ನಡೆದೇ ಹೋಯ್ತು ಶಾಕಿಂಗ್ ಎಲಿಮಿನೇಷನ್: ಮೋಕ್ಷಿತಾನೂ ಅಲ್ಲ, ಹಂಸನೂ ಅಲ್ಲ... ಬಿಗ್‌ಬಾಸ್‌ನಿಂದ ಹೊರಬಿದ್ದಿದ್ದು ದೊಡ್ಮನೆಗೆ 400 ಜತೆ ಬಟ್ಟೆ ತಂದಿದ್ದ ಈ ಕಂಟೆಸ್ಟೆಂಟ್!
ಕನ್ನಡ ಬಿಗ್ ಬಾಸ್‌ನಲ್ಲಿ ಕಳೆದ ಒಂದೆರಡು ವಾರದಿಂದ ಎಲಿಮಿನೇಷನ್ ಪ್ರಕ್ರಿಯೆ ಸರಿಯಾಗಿ ನಡೆದಿಲ್ಲ. ಕಳೆದ ದಿನವೂ ಬಿಗ್ ಬಾಸ್‌ನಿಂದ ಯಾರು ಹೊರ ಹೋಗ್ತಾರೆ ಎಂಬ ಕುತೂಹಲ ಎಲ್ಲರನ್ನೂ ಮನೆಮಾಡಿತ್ತು. ಆದರೆ ಆ ಪ್ರಕ್ರಿಯೆಗೆ ಟ್ವಿಸ್ಟ್ ನೀಡಲಾಗಿದೆ.
ಈ ಮಧ್ಯೆ ಶಾಕಿಂಗ್ ವಿಚಾರ ಹೊರ ಬಿದ್ದಿದ್ದು, ದೊಡ್ಮನೆಗೆ 400 ಜತೆ ಬಟ್ಟೆ ತಂದಿದ್ದ ಓರ್ವ ಕಂಟೆಸ್ಟೆಂಟ್ ಹೊರಬಿದ್ದಿದ್ದಾರೆ ಎನ್ನಲಾಗಿದೆ. ಇದು ಅಚ್ಚರಿ ಎಲಿಮಿನೇಷನ್ ಆಗಿದೆ.
ಅಂದಹಾಗೆ ನಾವಿಂದು ಮಾತನಾಡುತ್ತಿರುವುದು ಕನ್ನಡ ಬಿಗ್ ಬಾಸ್ ಬಗ್ಗೆ ಅಲ್ಲ, ಬದಲಾಗಿ ಹಿಂದಿ ಬಿಗ್ ಬಾಸ್ ಬಗ್ಗೆ. ಸಲ್ಮಾನ್ ಖಾನ್ ಅವರ ಅತ್ಯಂತ ಜನಪ್ರಿಯ ಶೋ ಬಿಗ್ ಬಾಸ್ 18 ರಿಂದ ಇಲ್ಲಿಯವರೆಗೆ ಮೂವರು ಎಲಿಮಿನೇಟ್ ಆಗಿದ್ದಾರೆ. ಮನೆಯಿಂದ ಹೊರಹಾಕಲ್ಪಟ್ಟ ಮೊದಲ ಸ್ಪರ್ಧಿ ಹೇಮಾ ಶರ್ಮಾ. ಈಗ ಅವರ ನಂತರ ಮತ್ತಿಬ್ಬರು ಮಹಿಳಾ ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದಾರೆ. ಈ ಶೋನಲ್ಲಿ, ಪ್ರತಿ ಕ್ಷಣವೂ ಏನಾದರೊಂದು ಬದಲಾವಣೆಗಳು ನಡೆಯುತ್ತಲೇ ಇರುತ್ತವೆ.
ಬಿಗ್ ಬಾಸ್ 18 ಆರಂಭವಾಗಿ 20 ದಿನಗಳಾಗಿದ್ದು, ಈಗಾಗಲೇ 3 ಮಹಿಳಾ ಸ್ಪರ್ಧಿಗಳನ್ನು ಹೊರಹಾಕಲಾಗಿದೆ. ನೈರಾ ಬ್ಯಾನರ್ಜಿ ಮನೆಯಿಂದ ಹೊರಹಾಕಲ್ಪಟ್ಟ ನಂತರ, 14 ಸ್ಪರ್ಧಿಗಳು ಉಳಿದಿದ್ದಾರೆ. ಇವರಲ್ಲಿ ರಜತ್ ದಲಾಲ್, ಚುಮ್ ದಾರಂಗ್, ಶಿಲ್ಪಾ ಶಿರೋಡ್ಕರ್, ಅವಿನಾಶ್ ಮಿಶ್ರಾ, ಆಲಿಸ್ ಕೌಶಿಕ್, ಕರಣ್ವೀರ್ ಮೆಹ್ರಾ, ಅರ್ಫೀನ್ ಖಾನ್, ಸಾರಾ ಖಾನ್, ಶ್ರುತಿಕಾ ಅರ್ಜುನ್ ರಾಜ್, ವಿವಿಯನ್ ದ್ಸೇನಾ, ಶೆಹಜಾದಾ ಧಾಮಿ, ಇಶಾ ಸಿಂಗ್ ಮತ್ತು ಸಾರಾ ಖಾನ್ ಸೇರಿದ್ದಾರೆ.
ವರದಿಗಳ ಪ್ರಕಾರ, ನೈರಾ ಬ್ಯಾನರ್ಜಿ ಬಿಗ್ ಬಾಸ್ ಮನೆಗೆ 300 ರಿಂದ 400 ಜೋಡಿ ಬಟ್ಟೆಗಳನ್ನು ತೆಗೆದುಕೊಂಡು ಹೋಗಿದ್ದರಂತೆ. ಆದರೆ ಕೇವಲ 20 ದಿನಗಳಲ್ಲಿ ಹೊರಗೆ ಬಂದಿದ್ದಾರೆ. .
ಇನ್ನು ಈ ವಿಷಯಕ್ಕೆ ಸಂಬಂಧಿಸಿದಂತೆ ನೈರಾ ಬ್ಯಾನರ್ಜಿಯನ್ನು ಟ್ರೋಲ್ ಮಾಡಲಾಗಿತ್ತು. ಈ ಕಾರ್ಯಕ್ರಮದ ಮೊದಲು, ನೈರಾ 'ಖತ್ರೋನ್ ಕೆ ಕಿಲಾಡಿ 13' ನಲ್ಲಿ ಕಾಣಿಸಿಕೊಂಡಿದ್ದರು. ಅಂದಹಾಗೆ ನೈರಾ ಅವರ ನಿಜ ಹೆಸರು ಮಧುರಿಮಾ.