ಸಿನಿಮಾ ಬಿಟ್ಟು ರಾಜಕೀಯಕ್ಕೆ ಬರುತ್ತಲೇ ಕಾರು ಮಾರಾಟಕ್ಕಿಟ್ಟ ಸ್ಟಾರ್ ನಟ..! ಚಿತ್ರರಂಗ ಬಿಟ್ಟು ತಪ್ಪು ಮಾಡಿದ್ರಾ..?
ರಜನಿಕಾಂತ್ ನಂತರ ತಮಿಳು ಸಿನಿರಂಗದಲ್ಲಿ ಆ ರೇಂಜ್ ಮಾರ್ಕೆಟ್ ಹೊಂದಿರುವ ಹೀರೋ ಅಂದ್ರೆ ದಳಪತಿ ವಿಜಯ್... ಬೇರೆ ಭಾಷೆಯಲ್ಲಿಯೂ ಸಹ ಬಿಡುಗಡೆಯಾಗುವ ನಟನ ಸಿನಿಮಾಗಳು ಉತ್ತಮ ಪ್ರದರ್ಶನ ಪಡೆಯುತ್ತವೆ..
ತಮಿಳುನಾಡು ಅಷ್ಟೇ ಅಲ್ಲ, ಅವರ ಸಿನಿಮಾ ರಿಲೀಸ್ ಆಗುವ ದಿನ ಬೆಂಗಳೂರಿನಂತ ದೊಡ್ಡ ನಗರದಲ್ಲಿ ಹಬ್ಬದ ವಾತಾವರಣ ಇರುತ್ತದೆ.. ಬಿಡುಗಡೆಯಾದ ದಿನದಿಂದಲೇ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಸೃಷ್ಟಿಯಾಗುತ್ತದೆ... ವಿಜಯ್ ಸಿನಿಮಾಗೆ ಅಷ್ಟು ಕ್ರೇಜ್ ಇದೆ.
ಡಿಸಾಸ್ಟರ್ ಟಾಕ್ ಪಡೆದ ‘ಬೀಸ್ಟ್’ ಸಿನಿಮಾ ಸಹ ಎರಡೂವರೆ ಕೋಟಿ ಗಳಿಕೆ ಕಂಡಿತ್ತು ಅಂದ್ರೆ ದಳಪತಿ ಕ್ರೇಜ್ ಎಷ್ಟಿದೆ ಅಂತ ಅರ್ಥಮಾಡಕೊಳ್ಳಿ.. ಕಳೆದ ವರ್ಷ ದಸರಾಗೆ ಬಿಡುಗಡೆಯಾದ 'ಲಿಯೋ' ಚಿತ್ರ 600 ಕೋಟಿ ಕಲೆಕ್ಷನ್ ಮಾಡಿತ್ತು.
ಇದೇ ವೇಳೆ.. ವಿಜಯ್ ದಳಪತಿ ಹೊಸ ರಾಜಕೀಯ ಪಕ್ಷ ಆರಂಭಿಸಿರುವುದು ಗೊತ್ತೇ ಇದೆ. ಎರಡು ಸಿನಿಮಾ ಮಾಡಿದ ನಂತರ ಸಂಪೂರ್ಣವಾಗಿ ರಾಜಕೀಯಕ್ಕೆ ಸೀಮಿತವಾಗುವುದಾಗಿ ಘೋಷಿಸಿದರು.
ಇದೇ ವೇಳೆ, ಈ ನಟ ಪ್ರೀತಿಯಿಂದ ಖರೀದಿಸಿದ್ದ ರೋಲ್ಸ್ ರಾಯ್ಸ್ ಕಾರನ್ನು ಮಾರಾಟಕ್ಕೆ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಇದಲ್ಲದೆ, ಎಂಪೈರ್ ಆಟೋಸ್ ಕಾರ್ ಡೀಲರ್‌ಶಿಪ್ ಈ ಕಾರನ್ನು ಸರಿಸುಮಾರು ರೂ.2.6 ಕೋಟಿಗೆ ಮಾರಾಟ ಮಾಡುವುದಾಗಿ ವೀಡಿಯೊವನ್ನು ಬಿಡುಗಡೆ ಮಾಡಿದೆ.
ವಿಜಯ್ ತಮ್ಮ ಪಕ್ಷವನ್ನು ನಡೆಸಲು ಕಾರನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಅನೇಕ ನೆಟಿಜನ್‌ಗಳು ಕಾಮೆಂಟ್ ಮಾಡುತ್ತಿದ್ದಾರೆ. ಮತ್ತೊಂದೆಡೆ, ಅವರು ಪ್ರತಿ ಚಿತ್ರಕ್ಕೆ 100 ಕೋಟಿಗೂ ಹೆಚ್ಚು ತೆಗೆದುಕೊಳ್ಳುತ್ತಿದ್ದಾರೆ. ಆಸ್ತಿ ನೋಡಿದರೆ 500 ಕೋಟಿಗೂ ಅಧಿಕ.. ಹಾಗಾದರೆ ಕಾರು ಮಾರುವ ಪರಿಸ್ಥಿತಿ ಏನು? ಅಂತ ಪ್ರಶ್ನೆ ಮಾಡುತ್ತಿದ್ದಾರೆ..
ಸದ್ಯ ವಿಜಯ್ 'ಗೋಟ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ವೆಂಕಟ್ ಪ್ರಭು ನಿರ್ದೇಶನದ ಈ ಚಿತ್ರದಲ್ಲಿ ವಿಜಯ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.. ಇದರೊಂದಿಗೆ ವೆಟ್ರೀಮಾರನ್ ಜೊತೆಯೂ ದಳಪತಿ ಸಿನಿಮಾ ಮಾಡುವ ಮಾತು ಕೇಳಿಬರುತ್ತಿದೆ.. ಮುಂದೆನಾಗುತ್ತೆ ಅಂತ ಕಾಯ್ದು ನೋಡಬೇಕಿದೆ..