ಅಂದು ಖ್ಯಾತ ನಟಿ... ಇಂದು ಭಿಕ್ಷೆ ಬೇಡುವ ಸ್ಥಿತಿ! ತುತ್ತು ಅನ್ನಕ್ಕೂ ಬೀದಿಬದಿಯಲ್ಲಿ ಅಲೆದಾಡುತ್ತಿದ್ದಾಳೆ ಒಂದು ಕಾಲದಲ್ಲಿ ಸಿನಿರಂಗವನ್ನೇ ಆಳಿದ ಆ ಸುಂದರಿ

Fri, 20 Dec 2024-7:41 pm,

ಸದ್ಯ ಚಿತ್ರರಂಗದಲ್ಲಿ ಪ್ರತಿಭೆಗೆ ಸಿಗುವ ಬೆಲೆಗಿಂತ ಗ್ಲಾಮರ್‌ಗೆ ಸಿಗುವ ಬೆಲೆಯೇ ಹೆಚ್ಚು. ಆದರೆ ಕೆಲವೊಂದು ಇಂಡಸ್ಟ್ರಿಯಲ್ಲಿ ಅಂದಕ್ಕಿಂತ ಹೆಚ್ಚು ಪ್ರತಿಭೆಗೆ ಬೆಲೆ ಸಿಗುತ್ತಿದೆ. ಇದು ಇತ್ತೀಚಿನ ದಿನಗಳಲ್ಲಿ ಕಾಣಿಸುತ್ತಿರುವ ಅತಿ ಅಗತ್ಯವಾಗಿ ಬೇಕಾಗಿದ್ದ ಬೆಳವಣಿಗೆ. ಆದರೆ ಬಾಲಿವುಡ್‌ ಇಂಡಸ್ಟ್ರಿಯಲ್ಲಿ ಮಾತ್ರ ಹಾಟ್‌ ಆಂಡ್‌ ಬ್ಯೂಟಿಗೆ ಮೊದಲ ಪ್ರಾಶಸ್ತ್ಯ.

ಇಂತಹ ವಿಚಾರಗಳು ಅದೆಷ್ಟೋ ಪ್ರತಿಭಾನ್ವಿತ ಕಲಾವಿದರ ಬದುಕನ್ನು ಬರಡಾಗಿಸಿದೆ. ಅದರಲ್ಲಿ ಇಬ್ಬರು ನಟಿಯರು ಕೂಡ ಸೇರಿದ್ದಾರೆ. ಒಬ್ಬರು ಮಿಥಾಲಿ ಶರ್ಮಾ. ಮತ್ತೊಬ್ಬರು ನಿಶಾ ನೂರ್.‌ ಈ ನಟಿಯರು ಒಂದು ಕಾಲದಲ್ಲಿ ಇಡೀ ಚಿತ್ರರಂಗವನ್ನು ಆಳಿದವರು. ಆದರೆ ಇಂದು ಬೇಡಿ ತಿನ್ನುವ ಪರಿಸ್ಥಿತಿ ಎದುರಿಸುತ್ತಿದ್ದಾರೆ.

 

ಮುಂಬೈನಲ್ಲಿ ಕೆಲವು ಚಿತ್ರಗಳಲ್ಲಿ ನಟಿಸಿ ಜೊತೆಜೊತೆಗೆ ಮಾಡೆಲಿಂಗ್ ಮಾಡಿ ಹೆಸರು ಗಳಿಸಿದ್ದ ಮಿಥಾಲಿ ಶರ್ಮಾಗೆ ಹಲವಾರು ತಿಂಗಳುಗಳವರೆಗೆ ಉತ್ತಮ ಆಫರ್‌ಗಳು ಸಿಗಲಿಲ್ಲ. ಈ ಅವಧಿಯಲ್ಲಿ ಆಕೆ ಕೈಗೆ ಸಿಕ್ಕ ಸಿನಿಮಾಗಳನ್ನು ಮಾಡಿದ್ದರು. ಆದರೂ ಉತ್ತಮ ಆಫರ್‌ಗಳು ಸಿಗದ ಕಾರಣ, ಹಣದ ಕೊರತೆ ಎದುರಿಸಲಾರಂಭಿಸಿದರು. ಇದೇ ನೋವಿನಿಂದ ಕ್ರಮೇಣ ಆಕೆ ಖಿನ್ನತೆಗೆ ಒಳಗಾಗಿದ್ದರು.

 

ಒಂದು ಕಾಲದಲ್ಲಿ ಭೋಜ್‌ಪುರಿ ಚಿತ್ರರಂಗದಲ್ಲಿ ಖ್ಯಾತ ನಟಿಯಾಗಿದ್ದ ಈಕೆ, ಚಲನಚಿತ್ರ ನಿರ್ಮಾಪಕರ ಮೊದಲ ಆಯ್ಕೆಯಾಗಿದ್ದ ಸಮಯವಿತ್ತು. ಆದರೆ ನಂತರ ಕಾಲಕ್ರಮೇಣ ಮಿಥಾಲಿ ಶರ್ಮಾ ಜೀವನ ಸಂಪೂರ್ಣ ಬದಲಾಯಿತು. ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾಗಲು ಪ್ರಾರಂಭಿಸಿದವು. ಅಲ್ಲಿಂದ ನಿರ್ಮಾಪಕರು ಕೂಡ ಆಕೆಯನ್ನು ದೂರವಿಡಲು ಪ್ರಾರಂಭಿಸಿದರು.

