ವೀಳ್ಯದೆಲೆಯ ಈ ಪರಿಹಾರಗಳಿಂದ ತೆರೆಯುತ್ತದೆ ಅದೃಷ್ಟದ ಬಾಗಿಲು

Fri, 10 Nov 2023-6:37 am,

ಆಯುರ್ವೇದದಲ್ಲಿ ಔಷಧೀಯ ಗುಣಗಳ ಆಗರ ಎಂದು ಬಣ್ಣಿಸಲ್ಪಡುವ ವೀಳ್ಯದೆಲೆಗೆ ಹಿಂದೂ ಧರ್ಮದಲ್ಲಿ ಬಹಳ ಮಹತ್ವವಿದೆ. ಈ ಎಲೆ ಇಲ್ಲದೆ ಯಾವುದೇ ಪೂಜೆ ಸಂಪೂರ್ಣವಾಗುವುದಿಲ್ಲ. ವೀಳ್ಯದೆಲೆಯನ್ನು ಸಂಸ್ಕೃತದಲ್ಲಿ ತಾಂಬೂಲ ಎಂದು ಕರೆಯಲಾಗುತ್ತದೆ. 

ಹಿಂದೂ ಧರ್ಮದಲ್ಲಿ ಯಾವುದೇ ಶುಭ ಕಾರ್ಯಗಳಲ್ಲಿ ವೀಳ್ಯದೆಲೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಧರ್ಮಗ್ರಂಥಗಳಲ್ಲಿ ಮಂಗಳಕರವೆಂದು ಪರಿಗಣಿಸಲಾಗಿರುವ ವೀಳ್ಯದೆಲೆಗೆ ಅದೃಷ್ಟವನ್ನು ಬದಲಾಯಿಸುವ ಶಕ್ತಿಯೂ ಇದೆ. ಹೌದು, ರೋಗಗಳಿಂದ ಮಾತ್ರವಲ್ಲ ಜೀವನದಲ್ಲಿ ಎದುರಾಗುವ ಹಲವು ಸಮಸ್ಯೆಗಳಿಗೂ ಕೂಡ ವೀಳ್ಯದೆಲೆ ಪರಿಹಾರವನ್ನು ನೀಡಲಿದೆ.  ಅವುಗಳೆಂದರೆ... 

ಯಾವುದೇ ಕೆಲಸಕ್ಕೆ ನೀವು ಮನೆಯಿಂದ ಹೊರಗೆ ಹೋಗುವಾಗ ನಿಮ್ಮ ಪರ್ಸ್ ಅಥವಾ ಜೇಬಿನಲ್ಲಿ ವೀಳ್ಯದೆಲೆ ಇಟ್ಟುಕೊಂಡು ಹೋಗುವುದರಿಂದ ಯಾವುದೇ ಅಡೆತಡೆಯಿಲ್ಲದೆ ನಿಮ್ಮ ಕೆಲಸ ಪೂರ್ಣಗೊಳ್ಳುತ್ತದೆ. 

ಶನಿವಾರದಂದು 5 ವೀಳ್ಯದೆಲೆಗಳನ್ನು ತೆಗೆದುಕೊಂಡು ಒಂದೇ ದಾರದಲ್ಲಿ ಕಟ್ಟಿ  ನಿಮ್ಮ ಅಂಗಡಿಯ ಪೂರ್ವ ದಿಕ್ಕಿನಲ್ಲಿ ಇದನ್ನು ಕಟ್ಟಿ. ಪ್ರತಿ ಶನಿವಾರ ಈ ಎಲೆಗಳನ್ನು ಬದಲಾಯಿಸಿದರೆ ವ್ಯವಹಾರದಲ್ಲಿ ಪ್ರಗತಿ ಕಾಣಬಹುದು. 

ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳಿದ್ದರೆ ಮಂಗಳವಾರ ಮತ್ತು ಶನಿವಾರದಂದು ನೆನೆಸಿದ ವೀಳ್ಯದೆಲೆಯನ್ನು ಹನುಮಂತಣಿಗೆ ಅರ್ಪಿಸಿ. 

ದಾಂಪತ್ಯ ಜೀವನದಲ್ಲಿ ಯಾವುದೇ ರೀತಿಯ ಒತ್ತಡ, ಉದ್ವಿಗ್ನತೆ ಇದ್ದರೆ ಶುಕ್ರವಾರದಂದು ವೀಳ್ಯದೆಲೆಯಲ್ಲಿ 7 ತಾಜಾ ಗುಲಾಬಿ ದಳಗಳನ್ನು ಇರಿಸಿ  ನಿಮ್ಮ ಮನೆಯ ಸಮೀಪದ ಲಕ್ಷ್ಮಿ ದೇವಾಲಯಕ್ಕೆ ಅರ್ಪಿಸಿ. 

ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ವಾಸ್ತು ದೋಷ ಇದ್ದರೆ ವೈಮನಸ್ಯದ ವಾತಾವರಣವಿದ್ದರೆ ಅರಿಶಿನ ಮಿಶ್ರಿತ ನೀರನ್ನು ವೀಳ್ಯದೆಲೆಯಿಂದ ಸಿಂಪಡಿಸಿ. ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. 

ನೀವು ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದರೆ ಕಲಶದ ನೀರಿನಲ್ಲಿ ಅರಿಶಿನವನ್ನು ಮಿಶ್ರಣ ಮಾಡಿ ಆ ನೀರನ್ನು ವೀಳ್ಯದೆಲೆಯಿಂದ ಮನೆಯ ಮೂಲೆ ಮೂಲೆಯಲ್ಲಿಯೂ ಸಿಂಪಡಿಸಿ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link