Surya Gochara 2023: ಯುವಾವಸ್ಥೆಗೆ ಸೂರ್ಯನ ಪ್ರವೇಶ, 4 ರಾಶಿಗಳ ಜನರ ಭಾಗ್ಯ ಬದಲಾವಣೆ, ಅಪಾರ ಧನಲಾಭದ ಯೋಗ!
ವೃಶ್ಚಿಕ ರಾಶಿ: ಸೂರ್ಯ ದೇವನ ಯುವಾವಸ್ಥೆಯಲ್ಲಿನ ಗೋಚರ ವೃಶ್ಚಿಕ ರಾಶಿಯ ಜಾತಕದವರ ಪಾಲಿಗೆ ಲಾಭದಾಯಕ ಸಿದ್ಧವಾಗಲಿದೆ. ಏಕೆಂದರೆ ಸೂರ್ಯದೇವ ನಿಮ್ಮ ರಾಶಿಯಲ್ಲಿ ಕರ್ಮಶಾನಾಗಿ ಬುದ್ಧಿ ಹಾಗೂ ಸಂತಾನ ಸ್ಥಾನದಲ್ಲಿ ವಿರಾಜಮಾನನಾಗಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ಬುದ್ಧಿಯ ಮೂಲಕ ನೀವು ನನವನ್ನು ಸಂಪಾದಿಸುವಿರಿ. ಸಂತಾನ ಕಡೆಯಿಂದ ಶುಭ ಸಮಾಚಾರ ಪ್ರಾಪ್ತಿಯಾಲಿದೆ. ಷೇರು ಮಾರುಕಟ್ಟೆ, ಲಾಟರಿಯಲ್ಲಿ ಹೂಡಿಕೆ ಮಾಡುವವರಿಗೆ ಧನಲಾಭವಾಗುವ ಸಾಧ್ಯತೆ ಇದೆ. ಈ ಸಮಯ ಶಿಕ್ಷಕರು, ಚಿಂತಕರು ಹಾಗೂ ಮ್ಯಾನೇಜರ್ ಕೆಲಸಗಳಿಗೆ ಸಂಬಂಧಿಸಿದ ಜನರಿಗೆ ಶುಭ ಸಾಬೀತಾಗಲಿದೆ. ಇನ್ನೊಂದೆಡೆ ನೌಕರ ವರ್ಗದ ಜನರಿಗೆ ಕಾರ್ಯಸ್ಥಳದಲ್ಲಿ ಯಾವುದಾದರೊಂದು ಹೊಸ ಜವಾಬ್ದಾರಿ ಪ್ರಾಪ್ತಿಯಾಗುವ ಸಾಧ್ಯತೆ ಇದೆ.
ಮಿಥುನ ರಾಶಿ: ಸೂರ್ಯನ ಯುವಾವಸ್ಥೆ ಪ್ರವೇಶ ಮಿಥುನ ರಾಶಿಯ ಜಾತಕದವರಿಗೆ ಶುಭ ಸಾಬೀತಾಗಲಿದೆ. ಏಕೆಂದರೆ ಸೂರ್ಯದೇವ ನಿಮ್ಮ ಜಾತಕದ ಸಾಹಸ ಹಾಗೂ ಪರಾಕ್ರಮ ಭಾವದ ಅಧಿಪತಿಯಾಗಿ ನಿಮ್ಮ ಕರ್ಮ ಭಾವದಲ್ಲಿ ವಿರಾಜಮಾನನಾಗಿದ್ದಾನೆ. ಇದರಿಂದ ನಿಮಗೆ ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಅಂದರೆ ನಿಮ್ಮ ಪರಿಶ್ರಮದಿಂದ ನಿಮಗೆ ಧನಲಾಭ ಸಿಗುವ ಸಾಧ್ಯತೆ ಇದೆ. ಇದರಿಂದ ನೀವು ನಿಮ್ಮ ಜೀವನಶೈಲಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಗಮನಿಸಬಹುದು, ನೌಕರಿ-ವ್ಯಾಪಾರದಲ್ಲಿ ಬಡ್ತಿ-ಅಭಿವೃದ್ಧಿಯ ಸಾಧ್ಯತೆ ಇದೆ. ವ್ಯಾಪಾರಿಗಳ ಸಿಕ್ಕಿಬಿದ್ದ ಹಣ ಅವರಿಗೆ ಸಿಗಲಿದೆ. ಇದಲ್ಲದೆ ವ್ಯಾಪಾರಿಗಳಿಗೆ ಹೊಸ ಆರ್ಡರ್ಗಳು ಬರುವ ಸಾಧ್ಯತೆ ಇದ್ದು, ಇದರಿಂದ ಅವರಿಗೆ ಅಪಾರ ಧನಲಾಭವಾಗಲಿದೆ. ಈ ಅವಧಿಯಲ್ಲಿ ನಿಮಗೆ ನಿಮ್ಮ ತಂದೆಯಿಂದ ಸಂಪೂರ್ಣ ಬೆಂಬಲ ಸಿಗಲಿದೆ.
