಹಕ್ಕೆ ಚೈತನ್ಯವನ್ನು ತುಂಬುತ್ತದೆ ಎನ್ನಲಾಗುತ್ತದೆ.
ನೀವು ಸದಾ ದಣಿದ ಭಾವನೆ ಅನುಭವಿಸುತ್ತಿದ್ದರೆ, ಸ್ವಲ್ಪ ದೂರ ನಡೆದರೂ, ಸಣ್ಣ-ಪುಟ್ಟ ಕೆಲಸ ಮಾಡಿದಾಗ ಸುಸ್ತಿನ ಭಾವನೆಯನ್ನು ಅನುಭವಿಸುತ್ತಿದ್ದರೆ ಅಂತಹ ಸಂದರ್ಭದಲ್ಲಿ ಅಂಜೂರದ ಹಣ್ಣಿನ ಸೇವನೆ ನಿಮಗೆ ಪ್ರಯೋಜನಕಾರಿ ಆಗಲಿದೆ.
ಹೊಟ್ಟೆ ಉಬ್ಬರ, ಹೊಟ್ಟೆ ನೋವು ಸೇರಿದಂತೆ ಯಾವುದೇ ರೀತಿಯ ಉದರ ಸಂಬಂಧಿತ ಸಮಸ್ಯೆಗಳಿಂದ ಪರಿಹಾರ ಪಡೆಯಲು ಅಂಜೂರದ ಹಣ್ಣನ್ನು ರಾಮಬಾಣವಿದ್ದಂತೆ ಎಂದು ಹೇಳಲಾಗುತ್ತದೆ.
ನೀವು ತೂಕ ಇಳಿಕೆಗಾಗಿ ಪ್ರಯತ್ನಿಸುತ್ತಿದ್ದರೆ, ಅಂಜೂರದ ಹಣ್ಣು ನಿಮಗೆ ದಿವ್ಯೌಷಧ ಎಂದು ಸಾಬೀತು ಪಡಿಸಲಿದೆ.
ಅಂಜೂರ ಹಣ್ಣಿನ ಸೇವನೆಯು ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.