ಕರ್ನಾಟಕದ ಈ ನಗರದಲ್ಲಿದೆ ಚಾಣಕ್ಯ ಬರೆದ `ಅರ್ಥಶಾಸ್ತ್ರ`ದ ಮೂಲ ಪ್ರತಿ..! ನೀವು ತಪ್ಪದೆ ಈ ಒರಿಜಿನಲ್ ಪ್ರತಿ ನೋಡಿ..!
ಇಂದಿಗೂ ಈ ಕೃತಿಯನ್ನು ಸಾರ್ವಜನಿಕರು ನೋಡಬಹುದಾಗಿದ್ದು, ಒಂದು ವೇಳೆ ನೀವು ಮೈಸೂರಿನ ಓರಿಯಂಟಲ್ ಲೈಬ್ರರಿಗೆ ಭೇಟಿ ನೀಡಿ ಈ ಎರಡು ಸಾವಿರ ವರ್ಷಗಳ ಕೃತಿಯನ್ನು ನೋಡಿ.
ಇದರಲ್ಲಿ ಕೃಷಿ, ಮಿನರಾಲಜಿ, ಗಣಿಗಾರಿಕೆ ಮತ್ತು ಲೋಹಗಳ, ಪಶುಸಂಗೋಪನೆ, ಔಷಧ, ಅರಣ್ಯ ಹಾಗೂ ವನ್ಯಜೀವಿಗಳ ಪ್ರಾಚೀನ ಆರ್ಥಿಕ ಮತ್ತು ಸಾಂಸ್ಕೃತಿಕ ವಿವರಗಳನ್ನು ಒಳಗೊಂಡಿದೆ.
ರಾಜ್ಯಾಡಳಿತ, ಆರ್ಥಿಕ ನೀತಿ, ಸೇನಾ ವ್ಯೂಹ ರಚನೆಯ ಕುರಿತ ನಾಲ್ಕನೇ ಶತಮಾನದ ಶಾಸ್ತ್ರಗ್ರಂಥ ಕೌಟಿಲ್ಯನ ಅರ್ಥಶಾಸ್ತ್ರ. ಶೀರ್ಷಿಕೆ "ಅರ್ಥಶಾಸ್ತ್ರ" ಸಾಮಾನ್ಯವಾಗಿ "ರಾಜಕೀಯ ವಿಜ್ಞಾನ" ಗೆ ಅನುವಾದಿಸಿದ್ದಾರೆ
ಈತನಿಗೆ ವಿಷ್ಣುಗುಪ್ತ, ಚಾಣಕ್ಯ ಎಂಬ ಹೆಸರುಗಳೂ ಇವೆ. ಕೌಟಿಲ್ಯ ಮೌರ್ಯ ಸಾಮ್ರಾಜ್ಯದ ಸ್ಥಾಪಕ ಸಾಮ್ರಾಟ್ ಚಂದ್ರಗುಪ್ತ ಮೌರ್ಯನ ಗುರು ಹಾಗೂ ಪೋಷಕನಾಗಿದ್ದ. ಮೊದಲಿನದು ಲೇಖಕನ ಗೋತ್ರ, ಮತ್ತು ನಂತರದ್ದು ಅವನ ವೈಯಕ್ತಿಕ ಹೆಸರು ಎಂದು ಅನೇಕ ವಿದ್ವಾಂಸರು ನಂಬುತ್ತಾರೆ.
ಇದು ಪ್ರಸ್ತುತ ಭಾರತದಲ್ಲಿನ ಅತ್ಯಂತ ಹಳೆಯ ಹಸ್ತಪ್ರತಿಯಾಗಿದ್ದು , ಕರ್ನಾಟಕದ ಮೈಸೂರಿನಲ್ಲಿರುವ ಓರಿಯೆಂಟಲ್ ಸಂಶೋಧನಾ ಸಂಸ್ಥೆಯಲ್ಲಿ ಇದನ್ನು ಸಂರಕ್ಷಿಸಲಾಗಿದೆ.
ಅರ್ಥಶಾಸ್ತ್ರವು ಪ್ರಾಚೀನ ಭಾರತೀಯ ಸಂಸ್ಕೃತ ಹಸ್ತಪ್ರತಿಯಾಗಿದ್ದು, ಇದನ್ನು ಕ್ರಿ.ಪೂ 321-296 ರಲ್ಲಿ ಚಾಣಕ್ಯ ರಚಿಸಿದ್ದಾನೆ. ಇದು ರಾಜಕೀಯ ನೀತಿ, ಆರ್ಥಿಕ ನೀತಿ ಮತ್ತು ಮಿಲಿಟರಿ ತಂತ್ರಕ್ಕೆ ಸಂಬಂಧಿಸಿದ ಅಂಶಗಳನ್ನು ಹೊಂದಿದೆ.