ಕಾರಿನಂತ ವೈಶಿಷ್ಟ್ಯಗಳನ್ನು ಹೊಂದಿರುವ ಹೊಸ ಹೋಂಡಾ ಆಕ್ಟಿವಾ

Tue, 24 Jan 2023-12:54 pm,

ಹೋಂಡಾ ತನ್ನ ಅತ್ಯುತ್ತಮ ಮಾರಾಟವಾದ ಸ್ಕೂಟರ್ ಹೋಂಡಾ ಆಕ್ಟಿವಾವನ್ನು ಹೊಸ ಅವತಾರದಲ್ಲಿ ಬಿಡುಗಡೆ ಮಾಡಿದ್ದು, ಇದಕ್ಕೆ  ಹೋಂಡಾ ಆಕ್ಟಿವಾ ಹೆಚ್-ಸ್ಮಾರ್ಟ್ ಎಂದು ಹೆಸರಿಟ್ಟಿದೆ. ಈ ಸ್ಕೂಟರ್‌ನ ವಿಶೇಷತೆ ಎಂದರೆ ಇದು  ಆಧುನಿಕ ಕಾರುಗಳಲ್ಲಿ ಕಂಡುಬರುವ ಅಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಕಂಪನಿಯು ಸ್ಕೂಟರ್‌ನ ಆರಂಭಿಕ ಬೆಲೆಯನ್ನು 74,536 ರೂ. ಮತ್ತು ಟಾಪ್ ವೆರಿಯಂಟ್‌ನ ಬೆಲೆಯನ್ನು 80,537 ರೂ. ನಿಗದಿಗೊಳಿಸಿದೆ. ಈ ಫೋಟೋ ಗ್ಯಾಲರಿಯಲ್ಲಿ ಹೋಂಡಾ ಆಕ್ಟಿವಾ ಹೆಚ್-ಸ್ಮಾರ್ಟ್ ನ 4 ಉತ್ತಮ ವೈಶಿಷ್ಟ್ಯಗಳ ಬಗ್ಗೆ ಹೇಳಲಿದ್ದೇವೆ. ಈ ಎಲ್ಲಾ ನಾಲ್ಕು ವೈಶಿಷ್ಟ್ಯಗಳು ಅದರ ಸ್ಮಾರ್ಟ್ ಕೀಗೆ ಸಂಪರ್ಕ ಹೊಂದಿವೆ. 

ಸ್ಮಾರ್ಟ್ ಫೈಂಡ್:  ಸ್ಮಾರ್ಟ್ ಫೈಂಡ್ ಸ್ಕೂಟರ್‌ನ ಅತ್ಯುತ್ತಮ ವೈಶಿಷ್ಟ್ಯವೆಂದರೆ ಕಿಕ್ಕಿರಿದ ಪಾರ್ಕಿಂಗ್ ಸ್ಥಳದಲ್ಲಿಯೂ ಇದನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಸ್ಕೂಟರ್‌ನ ಕೀಲಿಯಲ್ಲಿ ಒಂದು ಬಟನ್ ನೀಡಲಾಗಿದೆ, ಅದನ್ನು ಒತ್ತಿದಾಗ, ಸ್ಕೂಟರ್‌ನ ಸೂಚಕಗಳು ಉರಿಯಲು ಪ್ರಾರಂಭಿಸುತ್ತವೆ. ಇದರ ವಿಶೇಷತೆ ಎಂದರೆ ನೀವು  ಸ್ಕೂಟರ್‌ನಿಂದ 10 ಮೀಟರ್ ದೂರದಲ್ಲಿದ್ದರೂ ಈ ವೈಶಿಷ್ಟ್ಯ ಕಾರ್ಯನಿರ್ವಹಿಸುತ್ತದೆ.

ಸ್ಮಾರ್ಟ್ ಅನ್‌ಲಾಕ್:  ಸ್ಮಾರ್ಟ್ ಅನ್‌ಲಾಕ್ ಇದರ ಹೆಸರೇ ಸೂಚಿಸುವಂತೆ ಸ್ಕೂಟರ್‌ನ ಸ್ಮಾರ್ಟ್ ಕೀನಲ್ಲಿ ಎರಡನೇ ಬಟನ್ ಸಹ ಲಭ್ಯವಿದೆ. ಇದನ್ನು ಪ್ರೆಸ್ ಮಾಡಿ ಇದನ್ನು ಸುಲಭವಾಗಿ ಲಾಕ್, ಅನ್‌ಲಾಕ್ ಮಾಡಬಹುದು. ಇದರಲ್ಲಿ ಬಟನ್ ಒತ್ತಿದ ನಂತರ  ಒಂದು ನಾಬ್ ಅನ್ನು ತಿರುಗಿಸಬೇಕಾಗುತ್ತದೆ. ನಂತರವಷ್ಟೇ  ನೀವು ಸ್ಕೂಟರ್‌ನ ಸೀಟ್ ಅಥವಾ ಇಂಧನ ಮುಚ್ಚಳವನ್ನು ತೆರೆಯಬಹುದು. 

ಸ್ಮಾರ್ಟ್ ಸ್ಟಾರ್ಟ್: ಸ್ಮಾರ್ಟ್ ಸ್ಟಾರ್ಟ್ ಸ್ಕೂಟರ್ ಅನ್ನು ಸ್ಟಾರ್ಟ್ ಮಾಡಲು ನೀವು ಇದಕ್ಕೆ ಕೀ ಹಾಕುವ ಅಗತ್ಯವೇ ಇಲ್ಲ. ಆದರೆ, ಇದರ ಸ್ಮಾರ್ಟ್ ಕೀ ಅಂತು ನಿಮ್ಮ ಕಿಸೆಯಲ್ಲಿ ಇರಲೇಬೇಕು. 

ಸ್ಮಾರ್ಟ್ ಸೇಫ್: ಹೋಂಡಾ ಆಕ್ಟಿವಾದ ಈ ಸ್ಮಾರ್ಟ್ ಸೇಫ್ ಸ್ಕೂಟರ್‌ನ ಬಹಳ ಮುಖ್ಯ ವೈಶಿಷ್ಟ್ಯವೆಂದರೆ ನೀವು ಕೀಲಿಯೊಂದಿಗೆ ಸ್ಕೂಟರ್‌ನಿಂದ 2 ಮೀಟರ್‌ಗಿಂತ ಹೆಚ್ಚು ದೂರ ಹೋದ ತಕ್ಷಣ, ಅದು ಲಾಕ್ ಆಗುತ್ತದೆ. ಮೂಲ ಕೀಲಿ ಇಲ್ಲದೆ ಸ್ಕೂಟರ್ ಅನ್‌ಲಾಕ್ ಆಗುವುದಿಲ್ಲ. ಹೀಗಾಗಿ, ಈ ಸ್ಕೂಟರ್ ಅನ್ನು ಖದಿಯುವುದೂ ಕೂಡ ಸುಲಭವಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link