Sachin Tendulkar: ಆ 1 ರೂಪಾಯಿ ನಾಣ್ಯವೇ ಕ್ರಿಕೆಟ್ ಲೋಕದಲ್ಲಿ ಸಚಿನ್ರನ್ನು ʼದೇವರʼನ್ನಾಗಿ ಮಾಡಿದ್ದು..! ಕ್ರಿಕೆಟ್ ಜಗತ್ತಿನ ಲೆಜೆಂಡ್ ಬಗ್ಗೆ ಯಾರೂ ಅರಿಯದ ಆಸಕ್ತಿದಾಯಕ ಕಥೆ
ಭಾರತೀಯರಿಗೆ ಕ್ರಿಕೆಟ್ ಎಂದ ಕೂಡಲೇ ಕೆಲವು ಆಟಗಾರರು ನೆನಪಿಗೆ ಬರುತ್ತಾರೆ. ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಕೂಡ ಒಬ್ಬರು. ತಮ್ಮ ಆಟದಿಂದ ವಿಭಿನ್ನ ಸ್ಥಾನವನ್ನು ಗಳಿಸಿರುವ ಸಚಿನ್ ಅವರನ್ನು ಜನರು ಕ್ರಿಕೆಟ್ ದೇವರು ಎಂದು ಕರೆಯುತ್ತಾರೆ.
ಸಚಿನ್ ತೆಂಡೂಲ್ಕರ್ ಹಗಲಿರುಳು ಶ್ರಮಿಸಿ ಈ ಸ್ಥಾನವನ್ನು ಹೇಗೆ ಸಾಧಿಸಿದರು? ಎಂಬುದು ಮಾತ್ರ ಆಸಕ್ತಿದಾಯಕ ಕಥೆ. ಸಚಿನ್ ತೆಂಡೂಲ್ಕರ್ ಅಭ್ಯಾಸ ನಡೆಸುತ್ತಿದ್ದ ಮೈದಾನದ ಹೆಸರು ಶಿವಾಜಿ ಪಾರ್ಕ್. ಇಂದಿಗೂ ಈ ಪಾರ್ಕ್‌ನಲ್ಲಿ 700ಕ್ಕೂ ಹೆಚ್ಚು ಕ್ರಿಕೆಟಿಗರು ಅಭ್ಯಾಸ ನಡೆಸುತ್ತಿದ್ದಾರೆ. ಸಚಿನ್ ತೆಂಡೂಲ್ಕರ್ ಮತ್ತು ಶಿವಾಜಿ ಮೈದಾನಕ್ಕೆ ಸಂಬಂಧಿಸಿದ ಕುತೂಹಲಕಾರಿ ಕಥೆ ಏನೆಂಬುದನ್ನು ಮುಂದೆ ನೋಡೋಣ.
ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಸಚಿನ್ ತೆಂಡೂಲ್ಕರ್ ಮಾತ್ರವಲ್ಲದೆ ಅಜಿತ್ ವಾಡೇಕರ್, ವಿಜಯ್ ಮಂಜ್ರೇಕರ್, ಏಕನಾಥ್ ಸೋಲ್ಕರ್, ಚಂದ್ರಕಾಂತ್ ಪಂಡಿತ್, ಲಾಲಚಂದ್ ರಜಪೂತ್, ಸಂದೀಪ್ ಪಾಟೀಲ್, ಅಜಿತ್ ಅಗರ್ಕರ್, ಪ್ರವೀಣ್ ಆಮ್ರೆ, ವಿನೋದ್ ಕಾಂಬ್ಳಿ, ಅಜಿಂಕ್ಯ ರಹಾನೆ, ಪೃಥ್ವಿ ಶಾ ಮುಂತಾದ ಆಟಗಾರರು ಆಡುತ್ತಿದ್ದರು. ಈ ಮೈದಾನದಲ್ಲಿ ಅಭ್ಯಾಸ ನೀಡಿದ ರಮಾಕಾಂತ್ ವಿಠ್ಠಲ್ ಅಚ್ರೇಕರ್ ಅವರು ಮುಂಬೈನಿಂದ ಭಾರತೀಯ ಕ್ರಿಕೆಟ್ ಕೋಚ್ ಆಗಿದ್ದರು.
ಮುಂಬೈನ ಆಟಗಾರರಲ್ಲಿ ರಮಾಕಾಂತ್ ಅವರಿಗಿಂತ ಹೆಚ್ಚು ಜನಪ್ರಿಯ ಕೋಚ್ ಇರಲಿಲ್ಲ. ಪ್ರತಿಯೊಬ್ಬರೂ ಅವರಿಂದ ತರಬೇತಿ ಪಡೆಯಲು ಬಯಸಿದ್ದರು. ಸಚಿನ್ ತೆಂಡೂಲ್ಕರ್ ಕೂಡ ಅವರ ಶಿಷ್ಯ. ಅವರ ಮೂಲಕ ಉತ್ತಮ ತರಬೇತಿ ಪಡೆದು ಯಶಸ್ವಿ ಆಟಗಾರ ಎನಿಸಿಕೊಂಡಿದ್ದರು,
ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಅಭ್ಯಾಸ ಮಾಡುವಾಗ, ರಮಾಕಾಂತ್ ವಿಠ್ಠಲ್ ಅಚ್ರೇಕರ್ ಅತ್ಯುತ್ತಮ ವಿಧಾನವನ್ನು ಪ್ರಯತ್ನಿಸಿದ್ದರು. ಇದರಿಂದಾಗಿ ಸಚಿನ್ ತೆಂಡೂಲ್ಕರ್ ಹೆಚ್ಚು ಹೊತ್ತು ಬ್ಯಾಟಿಂಗ್ ಮಾಡಲು ಸಾಧ್ಯವಾಗುತ್ತಿತ್ತು. ಆ ಟೆಕ್ನಿಕ್ ಏನೆಂದರ್, ಸಚಿನ್ ಬ್ಯಾಟ್ ಮಾಡುವಾಗ ಸ್ಟಂಪ್ ಮೇಲೆ ಒಂದು ರುಪಾಯಿ ಕಾಯಿನ್ ಅನ್ನು ರಮಾಕಾಂತ್ ಅವರು ಇಡುತ್ತಿದ್ದರು. ಇದರಿಂದ ಸಚಿನ್ ಬ್ಯಾಟಿಂಗ್ ಮಾಡುವಾಗ ಔಟಾಗದೆ ಬಹಳ ಸಮಯ ಆಡುವಂತಾಗುತ್ತಿತ್ತು.
ಹೀಗೆ ಆಡಿದರೆ, ಆಗ ಆ ನಾಣ್ಯ ಸಚಿನ್ ಪಾಲಾಗುತ್ತಿತ್ತು. ಈ ರೀತಿಯಾಗಿ, ಸಚಿನ್ ಅನೇಕ ಒಂದು ರೂಪಾಯಿ ನಾಣ್ಯಗಳನ್ನು ಸಂಗ್ರಹಿಸಿದ್ದರು. ಆ ನಾಣ್ಯಗಳನ್ನು ಸಚಿನ್ ಇಂದಿಗೂ ಸಂರಕ್ಷಿಸಿದ್ದಾರೆ. ಸಚಿನ್‌ಗೆ ಈ ನಾಣ್ಯಗಳು ಯಾವುದೇ ಪ್ರಶಸ್ತಿಗಿಂತ ಕಡಿಮೆಯಲ್ಲ.