Deadliest Birds: ಇವೇ ನೋಡಿ ಪ್ರಪಂಚದ ಅತ್ಯಂತ ಅಪಾಯಕಾರಿ ಪಕ್ಷಿಗಳು!

Wed, 27 Sep 2023-8:19 pm,

ಪಕ್ಷಿಗಳು ಅಪಾಯಕಾರಿ ಎಂದು ಯಾರಾದರೂ ಹೇಳಿದರೆ, ನೀವು ನಂಬುವುದಿಲ್ಲ. ಅತ್ಯಂತ ಆಕ್ರಮಣಕಾರಿಯಾಗಿ ಆಕ್ರಮಣ ಮಾಡುವ ಕೆಲವು ಅಪಾಯಕಾರಿ ಪಕ್ಷಿಗಳು ಜಗತ್ತಿನಲ್ಲಿವೆ.

ದಕ್ಷಿಣ ಕ್ಯಾಸೋವರಿ(Southern Cassowary)ಗಳು ಆಸ್ಟ್ರೇಲಿಯಾದ ಸ್ಥಳೀಯ ಪಕ್ಷಿಗಳು. ಅಳಿವಿನಂಚಿನಲ್ಲಿರುವ ಪ್ರಭೇದಗಳ ವರ್ಗಕ್ಕೆ ತಲುಪುತ್ತಿದ್ದರೂ, ಇವುಗಳ ಮಾರಣಾಂತಿಕ ದಾಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

ಈ ಪಕ್ಷಿ(Pithoi)ಗಳು ನ್ಯೂ ಗಿನಿಯಾದಲ್ಲಿ ಕಂಡುಬರುತ್ತವೆ. ಇವು ವಿಷಕಾರಿ ಪಕ್ಷಿಗಳಂತೆ. ಇವು ತಮ್ಮ ಕೊಕ್ಕಿನಿಂದ ಬೇಟೆಯಾಡಿದರೆ ಮನುಷ್ಯರು ಸಹಿತ ಯಾರೂ ಬದುಕಲು ಸಾಧ್ಯವಿಲ್ಲವಂತೆ.

ಇದನ್ನು ಕುರಿಮರಿ ರಣಹದ್ದು(lammergear) ಎಂದೂ ಕರೆಯುತ್ತಾರೆ. ಇದರ ಹಿಡಿತ ಎಷ್ಟು ಬಲಿಷ್ಠವಾಗಿರುತ್ತದೆ ಎಂದರೆ, ಪ್ರಾಣಿಗಳು ಮತ್ತು ಮಕ್ಕಳನ್ನು ಸಹ ಹಿಡಿದುಕೊಂಡು ಇವು ಹಾರಿಹೋಗುತ್ತವಂತೆ.

ಇವು ದಕ್ಷಿಣ ಅಮೆರಿಕಾದಲ್ಲಿ ಕಂಡುಬರುತ್ತವೆ. ಇವುಗಳ ರೆಕ್ಕೆಗಳು ಸುಮಾರು ಆರೂವರೆ ಅಡಿ ಉದ್ದವಿರುತ್ತವೆ. ಇವುಗಳ ರೆಕ್ಕೆಗಳು ಮತ್ತು ಉಗುರುಗಳು ತುಂಬಾ ಬಲವಾಗಿರುತ್ತವೆ. ಇವು ಕೋತಿಗಳನ್ನು ಹೊತ್ತುಕೊಂಡು ಹಾರಿಹೋಗುತ್ತವಂತೆ.

ಆಸ್ಟ್ರೇಲಿಯನ್ ಮ್ಯಾಗ್ಪೀಸ್(Australian Magpie) ಯಾವುದೇ  ಸಮಯದಲ್ಲಾದರೂ ತನ್ನ ಗುರಿಯ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಇವುಗಳ ಮಾರಕ ದಾಳಿಯಿಂದ ಸಾವಿರಾರು ಜನರು ಗಾಯಗೊಂಡಿದ್ದಾರೆ. ಇವುಗಳಿರುವ ಪ್ರದೇಶಗಳಲ್ಲಿ ವಾಸಿಸುವ ಜನರು ವಿಶೇಷವಾಗಿ ತೊಂದರೆಗೀಡಾಗುತ್ತಾರೆ. ಇವುಗಳ ದಾಳಿಯಿಂದ ಮನುಷ್ಯರು ಸಹ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲವಂತೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link