ಒಳಾಂಗಣ ಅಥವಾ ಹೊರಾಂಗಣ… ಈ ಒಂದು ಗಿಡ ನೆಟ್ಟರೆ ಸಾಕು ಸುಡು ಬೇಸಿಗೆಯಲ್ಲಿ ತಂಪು ತಂಪಾಗಿರುತ್ತೆ ಸಂಪೂರ್ಣ ಮನೆ! ಸ್ವಲ್ಪವೂ ಇರಲ್ಲ ಸೆಖೆ
ಮನೆಯನ್ನು ನೈಸರ್ಗಿಕವಾಗಿ ತಂಪಾಗಿರಿಸುವ, ಎಸಿ ಮತ್ತು ಕೂಲರ್’ಗಳಿಗಿಂತ ಯಾವುದಾದರೂ ಅಗ್ಗದ ಆಯ್ಕೆಗಳ ಬಗ್ಗೆ ನಿಮಗೆ ತಿಳಿದಿದೆಯೇ. ಈ ಗಿಡಗಳನ್ನು ಮನೆಯಲ್ಲಿ ನೆಟ್ಟರೆ ಸಾಕು ಇಡೀ ಮನೆಯಲ್ಲಿ ಶುದ್ಧ ಗಾಳಿ ಸಂಚರಿಸುವುದಲ್ಲದೆ, ಮನೆ ಪೂರ್ತಿ ತಂಪು ತಂಪಾಗಿರುತ್ತದೆ.
ಮನೆಯಲ್ಲಿ ಸೌಂದರ್ಯಕ್ಕಾಗಿ ಒಂದೋ ಎರಡೋ ಗಿಡಗಳನ್ನು ನೆಡಬಹುದು. ಆದರೆ ಬೇಸಿಗೆಯನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಮನೆಯಲ್ಲಿಟ್ಟರೆ ಕೆಲವೊಂದು ಅಂದವನ್ನು ಹೆಚ್ಚಿಸುವ, ಜೊತೆಗೆ ಗಾಳಿಯೂ ಲಭಿಸುವ ಆ ಗಿಡಗಳನ್ನು ಬೆಳೆದರೆ ಹೇಗೆ ಎಂಬ ಆಲೋಚನೆ ಬಂದಿದೆಯೇ? ನಾವಿಂದು ಕೆಲ ಗಿಡಗಳ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ.
ಅಲೋವೆರಾ: ಅಲೋವೆರಾ ಬೇಸಿಗೆಯಲ್ಲಿ ಚರ್ಮವನ್ನು ತಂಪಾಗಿರಿಸಲು ಮತ್ತು ಯಾವುದೇ ರೀತಿಯ ಟ್ಯಾನಿಂಗ್‌ನಿಂದ ರಕ್ಷಿಸಲು ಸಹಾಯ ಮಾಡುತ್ತದೆ, ಅಲೋವೆರಾ ಗಿಡವನ್ನು ಮನೆಯೊಳಗೆ ಅಥವಾ ಹೊರಗೆ ನೆಟ್ಟರೆ, ಅದು ಮನೆಯೊಳಗಿನ ಗಾಳಿಯ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಜೊತೆಗೆ ತಂಪು ಗಾಳಿಯನ್ನು ನೀಡುತ್ತದೆ.
ಅರೆಕಾ ಪಾಮ್ ಟ್ರೀ: ಇದು ಅತ್ಯಂತ ಪ್ರಸಿದ್ಧವಾದ ಲಿವಿಂಗ್ ರೂಮ್ ಸಸ್ಯ. ಅಲಂಕಾರಿಕ ಒಳಾಂಗಣ ಸಸ್ಯವಾಗಿದ್ದು, ನೈಸರ್ಗಿಕ ಆರ್ದ್ರಕವಾಗಿ ಕಾರ್ಯನಿರ್ವಹಿಸುತ್ತದೆ, ಅಂದರೆ ಒಳಾಂಗಣ ಗಾಳಿಯನ್ನು ನೈಸರ್ಗಿಕವಾಗಿ ತೇವವಾಗಿಡಲು ಇದು ಬೆಸ್ಟ್.
ಬೇಬಿ ರಬ್ಬರ್ ಪ್ಲಾಂಟ್: ಇದು ವಾತಾವರಣದಲ್ಲಿರುವ ಇಂಗಾಲದ ಡೈಆಕ್ಸೈಡ್ ಅನ್ನು ಸುಲಭವಾಗಿ ಹೀರಿಕೊಳ್ಳುತ್ತದೆ ಮತ್ತು ಆಮ್ಲಜನಕದ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಶಾಖದ ಮಟ್ಟವು ಸ್ವಯಂಚಾಲಿತವಾಗಿ ಕಡಿಮೆಯಾಗಲು ಪ್ರಾರಂಭಿಸುತ್ತದೆ.
ಗೋಲ್ಡನ್ ಪೊಥೋಸ್: ಗೋಲ್ಡನ್ ಪೊಥೋಸ್ ಗಾಳಿಯನ್ನು ತಂಪಾಗಿಸುವಲ್ಲಿ ಅತ್ಯಂತ ಪರಿಣಾಮಕಾರಿ ಸಸ್ಯವಾಗಿದೆ. ಇದು ಒಂದು ರೀತಿಯ ಮನಿ ಪ್ಲಾಂಟ್. ಇದು ಗಾಳಿಯಿಂದ ಧೂಳು ಮತ್ತು ಇಂಗಾಲವನ್ನು ತ್ವರಿತವಾಗಿ ಫಿಲ್ಟರ್ ಮಾಡಲು ಕೆಲಸ ಮಾಡುತ್ತದೆ.
ಸ್ನೇಕ್ ಪ್ಲಾಂಟ್: ಈ ಗಿಡವನ್ನು ಸಾಮಾನ್ಯವಾಗಿ ಅನೇಕ ಮನೆಗಳಲ್ಲಿ ಬೆಳೆಸಲಾಗುತ್ತದೆ. ಇದು ಗಾಳಿಯನ್ನು ತಾಜಾಗೊಳಿಸುವುದರ ಜೊತೆಗೆ ಆಮ್ಲಜನಕದ ಪ್ರಮಾಣವನ್ನು ಹೆಚ್ಚಿಸುತ್ತದೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)