Jasmin Oil: ಈ ಹೂವಿನ 1 ಲೀಟರ್ ತೈಲದ ಬೆಲೆ ಬರೋಬ್ಬರಿ 4 ಲಕ್ಷ ರೂ.: ಆರೋಗ್ಯ-ವಾಸ್ತುದೋಷಕ್ಕೆ ಹೇಳಿಮಾಡಿಸಿದ ಪರಿಹಾರ!
ಇದುವೇ ಮಲ್ಲಿಗೆ ಎಣ್ಣೆ. ಇದರ ಬೆಲೆ ಒಂದು ಲೀಟರ್’ಗೆ ಬರೋಬ್ಬರಿ 4 ಲಕ್ಷ ರೂ. ಇರುತ್ತದೆಯಂತೆ. ಕೇವಲ 1 ಲೀಟರ್ ಎಣ್ಣೆ ಸಂಗ್ರಹ ಮಾಡಲು 5,000 ಮಲ್ಲಿಗೆ ಮೊಗ್ಗುಗಳನ್ನು ಆರಿಸಬೇಕಾಗುತ್ತದೆ.
ಹೂವು ಅರಳಿದಾಗ ಭಾರತದಲ್ಲಿನ ಉತ್ಪಾದಕರು ಅದನ್ನು ತ್ವರಿತವಾಗಿ ವಿಶ್ವದ ಅತ್ಯಂತ ಬೆಲೆಬಾಳುವ ತೈಲಗಳಲ್ಲಿ ಒಂದಾಗಿ ಸಂಸ್ಕರಿಸುತ್ತಾರೆ.
ಜಾಸ್ಮಿನ್ ಎಣ್ಣೆಯು ಅನೇಕ ಐಷಾರಾಮಿ ಸುಗಂಧ ದ್ರವ್ಯಗಳಲ್ಲಿ ಒಂದಾಗಿದೆ. ಇನ್ನು ಮದ್ರಾಸ್ ನಲ್ಲಿ ತಯಾರಿ ಮಾಡುವ ಎಣ್ಣೆ ದುಬಾರಿಯಾಗಿರುತ್ತದೆ ಎಂದು ಹೇಳಲಾಗುತ್ತದೆ.
ಇನ್ನು ಈ ಜಾಸ್ಮೀನ್ ಎಣ್ಣೆ ವಾಸ್ತು ದೋಷಕ್ಕೆ ಪರಿಹಾರವನ್ನೂ ನೀಡುತ್ತದೆ. ತಮ್ಮ ವೃತ್ತಿಜೀವನದಲ್ಲಿ ಯಶಸ್ಸನ್ನು ಸಾಧಿಸಲು ಬಯಸುವ ಜನರು ಮನೆಯಲ್ಲಿ ಈ ಎಣ್ಣೆಯನ್ನು ಇಡಬೇಕು. ಇದು ನಿಮ್ಮ ಸಮಸ್ಯೆಗಳನ್ನು ಪರಿಹರಿಸಿ ಧನಾತ್ಮಕ ಅಂಶವನ್ನು ಪಸರಿಸುತ್ತದೆ.
ಜಾಸ್ಮೀನ್ ಎಣ್ಣೆ ಮನೆಯಲ್ಲಿಟ್ಟರೆ, ಆ ಮನೆಯ ಜನರಿಗೆ ಆತ್ಮ ವಿಶ್ವಾಸ ಮತ್ತು ಶಕ್ತಿಯನ್ನು ಒದಗಿಸುತ್ತದೆ.