ಸುಟ್ಟು ಕರಕಲಾದ ಮನೆಯಲ್ಲಿ ತನ್ನ ಮರಿಗಳಿಗಾಗಿ ತಾಯಿ ಹುಡುಕಾಟ, ಇಲ್ಲಿದೆ ಮನಕಲಕುವ ದೃಶ್ಯ
ಕೋಲ್ಕತ್ತಾದ ಸಿಂಥಿಯಲ್ಲಿ ಬೆಂಕಿಯಿಂದಾಗಿ ಎಲ್ಲವೂ ಸುಟ್ಟು ಬೂದಿಯಾಗಿದೆ. ಅವಶೇಷಗಳ ಚಿತ್ರವು ಸುತ್ತಲೂ ಸ್ಪಷ್ಟವಾಗಿ ಗೋಚರಿಸುತ್ತದೆ. ಇಲ್ಲಿ ನಾಯಿಯೊಂದು ಬೂದಿಯನ್ನು ಅಗೆದು ತನ್ನ ಮಕ್ಕಳನ್ನು ಹುಡುಕಾಡುತ್ತಿರುವ ದೃಶ್ಯ ಮನ ಕಲಕುವಂತಿದೆ
7 ನಾಯಿಮರಿಗಳು ಎಲ್ಲಿಗೆ ಹೋದವು? ತಾಯಿ ನಾಯಿ ತನ್ನ ಮಕ್ಕಳನ್ನು ಹುಡುಕಿಕೊಂಡು ಅಲ್ಲಿ ಇಲ್ಲಿ ಅಲೆದಾಡುತ್ತಿದೆ. ಈ ದೃಶ್ಯವನ್ನು ಝೀ ನ್ಯೂಸ್ ತನ್ನ ಕ್ಯಾಮರಾದಲ್ಲಿ ಸೆರೆಹಿಡಿದಿದೆ.
ಸಿಂತಿ ಪೊಲೀಸ್ ಠಾಣೆ ವ್ಯಾಪ್ತಿಯ ರಾಮಲೀಲಾ ಬಗಾನ್‌ನಲ್ಲಿ ಸೋಮವಾರ ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯಿಂದ ಇಡೀ ಮನೆ ಸುಟ್ಟು ಬೂದಿಯಾಗಿದೆ.
ಅಶೋಕ್ ಚಂದ್ರಬಾಬು ಮತ್ತು ಅವರ ಕುಟುಂಬ ಸದಸ್ಯರು ಹೇಗೋ ಬದುಕುಳಿದಿದ್ದಾರೆ. ಆದರೆ, ಮನೆಯ ಹೊರಗೆ ಏನನ್ನೂ ತರಲಾಗಲಿಲ್ಲ. ಬೆಂಕಿಯು ಎಲ್ಲವನ್ನೂ ನುಂಗಿ ಹಾಕಿದೆ.
ಅಶೋಕ್ ಬಾಬು ಎಂಬುವವರ ಮನೆಯ ಪಕ್ಕದಲ್ಲೇ 7 ನಾಯಿಮರಿಗಳು ಹುಟ್ಟಿವೆ. ಆ ನಾಯಿಮರಿಗಳು ಕೇವಲ 2-3 ದಿನಗಳ ಹಿಂದೆ ಜನಿಸಿದವು. ಬೆಂಕಿ ಕಾಣಿಸಿಕೊಂಡ ನಂತರ ಆ ನಾಯಿಮರಿಗಳ ಯಾವುದೇ ಕುರುಹು ಕಂಡುಬಂದಿಲ್ಲ.
ಬೆಂಕಿ ತಗುಲಿ ನಾಯಿ ಮರಿಗಳು ಸಾವನ್ನಪ್ಪಿರಬಹುದು ಎಂದು ಸ್ಥಳೀಯರು ಹೇಳಿದ್ದಾರೆ. ಇದೇ ವೇಳೆ ನಾಯಿ ಮರಿಗಳಿಗೆ ಜನ್ಮ ನೀಡಿದ ತಾಯಿ ತನ್ನ ಮರಿಗಳನ್ನು ಹುಡುಕುತ್ತಾ ಅಲೆಯುತ್ತಿರುವ ದೃಶ್ಯ ಕರುಳು ಹಿಂಡುವಂತಿತ್ತು.