ಅಂದು ಕ್ರಿಕೆಟ್ ಜಗತ್ತನ್ನೇ ಆಳಿದ್ದಾತನಿಗೆ ಇಂದು ಬೇಡಿ ತಿನ್ನುವ ಗತಿ... ಒಂದೊತ್ತಿನ ಊಟಕ್ಕೂ ಅಲೆದಾಡುತ್ತಿದ್ದಾನೆ ಭಾರತದ ʼಅಂದಿನʼ ದಿಗ್ಗಜ! ಸಚಿನ್‌ಗಿಂತಲೂ ಗ್ರೇಟ್ ಎನಿಸಿಕೊಂಡಿದ್ದ ಕ್ರಿಕೆಟಿಗನೀತ
ಭಾರತವು ಜಗತ್ತಿಗೆ ಎಂತೆಂಥಾ ಶ್ರೇಷ್ಠ ಕ್ರಿಕೆಟಿಗರನ್ನು ಕೊಡುಗೆಯಾಗಿ ನೀಡಿದೆ. ಇವರಲ್ಲಿ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ಮಹೇಂದ್ರ ಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿ ಕೂಡ ಸೇರಿದ್ದಾರೆ. ಆದರೆ ಸಚಿನ್‌ಗಿಂತಲೂ ಉತ್ತಮ ಎಂದು ಪರಿಗಣಿಸಲ್ಪಟ್ಟ ಒಬ್ಬ ಬ್ಯಾಟ್ಸ್‌ಮನ್ ಇದ್ದಾರೆ. ಆದರೆ ಈ ಆಟಗಾರನ ವೃತ್ತಿಜೀವನವು ಹೆಚ್ಚು ಕಾಲ ಉಳಿಯಲಿಲ್ಲ.
ಆ ಕ್ರಿಕೆಟಿಗ ಬೇರಾರು ಅಲ್ಲ... ವಿನೋದ್ ಕಾಂಬ್ಳಿ. ತಮ್ಮ ಜೀವನದಲ್ಲಿ ಎರಡು ಬಾರಿ ವಿವಾಹವಾದ ಈ ಕ್ರಿಕೆಟಿಗ, ಸಚಿನ್ ತೆಂಡೂಲ್ಕರ್ ಆಪ್ತ ಗೆಳೆಯನೂ ಹೌದು.
ವಿನೋದ್ ಕಾಂಬ್ಳಿ 18 ಜನವರಿ 1972 ರಂದು ಮುಂಬೈನಲ್ಲಿ ಜನಿಸಿದರು. ಚಿಕ್ಕಂದಿನಿಂದಲೂ ಚಿನ್ನಾಭರಣ ಧರಿಸುವುದು ಇವರಿಗೆ ಬಹಳ ಇಷ್ಟವಂತೆ. ವಿನೋದ್ ಕಾಂಬ್ಳಿ ಮತ್ತು ಸಚಿನ್ ತೆಂಡೂಲ್ಕರ್ ತಮ್ಮ ಶಾಲಾ ದಿನಗಳಲ್ಲಿ ಒಟ್ಟಿಗೆ ಕ್ರಿಕೆಟ್ ಆಡುತ್ತಿದ್ದರು. ಶಾರದಾಶ್ರಮ ಶಾಲೆಯ ಪರ ಆಡುವಾಗ ಇಬ್ಬರೂ 664 ರನ್‌ಗಳ ಜೊತೆಯಾಟವಾಡಿದ್ದರು. ಈ ಅವಧಿಯಲ್ಲಿ ಕಾಂಬ್ಳಿ ಔಟಾಗದೆ 349 ರನ್ ಗಳಿಸಿದ್ದರು ಎನ್ನಲಾಗಿದೆ.
ಸಚಿನ್ ತೆಂಡೂಲ್ಕರ್ 1989 ರಲ್ಲಿ ಟೀಂ ಇಂಡಿಯಾ ಪರ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. 1991ರಲ್ಲಿ ಪಾಕಿಸ್ತಾನ ವಿರುದ್ಧ ವಿನೋದ್ ಕಾಂಬ್ಳಿಗೆ ಈ ಅವಕಾಶ ಸಿಕ್ಕಿತ್ತು. ಇದರ ನಂತರ, ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎಷ್ಟು ಅದ್ಭುತವಾಗಿ ಬ್ಯಾಟ್ ಮಾಡಿದರು ಎಂದರೆ ಎಲ್ಲರೂ ಅವರ ಪರಾಕ್ರಮವನ್ನು ಹೊಗಳಿ ಅಟ್ಟಕ್ಕೇರಿಸಿದ್ದರು. ಇನ್ನು ಕಾಂಬ್ಳಿ ಲಾಂಗ್ ಸಿಕ್ಸರ್ ಬಾರಿಸಿ ಫೇಮಸ್ ಆಗಿದ್ದರು.
ವಿನೋದ್ ಕಾಂಬ್ಳಿ ಅವರು ಚೊಚ್ಚಲ ಪಂದ್ಯದ ನಂತರ ಟೀಮ್ ಇಂಡಿಯಾ ಪರ ಅದ್ಭುತ ಬ್ಯಾಟಿಂಗ್ ಮುಂದುವರಿಸಿದ್ದರು. ಮೊದಲ 7 ಪಂದ್ಯಗಳಲ್ಲಿ 4 ಶತಕಗಳನ್ನು ಗಳಿದ್ದು, ಅದರಲ್ಲಿ ಎರಡು ದ್ವಿಶತಕಗಳು ಕೂಡ ಸೇರಿವೆ. ಇಅಷ್ಟೇ ಅಲ್ಲ, ಅವರು ಭಾರತದ ಪರ ಟೆಸ್ಟ್ ಪಂದ್ಯಗಳಲ್ಲಿ ವೇಗವಾಗಿ 1000 ರನ್ ಪೂರೈಸಿದ್ದು, ಕೇವಲ 14 ಟೆಸ್ಟ್ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರು.
