ಬುಧಾದಿತ್ಯ ರಾಜಯೋಗದಿಂದ ಸೆಪ್ಟೆಂಬರ್‌ನಲ್ಲಿ ಈ ರಾಶಿಗಳ ಅದೃಷ್ಟ ಸೂರ್ಯನಂತೆ ಹೊಳೆಯಲಿದೆ..!

Tue, 03 Sep 2024-8:20 pm,

ಬುಧನ ಸ್ವಂತ ರಾಶಿಯಲ್ಲಿ 1 ವರ್ಷದ ನಂತರ ಈ ರಾಜಯೋಗ ರೂಪಗೊಳ್ಳುತ್ತದೆ. ಈ ರಾಜಯೋಗದ ಪ್ರಭಾವ ಎಲ್ಲಾ ರಾಶಿಗಳ ಮೇಲೆ ಕಂಡುಬಂದರೂ 3 ರಾಶಿಯವರ ಜೀವನ ಉತ್ತಮ ಮತ್ತು ಸಮೃದ್ಧವಾಗಿರುತ್ತದೆ. ಹಾಗಾದ್ರೆ ಈಗ ಕನ್ಯಾರಾಶಿಯಲ್ಲಿ ರೂಪಗೊಳ್ಳುವ ಬುಧಾದಿತ್ಯ ರಾಜಯೋಗದಿಂದ ಯಾವ ರಾಶಿಯವರಿಗೆ ಅದೃಷ್ಟ ಒಲಿಯುತ್ತದೆ ಅನ್ನೋದರ ಬಗ್ಗೆ ತಿಳಿಯಿರಿ.

ಸಿಂಹ ರಾಶಿಯ 2ನೇ ಮನೆಯಲ್ಲಿ ಹೊಸ ರಾಜಯೋಗ ಸೃಷ್ಟಿಯಾಗುತ್ತದೆ. ಇದರಿಂದ ಈ ರಾಶಿಯವರ ಆತ್ಮವಿಶ್ವಾಸ ಹೆಚ್ಚಲಿದ್ದು, ಸಾಕಷ್ಟು ಧನಲಾಭ ದೊರೆಯುತ್ತದೆ. ಪರಿಣಾಮ ನಿಮ್ಮ ಎಲ್ಲಾ ಆಸೆಗಳು ಈಡೇರುತ್ತವೆ. ಹೊಸ ಸ್ನೇಹ ನಿಮಗೆ ಅನೇಕ ರೀತಿಯಲ್ಲಿ ಸಹಾಯ ಮಾಡುತ್ತದೆ. ಈ ಸಮಯದಲ್ಲಿ ವ್ಯಾಪಾರ ವಿಸ್ತರಿಸುವ ಅವಕಾಶವೂ ದೊರೆಯಲಿದೆ. ವ್ಯಾಪಾರಿಗಳಿಗೆ ಅಧಿಕ ಲಾಭ ಸಿಗುವ ಸಾಧ್ಯತೆ ಹೆಚ್ಚಾಗಿದೆ. ಸಿಂಹ ರಾಶಿಯವರ ಜ್ಞಾನ ವೃದ್ಧಿಯಾಗಲಿದೆ. ನೀವು ಜೀವನದಲ್ಲಿ ಪ್ರಗತಿಯನ್ನು ಕಾಣುವಿರಿ. ಸಮಾಜದಲ್ಲಿ ನಿಮ್ಮ ಗೌರವ ಸಹ ಹೆಚ್ಚಾಗಲಿದೆ.

ವೃಶ್ಚಿಕ ರಾಶಿಯ 11ನೇ ಮನೆಯಲ್ಲಿ ಬುಧಾದಿತ್ಯ ರಾಜಯೋಗ ರಚನೆಯಾಗಲಿದೆ. ಇದರಿಂದ ಆದಾಯದಲ್ಲಿ ಉತ್ತಮ ಹೆಚ್ಚಳವಾಗುತ್ತದೆ. ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ದೊರೆಯುವ ಸಾಧ್ಯತೆಯಿದೆ. ಇದರ ಮೂಲಕ ನೀವು ಅನೇಕ ಕಾರ್ಯಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತೀರಿ. ನೀವು ಈಗಾಗಲೇ ಹೂಡಿಕೆ ಮಾಡಿದ್ದರೆ, ಅದರಿಂದ ಉತ್ತಮ ಆದಾಯ ಪಡೆಯುತ್ತೀರಿ. ನವವಿವಾಹಿತರು ಮಕ್ಕಳು ಪಡೆಯುವ ಸಾಧ್ಯತೆಯಿದೆ. ಬಹುಕಾಲದ ನಿಮ್ಮ ಎಲ್ಲಾ ಆಸೆಗಳು ಈಡೇರುತ್ತವೆ. ನಿಮ್ಮ ಯೋಜಿತ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ.

ಮಕರ ರಾಶಿಯ 9ನೇ ಮನೆಯಲ್ಲಿ ಬುಧಾದಿತ್ಯ ರಾಜಯೋಗ ರಚನೆಯಾಗಲಿದೆ. ಈ ಕಾರಣದಿಂದ ಮಕರ ರಾಶಿಯವರ ಅದೃಷ್ಟ ಅನುಕೂಲಕರವಾಗಿರುತ್ತದೆ. ವಿದೇಶ ಪ್ರವಾಸಕ್ಕೆ ನಿಮಗೆ ಅವಕಾಶ ದೊರೆಯಲಿದೆ. ನೀವು ನಿಮ್ಮ ಜೀವನದಲ್ಲಿ ಸುಖ-ಸಂತೋಷ ಪಡೆಯುತ್ತೀರಿ. ವ್ಯಾಪಾರದಲ್ಲಿ ಅಧಿಕ ಅಭಿವೃದ್ಧಿ ಕಂಡುಬರಲಿದೆ. ಉದ್ಯೋಗಿಗಳಿಗೆ ವೇತನ ಹೆಚ್ಚಳವಾಗುವ ಸಾಧ್ಯತೆಯಿದೆ. ಕೆಲಸಕ್ಕೆ ಸಂಬಂಧಿಸಿದ ಪ್ರವಾಸ ಕೈಗೊಳ್ಳಬೇಕಾಗಬಹುದು. ಈ ಪ್ರವಾಸ ನಿಮಗೆ ಆರ್ಥಿಕ ಲಾಭವನ್ನು ತರುತ್ತದೆ. ಮುಖ್ಯವಾಗಿ ಈ ಸಮಯದಲ್ಲಿ ನೀವು ಬಹಳಷ್ಟು ಹಣ ಗಳಿಸುತ್ತೀರಿ ಮತ್ತು ಉಳಿಸುತ್ತೀರಿ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link