ಅಂದು ವಾಸ್ತುಶಿಲ್ಪಿಯಾಗಿದ್ದಾತ ಇಂದು ಸ್ಟಾರ್ ಕ್ರಿಕೆಟರ್! ಟಿ20 ವಿಶ್ವಕಪ್’ನಲ್ಲೂ ಮಿಂಚಿದ ಈತನಿಗೆ ಕೊಹ್ಲಿ ಅಂದ್ರೆ ಪಂಚಪ್ರಾಣ

Sun, 02 Jun 2024-7:16 pm,

ಐಸಿಸಿ ಟಿ20 ವಿಶ್ವಕಪ್ 2024 ಜೂನ್ 2 ರಂದು ಆತಿಥೇಯ ಅಮೆರಿಕ ಮತ್ತು ಕೆನಡಾ ನಡುವಿನ ಪಂದ್ಯದೊಂದಿಗೆ ಪ್ರಾರಂಭವಾಗಿದೆ. ಈ ಪಂದ್ಯದಲ್ಲಿ ಅಮೆರಿಕ ತಂಡ ಕೆನಡಾ ವಿರುದ್ಧ 7 ವಿಕೆಟ್‌’ಗಳಿಂದ ಏಕಪಕ್ಷೀಯ ಜಯ ಸಾಧಿಸುವ ಮೂಲಕ ಪಾಯಿಂಟ್ಸ್ ಪಟ್ಟಿಯಲ್ಲಿ ಖಾತೆ ತೆರೆಯುವಲ್ಲಿ ಯಶಸ್ವಿಯಾಯಿತು.

ಅಂದಹಾಗೆ ಅಮೇರಿಕಾ ಗೆಲುವಿನಲ್ಲಿ ಆರೋನ್ ಜೋನ್ಸ್ ಮತ್ತು ಆಂಡ್ರೆಸ್ ಗೌಸ್ ಜೋಡಿಯು ಗುರಿಯನ್ನು ಬೆನ್ನಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿತು. ಇದರಲ್ಲಿ ಇಬ್ಬರ ನಡುವೆ ಮೂರನೇ ವಿಕೆಟ್‌’ಗೆ 131 ರನ್‌’ಗಳ ಜೊತೆಯಾಟ ಕಂಡುಬಂದಿತು. ಈ ಮೂಲಕ ಈ ಜೋಡಿಯು ಟಿ20 ಕ್ರಿಕೆಟ್’ನಲ್ಲಿ ವಿಶೇಷ ದಾಖಲೆ ಬರೆದಿದೆ.

ಈ ಪಂದ್ಯದಲ್ಲಿ ಕೆನಡಾ ತಂಡ ಅಮೆರಿಕ ತಂಡಕ್ಕೆ 195 ರನ್‌’ಗಳ ಗುರಿ ನೀಡಿತ್ತು. ಅದನ್ನು ಬೆನ್ನಟ್ಟಿದ ತಂಡ 42 ರನ್‌ಗಳಾಗುವವರೆಗೆ ತಮ್ಮ ಆರಂಭಿಕ ಬ್ಯಾಟ್ಸ್‌ಮನ್‌ಗಳನ್ನು ಕಳೆದುಕೊಂಡಿತು. ಇಲ್ಲಿಂದ ಅವರಿಗೆ ಗೆಲುವು ಕಷ್ಟ ಎನಿಸಿತು, ಆದರೆ ಇದಾದ ನಂತರ ಆರನ್ ಜೋನ್ಸ್ ಮತ್ತು ಗೌಸ್ ಜೋಡಿ ಮೂರನೇ ವಿಕೆಟ್‌’ಗೆ ಕೇವಲ 58 ಎಸೆತಗಳಲ್ಲಿ 131 ರನ್‌ಗಳ ಜೊತೆಯಾಟವನ್ನು ಮಾಡುವ ಮೂಲಕ ಪಂದ್ಯವನ್ನು ಸಂಪೂರ್ಣವಾಗಿ ಏಕಪಕ್ಷೀಯವಾಗಿಸಿತು.

ಇದು ವಿಶ್ವಕಪ್‌’ನ ಇತಿಹಾಸದಲ್ಲಿ ಮೂರನೇ ಅಥವಾ ನಂತರದ ವಿಕೆಟ್‌’ಗೆ ಎರಡನೇ ಗರಿಷ್ಠ ಜೊತೆಯಾಟವಾಗಿದೆ. ಈ ವಿಚಾರದಲ್ಲಿ 2014ರ ಟಿ20 ವಿಶ್ವಕಪ್‌’ನಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಮೂರನೇ ವಿಕೆಟ್‌’ಗೆ 152 ರನ್‌ಗಳ ಜೊತೆಯಾಟ ನೀಡಿದ ಇಯಾನ್ ಮಾರ್ಗನ್ ಮತ್ತು ಅಲೆಕ್ಸ್ ಹೇಲ್ಸ್ ಜೋಡಿ ಮೊದಲ ಸ್ಥಾನದಲ್ಲಿದೆ.

