ಲೈವ್‌ ಶೋನಲ್ಲಿ ವರ್ತೂರ್‌ ಸಂತೋಷ್‌ಗೆ ಪ್ರಪೋಸ್‌ ಮಾಡಿದ ತನಿಷಾ ಕುಪ್ಪಂಡ!! ಶೀಘ್ರವೇ ಹಸೆಮಣೆ ಏರಲಿದ್ದಾರೆ ಬಿಗ್‌ಬಾಸ್‌ ಜೋಡಿ..?!

Mon, 28 Oct 2024-8:31 am,

Varthur Santhosh Tanisha Kuppanda: ಬಿಗ್‌ಬಾಸ್‌ ಸೀಸನ್‌ 10ರ ವೈರಲ್‌ ಜೋಡಿ ಹಕ್ಕಿ ತನಿಷಾ ಕುಪ್ಪಂಡ ಅವರು ಸಂದರ್ಶನವೊಂದರಲ್ಲಿ ವರ್ತೂರ್‌ ಸಂತೋಷ್‌ ಅವರಿಗೆ ಐ ಲವ್‌ ಯು ಎಂದಿದ್ದಾರೆ, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.  

ತನಿಷಾ ಕುಪ್ಪಂಡ ಹಾಗೂ ವರ್ತೂರ್‌ ಸಂತೋಷ್‌ ಜೋಡಿ, ಬಿಗ್‌ ಬಾಸ್‌ ಇತಿಹಾಸದಲ್ಲಿ ಹೆಚ್ಚು ಸದ್ದು ಮಾಡಿದ ಜೋಡಿಗಳಲ್ಲಿ ಒಂದು. ಈ ಜೋಡಿಗಂತಲೇ ಸೆಪೆರೇಟ್‌ ಫ್ಯಾನ್‌ ಬೇಸ್‌ ಕೂಡ ಇದೆ.   

ಬಿಗ್‌ಬಾಸ್‌ 10ರ ಮನೆಯಲ್ಲಿದ್ದ ಈ ಜೋಡಿ ಸ್ಪರ್ಧಿಗಳ ನಡುವೆ ಉತ್ತಮ ಸ್ನೇಹವಿತ್ತು, ಈ ಕ್ಯೂಟ್‌ ಜೋಡಿಯನ್ನು ನೋಡಿ ಪ್ರೇಕ್ಷಕರು ಮನಸೋತಿದ್ದರು. ಇವರಿಬ್ಬರು ಮದುವೆಯಾದರೆ ಚೆನ್ನಾಗಿರುತ್ತೆ ಅಂತ ಹಲವರು ಅಂದುಕೊಂಡಿದ್ದರು.   

ಬಿಗ್‌ಬಾಸ್‌ ಮನೆಯಲ್ಲಿ ಅರಳುವ ಇಂತಹ ಸ್ನೇಹ ಹೆಚ್ಚು ಕಾಲ ಉಳಿಯುವುದಿಲ್ಲ ಎನ್ನುವುದು ಪ್ರೇಕ್ಷಕರ ಭಾವನೆ, ಏಕೆಂದರೆ ಬಿಗ್‌ಬಾಸ್‌ ಮನೆಯಲ್ಲಿ ಜೋಡಿಯಾಗಿ ನಟಿಸುವವರು, ಮನೆಯಿಂದ ಹೊರಬರುತ್ತಿದ್ದಂತೆ ಒಬ್ಬರಿಗೊಬ್ಬರು ಗುರುತು ಪರಿಚಯವಿರದಂತೆ ನಟಿಸುತ್ತಾರೆ, ಆದರೆ ಈ ಜೋಡಿ ಮಾತ್ರ ಬಿಗ್‌ಬಾಸ್‌ ಮೆನಯೊಳಗೆ ಎಷ್ಟು ಅನ್ಯೂನ್ಯವಾಗಿದ್ದರೋ, ಮನೆಯಿಂದ ಹೊರಬಂದ ನಂತರವೂ ಕೂಡ ಅಷ್ಟೆ ಅನ್ಯೂನ್ಯವಾಗಿದ್ದಾರೆ.  

ಈ ಜೋಡಿ ಬಿಗ್‌ಬಾಸ್‌ ಮನೆಯಿಂದ ಹೊರಬಂದಾಗಿನಿಂದಲೂ ಹಲವಾರು ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ, ಟಿವಿ ಶೋಗಳಷ್ಟೆ ಅಲ್ಲ, ಮದುವೆ ಮುಂಜಿ ನಾಮಕಾರಣ ಅಂತ ಇವರಿಬ್ಬರು ಜೋಡಿಯಾಗಿ ಎಲ್ಲಾ ಸಮಾರಂಭಗಳಲ್ಲಿಯೂ ಭಾಗವಹಿಸುತ್ತಿದ್ದಾರೆ.  

ಇದನ್ನು ನೋಡಿದ ಅಭಿಮಾನಿಗಳು ನಿಮ್ಮಿಬ್ಬರ ಮದುವೆ ಯಾವಾಗ ಎನ್ನು ಪ್ರಶ್ನೆ ಕೇಳು ಆರಂಭಿಸಿದ್ದಾರೆ, ಇದರ ಮಧ್ಯೆ ತನಿಷಾ ಕುಪ್ಪಂಡ, ವರ್ತೂರ್‌ ಸಂತೋಷ್‌ ಅವರಿಗೆ ಪ್ರಪೋಸ್‌ ಮಾಡಿದ್ದು, ಸದ್ಯ ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.   

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಪಾಲ್ಗೊಂಡಿದ್ದ ತನಿಷಾ ಕುಪ್ಪಂಡ ಅವರು ವರ್ತೂರ್‌ ಸಂತೋಷ್‌ಗೆ ಫೋನ್‌ ಮಾಡಿ ನಾನು ನಿನಗೆ ಐ ಲವ್‌ ಯೂ ಅಂತಾ ಹೇಳಿದ್ರೆ ಏನು ಮಾಡುತ್ತೀಯಾ ಅಂತಾ ಕೇಳಿದ್ದಾರೆ.    

ತನಿಷಾ ಫೋನ್‌ ಮಾಡುತ್ತಿದ್ದಂತೆ ಹೇಳು ಬೆಂಕಿ ಎಂದು ಉತ್ತರಿಸಿದ ವರ್ತೂರ್‌ ಸಂತೋಷ್‌, ತನಿಷಾ ಕುಪ್ಪಂಡ ಐ ಲವ್‌ ಯು ಅಂದರೆ ಏನು ಮಾಡುತ್ತೀಯಾ ಎಂದು ಹೇಳುತ್ತಿದ್ದಂತೆ, ಅದರಲ್ಲೇನಿದೆ, ಫ್ರೆಂಡ್ಸ್‌ ಒಬ್ಬರಿಗೊಬ್ಬರು ಐ ಲವ್‌ ಯೂ ಹೇಳುವುದರಲ್ಲಿ ತಪ್ಪೇನಿದೆ ಎಂದಿದ್ದಾರೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link