ವಿನೋದ್ ಕಾಂಬ್ಳಿ ತಮ್ಮ ಬ್ಯಾಟಿಂಗ್‌ಗಿಂತ ಅಶಿಸ್ತಿನಿಂದಲೇ ಹೆಚ್ಚು ಸುದ್ದಿಯಲ್ಲಿದ್ದರು. ನಂತರ ಕಳಪೆ ಫಾರ್ಮ್‌ನಿಂದಾಗಿ ಅವರು ಟೀಮ್ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅವರ ವೃತ್ತಿಜೀವನದಲ್ಲಿ, ಭಾರತದ ಪರ 17 ಟೆಸ್ಟ್ ಪಂದ್ಯಗಳಲ್ಲಿ 54.20 ರ ಸರಾಸರಿಯಲ್ಲಿ 1084 ರನ್ ಗಳಿಸಿದ್ದರು. ಇದರಲ್ಲಿ ಮೂರು ಅರ್ಧ ಶತಕಗಳು ಸೇರಿವೆ.
ವಿನೋದ್ ಕಾಂಬ್ಳಿ ತಮ್ಮ ವೃತ್ತಿಜೀವನದಲ್ಲಿ ಎರಡು ಬಾರಿ ವಿವಾಹವಾದರು. ಮೊದಲು 1998 ರಲ್ಲಿ ನೋಯೆಲ್ ಲೂಯಿಸ್ ಅವರನ್ನು ವಿವಾಹವಾದರು. ನೋಯೆಲಾ ಪುಣೆಯ ಹೋಟೆಲ್ ಬ್ಲೂ ಡೈಮಂಡ್‌ನಲ್ಲಿ ರಿಸೆಪ್ಶನಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು, ಆದರೆ ಈ ಪ್ರೇಮ ಜೀವನ ಹೆಚ್ಚು ಕಾಲ ಉಳಿಯಲಿಲ್ಲ ಮತ್ತು ವಿಚ್ಛೇದನದಲ್ಲಿ ಕೊನೆಗೊಂಡಿತು. ಇದರ ನಂತರ, ಕಾಂಬ್ಳಿ ಮಾಡೆಲ್ ಆಂಡ್ರಿಯಾ ಹೆವಿಟ್ ಅವರನ್ನು ವಿವಾಹವಾದರು. ಕಾಂಬ್ಳಿಗೆ ಒಬ್ಬ ಮಗ ಜೀಸಸ್ ಕ್ರಿಸ್ಟಿಯಾನೋ ಕಾಂಬ್ಲಿ ಮತ್ತು ಮಗಳು ಇದ್ದಾರೆ.
ಕೋಟಿಗಟ್ಟಲೆ ಗಳಿಸಿ 1.5 ಮಿಲಿಯನ್ USD ನಿವ್ವಳ ಮೌಲ್ಯವನ್ನು ಹೊಂದಿದ್ದ ವಿನೋದ್ ಕಾಂಬ್ಳಿ ಅವರು ತಮ್ಮ ಕೆಟ್ಟ ಚಟಗಳಿಂದಲೇ ಆರ್ಥಿಕವಾಗಿ ಸಂಕಷ್ಟಕ್ಕೀಡಾದರು. ಆ ಬಳಿಕ ಒಂದೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು ಎಂದು ಕೆಲ ಮೂಲಗಳು ಹೇಳುತ್ತವೆ. ಜೊತೆಗೆ ʼಆಜ್ ತಕ್ʼ ವರದಿಯ ಪ್ರಕಾರ, ಬಿಸಿಸಿಐ ನೀಡುವ 30 ಸಾವಿರ ರೂ ಪಿಂಚಣಿಯಲ್ಲಿ ವಿನೋದ್ ಕಾಂಬ್ಳಿ ಕುಟುಂಬ ನಡೆಸುತ್ತಿದೆ.
ಬಿಸಿಸಿಐ ನೀಡುವ ಪಿಂಚಣಿಯ ಮೇಲೆ ಸಂಪೂರ್ಣ ಅವಲಂಬಿತನಾಗಿದ್ದೇನೆ ಎಂದು ಕಾಂಬ್ಳಿ ಈ ಹಿಂದೊಮ್ಮೆ ಹೇಳಿದ್ದರು. ಇದಷ್ಟೇ ಅಲ್ಲದೆ, ಈ ಹೊಂದೆ ಮುಂಬೈನಲ್ಲಿ ವಾಹನ ಚಾಲನೆ ಮಾಡುವಾಗ ಹೃದಯ ಸ್ತಂಭನವಾಗಿ ಗಂಭೀರ ಸ್ಥಿತಿ ತಲುಪಿದ್ದರು. ಹೀಗಾಗಿ ಕ್ರಿಕೆಟ್ ಸಮುದಾಯ ಒಗ್ಗಟ್ಟಾಗಿ ಇವರಿಗೆ ಸಹಾಯ ಮಾಡಲು ಮುಂದಾಗಿದೆ ಎಂದು ಕೆಲ ಮೂಲಗಳು ತಿಳಿಸಿವೆ.