ಎಲಾನ್ ಮಸ್ಕ್ ತನ್ನ ಮಗನಿಗೆ ಇಟ್ಟಿದ್ದು ಭಾರತದ ಈ ಖ್ಯಾತ ವಿಜ್ಞಾನಿಯ ಹೆಸರನ್ನು! ಆ ಹೆಸರೇನು? ವಿಜ್ಞಾನಿ ಯಾರು ಗೊತ್ತಾ?
ಟೆಸ್ಲಾ ಸಿಇಒ ಎಲೋನ್ ಮಸ್ಕ್ ತಮ್ಮ ಮಗನ ಹೆಸರಿನ ಜೊತೆ ಭಾರತದ ಖ್ಯಾತ ವಿಜ್ಞಾನಿಯ ಹೆಸರನ್ನು ಇಟ್ಟಿದ್ದಾರೆ. ಆ ಹೆಸರೇನು? ಆ ವಿಜ್ಞಾನಿ ಯಾರೆಂಬುದನ್ನು ಮುಂದೆ ತಿಳಿಯೋಣ.
ಒಂದೊಮ್ಮೆ ರಾಜೀವ್ ಚಂದ್ರಶೇಖರ್ ಅವರು ಟ್ವೀಟ್ ಮೂಲಕ ಹೀಗೆ ಬರೆದುಕೊಂಡಿದ್ದರು. “ಯುಕೆಯ ಬ್ಲೆಟ್ಚ್ಲಿ ಪಾರ್ಕ್’ನಲ್ಲಿ ನಡೆದ ಎಐ ಸೇಫ್ಟಿ ಸಮ್ಮಿಟ್’ಗೆ ನಾನು ಯಾರೊಂದಿಗೆ ಬಂದಿದ್ದೇನೆ ನೋಡಿ. ಎಲಾನ್ ಮಸ್ಕ್ ಅವರು ತಮ್ಮ ಮಗನ ಹೆಸರಿನಲ್ಲಿ "ಚಂದ್ರಶೇಖರ್" ಎಂಬ ಹೆಸರನ್ನು ಸೇರಿಸಿದ್ದಾರೆ. ಅದು 1983 ರ ನೊಬೆಲ್ ಭೌತಶಾಸ್ತ್ರಜ್ಞ ಪ್ರೊ.ಎಸ್ ಚಂದ್ರಶೇಖರ್ ಅವರ ಹೆಸರಾಗಿದೆ" ಎಂದು ಟ್ವೀಟ್ ಮಾಡಿದ್ದರು.
ಎಲೋನ್ ಮಸ್ಕ್ ಮತ್ತು ಶಿವೋನ್ ಜಿಲಿಸ್ ಅವರ ಮಗನ ಮಧ್ಯದ ಹೆಸರು ಚಂದ್ರಶೇಖರ್. ಶಿವೋನ್ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯಲ್ಲಿ ಪರಿಣತಿ ಹೊಂದಿರುವ ಕೆನಡಾದ ಸಾಹಸೋದ್ಯಮ ಬಂಡವಾಳಗಾರ.
ರಾಜೀವ್ ಚಂದ್ರಶೇಖರ್ ಅವರ ಟ್ವೀಟ್’ಗೆ ಪ್ರತಿಕ್ರಿಯಿಸಿದ ಶಿವೋನ್ ಜಿಲಿಸ್ ಅವರು ಟ್ವೀಟ್ ಮಾಡಿದ್ದಾರೆ: “ಹಹ್ಹ ಹೌದು, ಅದು ನಿಜ. ನಾವು ಅವರನ್ನು ಸಂಕ್ಷಿಪ್ತವಾಗಿ ಶೇಖರ್ ಎಂದು ಕರೆಯುತ್ತೇವೆ. ನಮ್ಮ ಮಗನಿಗೆ ಸುಬ್ರಹ್ಮಣ್ಯನ್ ಚಂದ್ರಶೇಖರ್ ಅವರ ಗೌರವಾರ್ಥವಾಗಿ ಆ ಹೆಸರನ್ನು ಇಟ್ಟಿದ್ದೇವೆ” ಎಂದಿದ್ದಾರೆ.
1983ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಸುಬ್ರಹ್ಮಣ್ಯನ್ ಚಂದ್ರಶೇಖರ್ ಅವರಿಗೆ "ನಕ್ಷತ್ರಗಳ ರಚನೆ ಮತ್ತು ವಿಕಸನಕ್ಕೆ ಪ್ರಾಮುಖ್ಯತೆಯ ಭೌತಿಕ ಪ್ರಕ್ರಿಯೆಗಳ ಸೈದ್ಧಾಂತಿಕ ಅಧ್ಯಯನಕ್ಕಾಗಿ" ನೀಡಲಾಯಿತು.