ಈ ರೀತಿ ತುಪ್ಪವನ್ನು ಸೇವಿಸಿ, ಇದರಿಂದ ನಿಮ್ಮ ಎಲ್ಲಾ ಆರೋಗ್ಯ ಸಮಸ್ಯೆಗಳು ಮಾಯವಾಗುತ್ತದೆ..!
ತುಪ್ಪವು ಪ್ರಾಚೀನ ಕಾಲದಿಂದೂ ರೂಡಿಯಲ್ಲಿರುವ ಆಹಾರ ಪದಾರ್ಥವಾಗಿದೆ. ಇದರ ಔಷಧೀಯ ಗುಣಗಳು ದೇಹಕ್ಕೆ ತುಂಬಾ ಪ್ರಯೋಜನಕಾರಿ. ತುಪ್ಪ ನಮ್ಮ ಆರೋಗ್ಯಕ್ಕೆ ಅಗತ್ಯವಾದ ವಿಟಮಿನ್ ಎ, ವಿಟಮಿನ್ ಇ, ವಿಟಮಿನ್ ಕೆ ಮತ್ತು ಕೊಬ್ಬನ್ನು ಕರಗಿಸುವ ವಿಟಮಿನ್‌ಗಳಂತಹ ಪ್ರೋಟೀನ್‌ಗಳಲ್ಲಿ ಸಮೃದ್ಧವಾಗಿದ್ದು, ನಮ್ಮ ದೇಹಕ್ಕಿದು ಅನೇಕ ಆರೋಗ್ಯ ಪ್ರಯೋಜನೆಗಳನ್ನು ನೀಡುತ್ತದೆ.
ತುಪ್ಪವನ್ನು ಸೇವಿಸುವುದರಿಂದ ಮೂಳೆಗಳ ಬಲ ಹೆಚ್ಚುತ್ತದೆ. ದೃಷ್ಟಿ ಸಮಸ್ಯೆಗಳು ದೂರವಾಗುತ್ತವೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ತುಪ್ಪದಲ್ಲಿ ಬ್ಯುಟರಿಕ್ ಆಮ್ಲ ಸಮೃದ್ದವಾಗಿದೆ. ಇದು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡಿ, ಜೀರ್ಣಾಂಗ ವ್ಯವಸ್ಥೆಯನ್ನು ಬಲ ಪಡಿಸುತ್ತದೆ.
ಆಯುರ್ವೇದದ ಪ್ರಕಾರ ಕಾಲಿ ಹೊಟ್ಟೆಯಲ್ಲಿ ತುಪ್ಪವನ್ನು ಸೇವಿಸುವುದು ತುಂಬಾ ಒಳ್ಳೆಯದು. ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುವುದಷ್ಟೆ ಅಲ್ಲದೆ ದೇಹದಲ್ಲಿನ ಅನಗತ್ಯ ವಿಷಕಾರಿ ಅಂಶವನ್ನು ತೆಗೆದುಹಾಕುತ್ತದೆ. ಆದ್ದರಿಂದ, ಬೆಳಿಗ್ಗೆ ಸ್ವಲ್ಪ ಹಸುವಿನ ತುಪ್ಪವನ್ನು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು.
ಮುಂಜಾನೆ ತುಪ್ಪವನ್ನು ಸೇವಿಸುವುದರಿಂದ ಕರುಳಿನ ಕಾರ್ಯಕ್ಕೆ ಸಹಾಯ ಮಾಡುತ್ತದೆ. ಇದರಿಂದ ದೇಹದಲ್ಲಿರುವ ಟಾಕ್ಸಿನ್‌ಗಳು ಹೊರಗೆ ಹೋಗುತ್ತವೆ.
ಹಾಗಂತ ತುಪ್ಪವನ್ನು ಎಲ್ಲಾ ಪದಾರ್ಥಗಳಲ್ಲಿ ಬೆರಸಿ ಸೇವಿಸಿವುದು ತಪ್ಪು. ತುಪ್ಪವನ್ನು ಸಕ್ಕರೆಯೊಂದಿಗೆ ಸೇವಿಸುವ ತಪ್ಪು ಮಾಡಬೇಡಿ, ಇದರಲ್ಲಿ ಹೆಚ್ಚು ಕಾರ್ಬೋಹೈಡ್ರೇಟ್‌ಗಳಿದ್ದು, ಇದು ಆರೋಗ್ಯಕ್ಕೆ ಸಮಸ್ಯೆಯನ್ನುಂಟು ಮಾಡುತ್ತದೆ.
ಬ್ಲಾಕ್ ಕಾಫಿಯಲ್ಲಿ ತುಪ್ಪದ ಜೊತೆ ಬೆರಸಿ ಕುಡಿಯುವುದು ಇತ್ತೀಚೆಗೆ ಸಿಕ್ಕಾಪಟ್ಟೆ ಟ್ರೆಂಡ್‌ನಲ್ಲಿದೆ, ಈ ರೀತಿ ಕುಡಿಯುವುದರಿಂದ ಅದರ ಟೇಸ್ಟ್ ಚೆನ್ನಾಗಿರಬಹುದು ಆದರೆ ಇದರಲ್ಲಿ ಹೆಚ್ಚು ಕಾರ್ಬೋ ಹೈಡ್ರೇಟ್‌ಗಳಿರುವ ಕಾರಣ ಇದು ಆರೋಗ್ಯಕ್ಕೆ ಒಳ್ಳೆಯದ್ದಲ್ಲ.