 

ತನ್ನ ವೃತ್ತಿಜೀವನ ನಾಶವಾದುದನ್ನು ಕಂಡು ಮಿಥಾಲಿ ಖಿನ್ನತೆಗೆ ಒಳಗಾಗಿದ್ದಳು. ವರದಿಗಳ ಪ್ರಕಾರ, ಮಿಥಾಲಿ ಬದುಕು ಸಾಗಿಸುವ ಕಾರಣದಿಂದ ಮುಂಬೈನ ಲೋಖಂಡವಾಲಾ ಬೀದಿಗಳಲ್ಲಿ ಭಿಕ್ಷೆ ಬೇಡಲು ಆರಂಭಿಸಿದ್ದರಂತೆ. ಒಂದೊಮ್ಮೆ ಕಳ್ಳತನ ಮಾಡಿ ಪೊಲೀಸರಿಗೆ ಕೂಡ ಸಿಕ್ಕಿಬಿದ್ದಿದ್ದರು ಎನ್ನಲಾಗಿದೆ. ಅಂದು ಆಕೆಯನ್ನು ಮುಂಬೈ ಪೊಲೀಸರು ಬಂಧಿಸಿದ್ದು, ಮಹಿಳಾ ಪೊಲೀಸರು ಕೈಗೆ ಕೋಳ ಹಾಕಲು ಮುಂದಾದಾಗ ಮಿಥಾಲಿ ಅವರ ಜತೆ ಮಾತಿನ ಚಕಮಕಿ ನಡೆಸಿದ್ದರಂತೆ. ಆ ನಂತರ ಓಡಿಹೋಗಲು ಕೂಡ ಯತ್ನಿಸಿದ್ದರು ಎನ್ನಲಾಗಿದೆ.

 

ಅವರ ಮಾನಸಿಕ ಸ್ಥಿತಿ ಸರಿಯಿಲ್ಲದ ಕಾರಣ ಅವರನ್ನು ಠಾಣೆಯ ಮಾನಸಿಕ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವರದಿಗಳ ಪ್ರಕಾರ, ಅಲ್ಲಿನ ವೈದ್ಯರು ಆಕೆಗೆ ವೈದ್ಯಕೀಯ ಸಹಾಯದ ಅಗತ್ಯವಿದೆ ಎಂದು ತಿಳಿಸಿದ್ದು, ನಿಗಾದಲ್ಲಿ ಇರಿಸಲಾಗಿತ್ತು. ಮಿಥಾಲಿ ದೆಹಲಿ ನಿವಾಸಿ. ಬಹುದೊಡ್ಡ ಕನಸಿನೊಂದಿದೆ ಎಲ್ಲವನ್ನೂ ತೊರೆದು ಮುಂಬೈಗೆ ಬಂದು ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಆಕೆಗೆ ಸಿಕ್ಕಿದ್ದು ವೈಫಲ್ಯವಷ್ಟೇ.

 

ಇವರಂತೆಯೇ ನಿಶಾ ನೂರ್ ಎಂಬ ದಕ್ಷಿಣ ಚಿತ್ರರಂಗದ ಪ್ರಸಿದ್ಧ ನಟಿಯನ್ನು ನಿರ್ಮಾಪಕರೇ ವೇಶ್ಯೆಯನ್ನಾಗಿ ಮಾಡಿದರೆಂದು ಹೇಳಲಾಗುತ್ತದೆ. ಈ ಕಾರಣದಿಂದಾಗಿ, ಯಾವುದೇ ಕಲಾವಿದರು ಆಕೆಯೊಂದಿಗೆ ಕೆಲಸ ಮಾಡಲು ಇಷ್ಟಪಡುತ್ತಿರಲಿಲ್ಲ. ಆದರೆ ಅದಕ್ಕೂ ಮುಂಚೆ, ತಮಿಳು, ತೆಲುಗು, ಮಲಯಾಳಂ ಮಾತ್ರವಲ್ಲದೆ, ಕನ್ನಡದಲ್ಲೂ ನಟಿಸಿದ ಈಕೆ ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರಂತಹ ನಟರೊಂದಿಗೆ ಕೂಡ ಕೆಲಸ ಮಾಡಿದ್ದಾರೆ.

 

ಕೊನೆಗೆ ಇಷ್ಟೆಲ್ಲಾ ನೋವು ಅನುಭವಿಸಿದ ನಿಶಾ ನೂರ್‌ ಕೊನೆಗೆ ದುರಂತ ಅಂತ್ಯ ಕಂಡಿದ್ದರು. 2007 ರಲ್ಲಿ ಏಡ್ಸ್-ಸಂಬಂಧಿತ ಕಾಯಿಲೆಗೆ ತುತ್ತಾಗಿ ನಿಧನರಾದರು ಎಂದು ವರದಿಗಳು ಹೇಳುತ್ತವೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link