ಅನಿಲ್ ಕುಂಬ್ಳೆ ಪತ್ನಿ ಯಾರು ಗೊತ್ತಾ? ವಿಚ್ಛೇದಿತೆಯನ್ನೇ ವರಿಸಿದ್ದಲ್ಲದೆ ಕಾನೂನು ಹೋರಾಟ ಮಾಡಿ ಆಕೆಯ ಮಗಳನ್ನು ದತ್ತು ಪಡೆದಿದ್ರು ʼಜಂಬೋʼ
ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಯಶಸ್ವಿ ಕ್ರಿಕೆಟಿಗ ಮಾತ್ರವಲ್ಲದೆ ಯಶಸ್ವಿ ಪ್ರೇಮಿಯೂ ಹೌದು. ಅವರು ಒಂದು ಮಗುವಿನ ತಾಯಿಯ ವಿಶ್ವಾಸ ಗಳಿಸಿದ್ದಲ್ಲದೆ, ಕಾನೂನು ಹೋರಾಟದ ಮೂಲಕ ಮಗಳ ಬೆಂಬಲವನ್ನೂ ಪಡೆದು ದತ್ತು ಪಡೆದಿದ್ದರು. ಈಗ ಮೂರು ಮಕ್ಕಳೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.
ಅನಿಲ್ ಕುಂಬ್ಳೆ 17 ಅಕ್ಟೋಬರ್ 1970 ರಂದು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಕೃಷ್ಣ ಸ್ವಾಮಿ ಮತ್ತು ಸರೋಜ ದಂಪತಿಯ ಮಗನಾಗಿ ಜನಿಸಿದರು. ಅವರ ಮೂಲ ಹೆಸರು ರಾಧಾಕೃಷ್ಣ ಕುಂಬ್ಳೆ, ನಂತರ ಅವರು ಅನಿಲ್ ಕುಂಬ್ಳೆ ಎಂದು ಪ್ರಸಿದ್ಧರಾದರು.
ವ್ಯಾಸಂಗದ ಜೊತೆಗೆ ಕ್ರಿಕೆಟ್ ಮೇಲೆ ಅನಿಲ್‌ಗೆ ವಿಶೇಷ ಪ್ರೀತಿ ಇತ್ತು. ಶಾಲಾ ಶಿಕ್ಷಣದ ನಂತರ, 1990 ರಲ್ಲಿ ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ ಸ್ಪಿನ್ ಬೌಲಿಂಗ್ ಮಾಡಿ ಇಡೀ ಕ್ರಿಕೆಟ್ ಜಗತ್ತಿನ ಗಮನ ಸೆಳೆದರು.
ಇಷ್ಟಾದರೂ ಅಧ್ಯಯನ ಬಿಡದ ಅನಿಲ್, 1992 ರಲ್ಲಿ ರಾಷ್ಟ್ರೀಯ ವಿದ್ಯಾಲಯ ಕಾಲೇಜ್ ಆಫ್ ಎಂಜಿನಿಯರಿಂಗ್‌ನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದರು. ಸ್ಪಿನ್ ಬೌಲರ್ ಆಗಿ ವೃತ್ತಿ ಜೀವನ ಆರಂಭಿಸಿದ ಕುಂಬ್ಳೆ ಟೀಂ ಇಂಡಿಯಾ ನಾಯಕನೂ ಆಗಿದ್ದರು. ನಿವೃತ್ತಿಯ ನಂತರಭಾರತ ತಂಡದ ಕೋಚ್ ಆಗಿಯೂ ಕೆಲಸ ಮಾಡಿದ್ದರು.
ಇನ್ನು ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ, ಭಾರತೀಯ ಕ್ರಿಕೆಟ್ʼನಲ್ಲಿ 'ಜಂಬೋ' ಎಂದೇ ಖ್ಯಾತರಾಗಿರುವ ಅನಿಲ್ ಕುಂಬ್ಳೆ ಅವರ ಪತ್ನಿಯ ಹೆಸರು ಚೇತನಾ ರಾಮತೀರ್ಥ. ಚೇತನಾ 1986 ರಲ್ಲಿ ಮೈಸೂರಿನ ಅಂಗಡಿಯ ದಲ್ಲಾಳಿಯೊಬ್ಬನನ್ನು ವಿವಾಹವಾದರು. ಆದರೆ ಅವರ ಆ ಸಂಬಂಧದಲ್ಲಿ ನೆಮ್ಮದಿ ಮತ್ತು ವಿಶ್ವಾಸ ಕಾಣದ ಕಾರಣ, ಚೇತನಾ ಮತ್ತು ಅನಿಲ್ 1999 ರಲ್ಲಿ ವಿವಾಹವಾದರು.
1998ರಲ್ಲಿ ತನ್ನ ಬ್ರೋಕರ್ ಗಂಡನ ಜೊತೆಗಿನ ಸಂಬಂಧವನ್ನು ಮುರಿದುಕೊಂಡ ಚೇತನಾ ಅನಿಲ್ ಬೆಂಬಲದಿಂದ ಟ್ರಾವೆಲ್ ಏಜೆನ್ಸಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ್ದರು. ಚೇತನಾ ತನ್ನ ಮೊದಲ ಗಂಡನಿಂದ ಪಡೆದ ಮಗಳನ್ನು ತನ್ನೊಂದಿಗೆ ಬೆಳೆಸಲು ಬಯಸಿದ್ದರೂ, ಆತ ಅದನ್ನು ವಿರೋಧಿಸಿದ್ದ.
ಹೀಗಾಗಿ ಕಾನೂನು ಹೋರಾಟದ ನಂತರ ಅನಿಲ್ ಕುಂಬ್ಳೆ ಮತ್ತು ಚೇತನಾ ಮಗಳ ಬೆಂಬಲವನ್ನು ಗೆದ್ದರು. ಇದೀಗ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ತಮ್ಮ ಪತ್ನಿ ಚೇತನಾ ಮತ್ತು ಮೂವರು ಮಕ್ಕಳೊಂದಿಗೆ (ಅರುಣಿ, ಮಾಯಾ ಮತ್ತು ಸ್ವಸ್ತಿ) ಸಂತೋಷದ ಜೀವನ ನಡೆಸುತ್ತಿದ್ದಾರೆ.