ಪದೇ ಪದೇ ಗರ್ಭಪಾತವಾಗುತ್ತಿದ್ದರೆ ಈ ಮೂರು ರೀತಿಯ ಬ್ಲಡ್ ಟೆಸ್ಟ್ ಮಾಡಿಸಿದರೆ ತಿಳಿಯುತ್ತದೆ ಕಾರಣ

Wed, 25 May 2022-1:59 pm,

 ಗರ್ಭಪಾತಕ್ಕೆ ಹಲವು ಕಾರಣಗಳಿರಬಹುದು. ಅದಕ್ಕಾಗಿ ಗರ್ಭಪಾತದ ನಂತರ ಮಹಿಳೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಮಹಿಳೆಯು ಪದೇ ಪದೇ ಗರ್ಭಪಾತದ ಸಮಸ್ಯೆ ಗಳನ್ನು ಎದುರಿಸುತ್ತಿದ್ದರೆ,  ಮುಂದಿನ ಗರ್ಭಧಾರಣೆಯನ್ನು ಯೋಜಿಸುವ ಮೊದಲು ಥೈರಾಯ್ಡ್ ಪರೀಕ್ಷೆ, ಸಕ್ಕರೆ ಪರೀಕ್ಷೆ ಮತ್ತು HbA1c ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಈ ಪರೀಕ್ಷೆಗಳು ಮಹಿಳೆಯ ದೇಹದಲ್ಲಿ ಥೈರಾಯ್ಡ್ ಮತ್ತು ಸಕ್ಕರೆಯ ಮಟ್ಟವು ಸಾಮಾನ್ಯವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿದು ಕೊಳ್ಳಲು ಸಹಾಯ ಮಾಡುತ್ತದೆ.  ಇಲ್ಲಿ ಸಮಸ್ಯೆಗಳು ಕಂಡು ಬಂದಲ್ಲಿ ಅದನ್ನು ಸಾಮಾನ್ಯವಾಗಿಡಲು ವೈದ್ಯರು  ಔಷಧಿಯನ್ನು ಸೂಚಿಸುತ್ತಾರೆ. ಇದಲ್ಲದೆ, ಮಹಿಳೆಯು ಗರ್ಭಧರಿಸುವ ಮೊದಲು ಕನಿಷ್ಠ 2-3 ವಾರಗಳ ಮೊದಲು ಫೋಲಿಕ್ ಆಸಿಡ್ ತೆಗೆದುಕೊಳ್ಳಲು ಪ್ರಾರಂಭಿಸಬೇಕು.

ಗರ್ಭಧರಿಸಿದ ನಂತರ ಮತ್ತೆ ರಕ್ತ ಸ್ತ್ರಾವ ಅಥವಾ ಪೀರಿಯೇಡ್ಸ್ ಕಾಣಿಸಿಕೊಂಡರೆ   ಬ್ಲೀಡಿಂಗ್ ನಿಂತ ನಂತರ  ವೈದ್ಯರು ಸೂಚಿಸಿದ ಸಮಯದಲ್ಲಿ ಅಲ್ಟ್ರಾಸೌಂಡ್ ಮಾಡಿಸಬೇಕು . ಈ ಅಲ್ಟ್ರಾಸೌಂಡ್ನಲ್ಲಿ, ಗರ್ಭಾಶಯವು ಸಂಪೂರ್ಣವಾಗಿ ತೆರವುಗೊಂಡಿದೆಯೇ ಅಥವಾ ಇಲ್ಲವೇ ಎಂಬುದನ್ನು ವೈದ್ಯರು ನೋಡುತ್ತಾರೆ. ಗರ್ಭಾಶಯದಲ್ಲಿ ಯಾವುದೇ ರೀತಿಯ ರಕ್ತ ಹೆಪ್ಪುಗಟ್ಟುವಿಕೆ ಕಂಡುಬಂದರೆ, ಅದನ್ನು ಸಾಧ್ಯವಾದಷ್ಟು ಬೇಗ ಹೊರಹಾಕುವುದು ಬಹಳ ಮುಖ್ಯವಾಗಿರುತ್ತದೆ. ಇದಕ್ಕಾಗಿ, ವೈದ್ಯರು ಔಷಧಿಯನ್ನು ಸಹ ಸೂಚಿಸಬಹುದು ಮತ್ತು ಗರ್ಭಾಶಯವನ್ನು ಬೇರೆ ರೀತಿಯಲ್ಲಿ ಸ್ವಚ್ಛಗೊಳಿಸಬಹುದು.

ಗರ್ಭಪಾತದ ನಂತರ, ಮಹಿಳೆ ಮತ್ತೆ ಗರ್ಭಿಣಿಯಾಗಲು ಕನಿಷ್ಠ 3 ತಿಂಗಳು ಕಾಯಬೇಕು ಎಂದು ವೈದ್ಯರು ಹೇಳುತ್ತಾರೆ. ಈ ಸಮಯವು ಹಾರ್ಮೋನುಗಳನ್ನು ಸಾಮಾನ್ಯ ಸ್ಥಿತಿಗೆ ತರಲು ಮತ್ತು ಗರ್ಭಧಾರಣೆಗಾಗಿ ದೇಹವನ್ನು ಮತ್ತೆ ತಯಾರಿಸಲು ಸಾಕು. ಆದರೆ ಈ ತಿಂಗಳುಗಳಲ್ಲಿ, ವೈದ್ಯರ ಸಲಹೆಯ ಮೇರೆಗೆ, ಮಹಿಳೆಯು ಮುಂದಿನ ಗರ್ಭಾವಸ್ಥೆಯಲ್ಲಿ ಗರ್ಭಪಾತಕವಾಗದಿರುವುದಕ್ಕೆ ಅಗತ್ಯವಿರುವ ಎಲ್ಲಾ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು. ಇದರೊಂದಿಗೆ, ಫೋಲಿಕ್ ಆಮ್ಲವನ್ನು ಸಹ ಪ್ರಾರಂಭಿಸಬೇಕು.

ಸೂಚನೆ: ಇಲ್ಲಿ ನೀಡಲಾದ  ಮಾಹಿತಿಯನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link