Photos: ಲಾಕ್‌ಡೌನ್ ಸಡಿಲಿಕೆ ಬೆನ್ನಲ್ಲೇ ಮದ್ಯದಂಗಡಿ ಮುಂದೆ ಸಾಲುಗಟ್ಟಿ ನಿಂತ ಜನ
ಕೆಲವು ಷರತ್ತುಗಳೊಂದಿಗೆ ದೆಹಲಿ ಸರ್ಕಾರ ಸೋಮವಾರದಿಂದ ಮದ್ಯದಂಗಡಿ ತೆರೆಯಲು ಅನುಮತಿ ನೀಡಿತು. ಅದರಲ್ಲಿ ಮದ್ಯದಂಗಡಿಗಳಲ್ಲಿಯೂ ಸಹ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂಬುದು ಪ್ರಮುಖ ಷರತ್ತುಗಳಲ್ಲಿ ಒಂದು.
ದೆಹಲಿ ಸರ್ಕಾರ ಹೊರಡಿಸಿದ ಆದೇಶದ ಪ್ರಕಾರ ಪ್ರತ್ಯೇಕವಾಗಿರುವ ಮತ್ತು ಸ್ವತಂತ್ರವಾಗಿರುವ ಮದ್ಯದಂಗಡಿಗಳನ್ನು ಮಾತ್ರ ತೆರೆಯಲು ಅನುಮತಿಸಲಾಗುವುದು. ಅಂದರೆ ಮಾರುಕಟ್ಟೆ ಮತ್ತು ಹತ್ತಿರದಲ್ಲಿ ಬೇರೆ ಅಂಗಡಿ ಇಲ್ಲದ ಮದ್ಯದಂಗಡಿಗಳಿಗೆ ಮಾತ್ರ ಮದ್ಯದಂಗಡಿ ತೆರೆಯಲು ಅವಕಾಶ ನೀಡಲಾಗಿದೆ.
ಒಂದು ಸಮಯದಲ್ಲಿ ಕೇವಲ 5 ಜನರು ಮಾತ್ರ ಮದ್ಯದಂಗಡಿಯಲ್ಲಿ ಹಾಜರಾಗಬಹುದು ಎಂಬುದನ್ನೂ ಸಹ ನಿಯಮದಲ್ಲಿಯೂ ಹೇಳಲಾಗಿದೆ. ಅದಕ್ಕಾಗಿಯೇ ಜನರು ಸಾಲಿನಲ್ಲಿ ನಿಲ್ಲಲು ಹೊರಗೆ ದೀರ್ಘ ರೇಖೆಯನ್ನು ಹಾಕಿದ್ದಾರೆ.
ದೆಹಲಿಯ ಲಕ್ಷ್ಮಿ ನಗರದಲ್ಲಿ, ಮದ್ಯದ ಅಂಗಡಿ ಹೊರಗೆ ಜನರು ಸಾಮಾಜಿಕ ದೂರವನ್ನು ಅನುಸರಿಸಿ, ಪರಸ್ಪರ ದೂರವಿರುವ ದೃಶ್ಯಗಳು ಕಂಡು ಬರುತ್ತಿವೆ. (ಫೋಟೊ ಕೃಪೆ: ಎಎನ್‌ಐ)
ದೆಹಲಿಯ ಬುರಾಡಿಯಲ್ಲಿರುವ ಮದ್ಯದಂಗಡಿಯಲ್ಲಿ ಜನಸಮೂಹ.
ಚಂದರ್ ನಗರದ ಮದ್ಯದಂಗಡಿಗಳ ಬಳಿ ಪೊಲೀಸ್ ಕಣ್ಗಾವಲು.
ದೆಹಲಿಯ ಮಾಲ್ವಿಯಾ ನಗರದಲ್ಲಿ ಅಂಗಡಿ ತೆರೆಯುವುದನ್ನೇ ಕಾದು ಕುಳಿತ ಜನ.
ಕೃಷ್ಣನಗರದ ಮದ್ಯದಂಗಡಿಯ ಮುಂದೆ ಜನರು ಸಾಲಿನಲ್ಲಿ ನಿಂತಿರುವ ದೃಶ್ಯ.
ಕೃಷ್ಣನಗರದ ಮದ್ಯದಂಗಡಿಯ ಮುಂದೆ ಜನರು ಸಾಲಿನಲ್ಲಿ ನಿಂತಿರುವ ದೃಶ್ಯ.
ದೆಹಲಿಯ ಚಂದರ್ ನಗರದಿಂದ ಮತ್ತೊಂದು ಫೋಟೋ ಬಂದಿದೆ, ಇದರಲ್ಲಿ ಜನರು ಮದ್ಯದ ಅಂಗಡಿ ಹೊರಗೆ ಸಾಲುಗಟ್ಟಿ ನಿಂತಿರುವ ದೃಶ್ಯ.