ವೃಷಭ ರಾಶಿ: ಸೂರ್ಯದೇವನ ಯುವಾವಸ್ಥೆಯಲ್ಲಿನ ಗೋಚರ. ವೃಷಭ ರಾಶಿಯ ಜಾತಕದ್ವಾರ ಪಾಲಿಗೆ ಅಂತ್ಯಂತ ಶುಭ ಸಾಬೀತಾಗಲಿದೆ. ಏಕೆಂದರೆ ಸೂರ್ಯ ಹಾಗೂ ಗುರು ಗ್ರಹ ನಿಮ್ಮ ರಾಶಿಯ ಆದಾಯ ಭಾವದಲ್ಲಿ ವಿರಾಜಮಾನನಾಗಿದ್ದಾನೆ. ಜೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯ ಸಂಪತ್ತು, ಸುಖ-ಸಮೃದ್ಧಿ, ತಾಯಿಯ ಸುಖ ಹಾಗೂ ಕೃಷಿಯ ಕಾರಕ ಗ್ರಹನಾಗಿದ್ದಾನೆ. ಹಳೆ ಹೂಡಿಕೆಯಿಂದ ನಿಮಗೆ ಲಾಭ ಸಿಗಲಿದೆ. ಜೊತೆಗೆ ಈ ಅವಧಿಯಲ್ಲಿ ನೌಕರವರ್ಗದ ಜನರಿಗೆ ಪದೋನ್ನತಿಯ ಎಲ್ಲಾ ಯೋಗಗಳಿವೆ. ಈ ಅವಧಿಯಲ್ಲಿ ನೀವು ವಾಹನ ಹಾಗೂ ಆಸ್ತಿ ಪಾಸ್ತಿ ಖರೀದಿಸುವ ಸಾಧ್ಯತೆ ಇದೆ.
ಕರ್ಕ ರಾಶಿ: ಕರ್ಕ ರಾಶಿಯ ಜನರ ಜಾತಕದವರಿಗೆ ಸೂರ್ಯನ ಯುವಾವಸ್ಥೆಯ ಗೋಚರ ಅತ್ಯಂತ ಲಾಭಪ್ರದ ಸಾಬೀತಾಗಲಿದೆ. ಏಕೆಂದರೆ ಸೂರ್ಯದೇವ ನಿಮ್ಮ ರಾಶಿಯಲ್ಲಿ ನವಮೇಶನಾಗಿದ್ದು. ಇದನ್ನು ಭಾಗ್ಯ ಹಾಗೂ ವಿದೇಶದ ಭಾಗ್ಯ ಎಂದು ಭಾವಿಸಲಾಗುತ್ತದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ಇದರ ಜೊತೆಗೆ ನಿಮ್ಮ ಆತ್ಮವಿಶ್ವಾಸದಲ್ಲಿ ನೀವು ವೃದ್ಧಿಯನ್ನು ಕೂಡ ಗಮನಿಸಬಹುದು. ಸ್ಪರ್ಧಾತ್ಮಕ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ. ನಿಮಗೆ ನಿಮ್ಮ ಕಾರ್ಯದಲ್ಲಿ ಕಾರ್ಯಸಿದ್ಧಿಯ ಯೋಗ ಪ್ರಾಪ್ತಿಯಾಗಲಿದೆ. ಸಹೋದರ ಸಹೋದರಿಯರ ಬೆಂಬಲ ಸಿಗಲಿದೆ. ಧರ್ಮ ಕಾರ್ಯಗಳಲ್ಲಿ ನಿಮ್ಮ ಅಭಿರುಚಿ ಹೆಚ್ಚಾಗಲಿದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)