Thackeray to Thalaivii: ಬಾಲಿವುಡ್ ನಿರ್ಮಿಸಿದ ಟಾಪ್ 5 ರಾಜಕೀಯ ಜೀವನಾಧರಿತ ಚಿತ್ರಗಳು
ಮಹಾರಾಷ್ಟ್ರದ ಮಹಾನ್ ರಾಜಕಾರಣಿ, ಶಿವಸೇನಾ ಸಂಸ್ಥಾಪಕ ಅಧ್ಯಕ್ಷ ಬಾಳಾಸಾಹೇಬ್ ಠಾಕ್ರೆ ಅವರ ಜೀವನಾಧಾರಿತ ಚಿತ್ರವನ್ನು ತೆರೆಮೇಲೆ ತರಲಾಗಿತ್ತು. ‘ಠಾಕ್ರೆ’ ಹೆಸರಿನ ಈ ಚಿತ್ರಕ್ಕೆ ಅಭಿಜಿತ್ ಪನ್ಸೆ ಆಕ್ಷನ್ ಕಟ್ ಹೇಳಿದ್ದರು. ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಠಾಕ್ರೆ ಪಾತ್ರದಲ್ಲಿಅದ್ಭುತವಾಗಿ ನಟಿಸಿದ್ದರು.
2004ರಿಂದ 2008ರವರೆಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಮಾಧ್ಯಮ ಸಲಹೆಗಾರರಾಗಿದ್ದ ಸಂಜಯ್ ಬಾರು ಪುಸ್ತಕವನ್ನಾಧರಿಸಿ ‘ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ (ಆಕಸ್ಮಿಕ ಪ್ರಧಾನಿ) ಸಿನಿಮಾವನ್ನು ತೆರೆಮೇಲೆ ತರಲಾಗಿತ್ತು. ವಿಜಯ್ ಗುಟ್ಟೆ ನಿರ್ದೇಶನದ ಈ ಚಿತ್ರದಲ್ಲಿ ಹಿರಿಯ ನಟ ಅನುಪಮ್ ಖೇರ್ ಅವರು ಡಾ.ಮನಮೋಹನ್ ಸಿಂಗ್ ಪಾತ್ರದಲ್ಲಿ ನಟಿಸಿದ್ದರು.
2019ರ ಮಾರ್ಚ್‌ನಲ್ಲಿ ‘ಪಿಎಂ ನರೇಂದ್ರ ಮೋದಿ’ ಸಿನಿಮಾ ಬಿಡುಗಡೆ ಆಗಿತ್ತು. ಪ್ರಧಾನಿ ಮೋದಿಯವರ ಬಯೋಪಿಕ್ ಆಗಿ ಮೂಡಿಬಂದ ಈ ಚಿತ್ರವನ್ನು ಖ್ಯಾತ ನಿರ್ದೇಶಕ ಓಮಂಗ್ ಕುಮಾರ್ ನಿರ್ದೇಶಿಸಿದ್ದರು. ಮೋದಿ ಪಾತ್ರವನ್ನು ವಿವೇಕ್ ಓಬೆರಾಯ್ ನಿಭಾಯಿಸಿದ್ದರು.
ಖುಷ್ಬೂ ರಾಂಕಾ ಮತ್ತು ವಿನಯ್ ಶುಕ್ಲಾ ನಿರ್ಮಿಸಿದ ಈ ಸಾಕ್ಷ್ಯಚಿತ್ರವು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಜೀವನ ಮತ್ತು ಹೋರಾಟವನ್ನು ಒಳಗೊಂಡಿದೆ.
ಎ.ಎಲ್.ವಿಜಯ್ ನಿರ್ದೇಶನದ ‘ತೈಲವಿ’ ಚಿತ್ರದಲ್ಲಿ ಬಾಲಿವುಡ್ ಖ್ಯಾತ ನಟಿ ಕಂಗನಾ ರಣಾವತ್ ಅವರು ತಮಿಳುನಾಡು ಮಾಜಿ ಸಿಎಂ ಜೆ.ಜಯಲಲಿತಾ ಪಾತ್ರದಲ್ಲಿ ಅಭಿನಯಿಸಿದ್ದಾರೆ.