ಆ ಒಂದು ಕಿಸ್ ಗಾಗಿ 37 ಶಾಟ್ ತೆಗೆದುಕೊಂಡಿದ್ದ ಆ ನಟಿ..! 38 ಕ್ಕೆ ಏನಾಯ್ತು ಗೊತ್ತಾ?
ಬಾಲಿವುಡ್ ನಲ್ಲಿ ಬೇಡಿಕೆ ನಟನೊಬ್ಬ ಚಿತ್ರದಲ್ಲಿನ ಕಿಸ್ ಸೀನ್ ಗಾಗಿ ಬರೋಬ್ಬರಿ 37 ಶಾಟ್ ಗಳನ್ನು ತೆಗೆದುಕೊಳ್ಳಬೇಕಾಗಿತ್ತು ಎಂದು ಹೇಳಿದ್ದಾರೆ. ಅಷ್ಟಕ್ಕೂ ಇದಕ್ಕೆ ಮುಖ್ಯ ಕಾರಣ ನಟಿಯೇ ಎಂದು ಅವರು ದೂರಿದ್ದಾರೆ.
ಹೌದು, ಈಗ ನಾವು ಹೇಳುತ್ತಿರುವುದು ಬೇರೆಯಾರೂ ಇಲ್ಲ ಬಾಲಿವುಡ್ ನ ಚಾಕಲೇಟ್ ಬಾಯ್ ಎಂದೇ ಖ್ಯಾತ್ಯರಾದ ಕಾರ್ತಿಕ್ ಆರ್ಯನ್ ಬಗ್ಗೆ.
2014 ರ ಚಲನಚಿತ್ರ 'ಕಾಂಚಿ: ದಿ ಅನ್ಬ್ರೇಕಬಲ್' ನಲ್ಲಿ ಮಿಶ್ತಿ ಚಕ್ರವರ್ತಿ ಜೊತೆ ಕಾರ್ತಿಕ್ ಆರ್ಯನ್ ಲವರ್ ಬಾಯ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಸುಭಾಷ್ ಘಾಯ್ ನಿರ್ದೇಶಿಸಿದ್ದಾರೆ.
ಈ ಚಿತ್ರದಲ್ಲಿನ ಚುಂಬನದ ದೃಶ್ಯದ ಬಗ್ಗೆ ಮಾತನಾಡಿದ್ದಾರೆ. ಈ ಚುಂಬನದ ದೃಶ್ಯ ಇಷ್ಟೊಂದು ತಲೆನೋವಾಗಿ ಪರಿಣಮಿಸುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ ಎಂದರು.
ಆ ದಿನ ನಾವು ಪ್ರೇಮಿಗಳಂತೆ ವರ್ತಿಸುತ್ತಿದ್ದೆವು. ಒಂದು ದೃಶ್ಯವನ್ನು ಸರಿಯಾಗಿ ಪಡೆಯಲು ನಾವು 37 ರೀಟೇಕ್‌ಗಳನ್ನು ಮಾಡಬೇಕಾಗಿತ್ತು. ಕೊನೆಗೆ ಸುಭಾಷ್ ಜಿ ಬಂದು ‘ಓಕೆ ಎಂದು ಹೇಳಿದಾಗ ನಮಗೆ ತುಂಬಾ ಸಮಾಧಾನವಾಯಿತು.
ಅದೇ ಸಂದರ್ಶನದಲ್ಲಿ ಕಾರ್ತಿಕ್, 'ಮಿಶ್ತಿ ಆ ಸಮಯದಲ್ಲಿ ಉದ್ದೇಶಪೂರ್ವಕವಾಗಿ ತಪ್ಪುಗಳನ್ನು ಮಾಡುತ್ತಿರುವ ಸಾಧ್ಯತೆಯಿದೆ. ಸುಭಾಷ್ ಘಾಯ್ ಅವರು ಭಾವೋದ್ರಿಕ್ತ ಚುಂಬನವನ್ನು ಬಯಸಿದ್ದರು.
ನನಗೆ ಹೇಗೆ ಚುಂಬಿಸಬೇಕೆಂದು ತಿಳಿದಿರಲಿಲ್ಲ.
ಹಾಗಾಗಿ ನಾನು ಅವರಿಗೆ ‘ಸರ್, ದಯವಿಟ್ಟು ನನಗೆ ಹೇಗೆ ಕಿಸ್ ಮಾಡಬೇಕೆಂದು ತೋರಿಸಿ ಎಂದು ಕೇಳುವನಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ.