ಕನಸಿನಲ್ಲಿ ಈ ವಸ್ತುಗಳ ಗೋಚರ ಭಾಗ್ಯೋದಯದ ಸಂಕೇತ
ಸಪ್ನ ಶಾಸ್ತ್ರದಲ್ಲಿ ಕನಸಿನ ಅರ್ಥಗಳ ಬಗ್ಗೆ ಉಲ್ಲೇಖಿಸಲಾಗಿದೆ. ಸಪ್ನ ಶಾಸ್ತ್ರದ ಪ್ರಕಾರ, ಕನಸಿನಲ್ಲಿ ಕಾಣುವ ವಸ್ತುಗಳು ಇಲ್ಲವೇ ದೃಶ್ಯಗಳು ಮುಂದಾಗಬಹುದಾದ ಒಳ್ಳೆಯ/ಕೆಟ್ಟ ಘಟನೆಗಳ ಬಗ್ಗೆ ಸೂಚನೆಯನ್ನು ನೀಡುತ್ತವೆ. ಈ ಫೋಟೋ ಗ್ಯಾಲರಿಯಲ್ಲಿ ಶೀಘ್ರದಲ್ಲೇ ಶ್ರೀಮಂತರಾಗುವ ಯೋಗದ ಬಗ್ಗೆ ಸೂಚನೆ ನೀಡುವ ಕನಸುಗಳ ಬಗ್ಗೆ ತಿಳಿಯೋಣ...
ನೀವು ನಿಮ್ಮ ಕನಸಿನಲ್ಲಿ ನಿಮ್ಮಿಷ್ಟದ ದೇವರ ದರ್ಶನ, ಇಲ್ಲವೇ ದೇವರಿಗೆ ಪೂಜೆ ಮಾಡುತ್ತಿರುವ ದೃಶ್ಯವನ್ನು ಕಂಡರೆ ಅತಿ ಶೀಘ್ರದಲ್ಲಿ ನಿಮ್ಮ ಮನೆಯಲ್ಲಿ ಮಂಗಳ ಕಾರ್ಯ ಜರುಗಲಿದೆ ಎಂಬುದರ ಸಂಕೇತ. ಇದಲ್ಲದೆ, ನಿಮ್ಮ ಮನೆಯ ಹೆಣ್ಣು ಮಗು ಐಶ್ವರ್ಯವಂತರ ಮನೆಗೆ ಸೊಸೆಯಾಗಿ ಹೋಗಲಿದ್ದಾಳೆ ಎಂಬುದನ್ನೂ ಇದು ಸೂಚಿಸುತ್ತದೆ.
ಕನಸಿನಲ್ಲಿ ಕಪ್ಪೆಯನ್ನು ಕಾಣುವುದನ್ನು ಶುಭ ಶಕುನವೆಂದು ಹೇಳಲಾಗುತ್ತಡ್.ಎ ನೀವು ಯುವಕರು ತಮ್ಮ ಕನಸಿನಲ್ಲಿ ಕಪ್ಪೆಯನ್ನು ಕಂಡರೆ ನೀವು ಶೀಘ್ರದಲ್ಲಿಯೇ ಸಿರಿವಂತರಾಗುತ್ತೀರಿ ಎಂದರ್ಥ. ಅದರಂತೆ, ಹುಡುಗಿಯರು ಕನಸಿನಲ್ಲಿ ಕಪ್ಪೆಯನ್ನು ಕಂಡರೆ ಅವರು ಶ್ರೀಮಂತರ ಮನೆಯ ಸೊಸೆಯಾಗಲಿದ್ದಾರೆ ಎಂದರ್ಥ.
ಉದ್ಯಾನವನದಲ್ಲಿ ಪ್ರೇಮಿಗಳು ಕೈ ಕೈ ಹಿಡಿದು ಓಡಾಡುತ್ತಿರುವ ದೃಶ್ಯವನ್ನು ನೀವು ಕನಸಿನಲ್ಲಿ ಕಂಡರೆ ನಿಮ್ಮ ಪ್ರೀತಿಯ ಜೀವನ ಉಜ್ವಲವಾಗಿದೆ ಎಂದು ಇದು ಸೂಚಿಸುತ್ತದೆ.
ಬಳೆಗಳನ್ನು ಶುಭ ಶಕುನದ ಸಂಕೇತ ಎಂದು ಪರಿಗಣಿಸಲಾಗುತ್ತದೆ. ನೀವು ನಿಮ್ಮ ಕನಸಿನಲ್ಲಿ ಬಳೆಗಳನ್ನು ಕಂಡರೆ ಶೀಘ್ರದಲ್ಲಿಯೇ ವಿವಾಹ ಬಂಧನದಲ್ಲಿ ಬಂಧಿಯಾಗುತ್ತೀರಿ ಎಂದು ಅರ್ಥ.
ಯಾರಾದರು ಕನಸಿನಲ್ಲಿ ಈರುಳ್ಳಿಯನ್ನು ತಿನ್ನುವುದನ್ನು ಕಂಡರೆ ಅವರು ಶೀಘ್ರದಲ್ಲೇ ನಿಜವಾದ ಪ್ರೀತಿಯನ್ನು ಪಡೆಯಲಿದ್ದಾರೆ ಎಂದು ಹೇಳಲಾಗುತ್ತದೆ. ಜೊತೆಗೆ ಇದು ಧನ ಲಾಭದ ಸಂಕೇತವಾಗಿದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.