T20 ವಿಶ್ವಕಪ್‌’ನ ಇತಿಹಾಸದಲ್ಲಿ ಮೂರನೇ ಅಥವಾ ನಂತರದ ವಿಕೆಟ್‌’ಗೆ ಅತ್ಯಧಿಕ ಜೊತೆಯಾಟವಾಡಿದ ಜೋಡಿಗಳ ವಿವರ ಹೀಗಿದೆ. ಇಯಾನ್ ಮಾರ್ಗನ್ ಮತ್ತು ಅಲೆಕ್ಸ್ ಹೇಲ್ಸ್ - 152 ರನ್ (ಶ್ರೀಲಂಕಾ, 2014), ಆರನ್ ಜೋನ್ಸ್ ಮತ್ತು ಆಂಡ್ರೆಸ್ ಗೌಸ್ - 131 ರನ್ (ಕೆನಡಾ, 2024), ವನಿಂದು ಹಸರಂಗ ಮತ್ತು ಪಾತುಮ್ ನಿಸ್ಸಾಂಕ - 123 ರನ್ (ಐರ್ಲೆಂಡ್, 2021), ಜಸ್ಟಿನ್ ಕೆಂಪ್ ಮತ್ತು ಹರ್ಷಲ್ ಗಿಬ್ಸ್ - 120 ರನ್ (ವೆಸ್ಟ್ ಇಂಡೀಸ್, 2007), ಶೋಯೆಬ್ ಮಲಿಕ್ ಮತ್ತು ಮಿಸ್ಬಾ-ಉಲ್-ಹಕ್ - 119 ರನ್ (ಆಸ್ಟ್ರೇಲಿಯಾ, 2007), ಜಾರ್ಜ್ ಡಾಕ್ರೆಲ್ ಮತ್ತು ಕುರ್ಟಿಸ್ ಕಾನ್ಫರ್ - 119 ರನ್ (ಸ್ಕಾಟ್ಲೆಂಡ್, 2022), ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಆರನ್ ಫಿಂಚ್ - 118 ರನ್ (ಪಾಕಿಸ್ತಾನ, 2014), ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ - 113 ರನ್ (ಪಾಕಿಸ್ತಾನ 2022),

ಯುಎಸ್ ಪೌರತ್ವವನ್ನು ಪಡೆದ ಬಾರ್ಬಡೋಸ್ ಮೂಲದ ಕ್ರಿಕೆಟಿಗ ಆರನ್ ಜೋನ್ಸ್, 2019ರಲ್ಲಿ ಯುಎಇ ವಿರುದ್ಧ ಅಮೆರಿಕಾ ತಂಡಕ್ಕೆ ಪದಾರ್ಪಣೆ ಮಾಡಿದರು. ಮೇಜರ್ ಲೀಗ್ ಕ್ರಿಕೆಟ್ (MLC), ಬಾಂಗ್ಲಾದೇಶ ಪ್ರೀಮಿಯರ್ ಲೀಗ್​​, ಕೆರಿಬಿಯನ್ ಪ್ರೀಮಿಯರ್ ಲೀಗ್​ ಮತ್ತು ನೆವಿಸ್ ಪೇಟ್ರಿಯಾಟ್ಸ್‌ ಲೀಗ್’ನಲ್ಲಿ ಜೋನ್ಸ್ ಆಡಿದ್ದಾರೆ. 27 ಅಂತಾರಾಷ್ಟ್ರೀಯ ಟಿ20ಐ ಪಂದ್ಯಗಳನ್ನಾಡಿರುವ ಜೋನ್ಸ್, 28.11ರ ಬ್ಯಾಟಿಂಗ್ ಸರಾಸರಿಯಲ್ಲಿ 478 ರನ್ ಗಳಿಸಿದ್ದಾರೆ. ಅಂದಹಾಗೆ ಈ ಆಟಗಾರ ಟೀಂ ಇಂಡಿಯಾ ಸ್ಟಾರ್ ಬ್ಯಾಟರ್​​ ವಿರಾಟ್​ ಕೊಹ್ಲಿಯ ಬಿಗ್ ಫ್ಯಾನ್ ಅಂತೆ.  

ಇನ್ನೊಂದೆಡೆ ವಿಕೆಟ್ ಕೀಪರ್ ಬ್ಯಾಟರ್ ಆಂಡ್ರೆಸ್ ಗೌಸ್ ಮೊದಲು ಆಡಿದ್ದು ದಕ್ಷಿಣ ಆಫ್ರಿಕಾ ಪರ. 2013ರಲ್ಲಿ ಸೌತ್ ಆಫ್ರಿಕಾ ಅಂಡರ್-19 ತಂಡವನ್ನು ಪ್ರತಿನಿಧಿಸಿದ್ದರು. ಅದಾದ ಬಳಿಕ 2021ರಲ್ಲಿ ಯುಎಸ್ಎಗೆ ಸ್ಥಳಾಂತರಗೊಂಡು ಅಮೆರಿಕಾ ತಂಡದ ಪರ ಆಡಿದರು. ಈ ಪಂದ್ಯದಲ್ಲಿ ಆರನ್ ಜೋನ್ಸ್ ಬರೋಬ್ಬರಿ 10 ಸಿಕ್ಸರ್​​, 4 ಬೌಂಡರಿ ಸಹಿತ ಅಜೇಯ 94 ರನ್ ಚಚ್ಚಿದರೆ, ಆಂಡ್ರೆಸ್ ಗೌಸ್ 46 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್​​ ಸಹಿತ 65 ರನ್ ಸಿಡಿಸಿದ್ದಾರೆ. ಅಂದಹಾಗೆ ಈ ಇಬ್ಬರೂ ಸಹ ವಾಸ್ತುಶಿಲ್ಪಿಗಳು ಎಂಬುದು ವಿಶೇಷ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link