ಮದ್ಯ ಪ್ರಿಯರಿಗೆ ಸರ್ಕಾರದಿಂದ ಗುಡ್ ನ್ಯೂಸ್! ಫುಲ್ ಕಮ್ಮಿಯಾಯ್ತು ಎಣ್ಣೆ ರೇಟ್... ಇನ್ಮುಂದೆ ನೀರು ಸಿಕ್ಕಂಗೆ ಸಿಗುತ್ತೆ ಕಾಸ್ಲಿ ಬಿಯರ್-ವಿಸ್ಕಿ
ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಸಂಚಲನದ ನಿರ್ಧಾರ ಕೈಗೊಂಡಿದ್ದಾರೆ. ಮದ್ಯ ಪ್ರಿಯರಿಗೆ ಸಿಹಿಸುದ್ದಿ ನೀಡುತ್ತಿದ್ದು ಕೇವಲ 99 ರೂ.ಗೆ ಮದ್ಯ ಲಭ್ಯವಾಗುತ್ತಿದೆ.
ಚಂದ್ರಬಾಬು ನಾಯ್ಡು ಸರ್ಕಾರದ ಈ ಹೊಸ ಮದ್ಯ ನೀತಿ ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ.
ಹಿಂದಿನ ಸರ್ಕಾರದ ಅವ್ಯವಸ್ಥೆಯ ನೀತಿಯಿಂದ ಆಂಧ್ರಪ್ರದೇಶದ ಜನತೆಗೆ ಕಳಪೆ ಗುಣಮಟ್ಟದ ಮದ್ಯ ಸಿಗುತ್ತಿದೆ ಎಂಬ ಆರೋಪ ಕೇಳಿಬರುತ್ತಿತ್ತು. ಈ ಸಂದರ್ಭದಲ್ಲಿ ಚಂದ್ರಬಾಬು ನಾಯ್ಡು ಅವರು ಈ ಭರವಸೆಯನ್ನು ನೀಡಿದ್ದರು.
ಆಂಧ್ರಪ್ರದೇಶದಲ್ಲಿ ಹೊಸ ಮದ್ಯ ನೀತಿಗೆ ಚಂದ್ರಬಾಬು ಸರ್ಕಾರ ಅನುಮೋದನೆ ನೀಡಿದೆ. ಗುಣಮಟ್ಟದ ಮದ್ಯದ ಬ್ರ್ಯಾಂಡ್ʼಗಳು ಲಭ್ಯವಾಗುವಂತೆ ಮಾಡಲು ಸರ್ಕಾರ ನಿರ್ಧರಿಸಿದೆ.
ಮದ್ಯದ ಸರಾಸರಿ ಬೆಲೆ ರೂ.99 ರಿಂದ ಲಭ್ಯವಾಗುವಂತೆ ಮಾಡಲು ಸರ್ಕಾರ ನಿರ್ಧರಿಸಿದೆ. ಇದರ ಜೊತೆಗೆ ಭೋಗಾಪುರಂ ವಿಮಾನ ನಿಲ್ದಾಣಕ್ಕೆ ಅಲ್ಲೂರಿ ಸೀತಾಮರಾಜು ವಿಮಾನ ನಿಲ್ದಾಣ ಎಂದು ಹೆಸರಿಸಲು ಸರ್ಕಾರ ನಿರ್ಧರಿಸಿದೆ.
ಅಕ್ಟೋಬರ್ 1ರಿಂದ ಈ ಮದ್ಯ ನೀತಿ ಜಾರಿಗೆ ಬರಲಿದೆ ಎಂದು ವರದಿಯಾಗಿದೆ. ಹೊಸ ಮದ್ಯ ನೀತಿಯಿಂದ ಮದ್ಯ ಪ್ರಿಯರಿಗೆ ಸಿಹಿಸುದ್ದಿ ಸಿಕ್ಕಂತಾಗಿದ್ದು, ಬ್ರಾಂಡೆಡ್ ಮದ್ಯ ಕೂಡ ನೀರು ಸಿಕ್ಕಂತೆ ಇನ್ಮುಂದೆ ಸಿಗಲಿದೆ