Liquor Price Hike: ಮದ್ಯಪ್ರಿಯರಿಗೊಂದು ಆಘಾತ , ಮದ್ಯದ ಬೆಲೆಯಲ್ಲಿ ಶೇ. 20ರಷ್ಟು ಹೆಚ್ಚಳ
ಪುದುಚೇರಿಯಲ್ಲಿ ಮದ್ಯದ ಬೆಲೆಯನ್ನು ಹೆಚ್ಚಿಸಲಾಗಿದೆ. ತಮಿಳುನಾಡು, ಕರ್ನಾಟಕ ಮತ್ತು ಇತರ ರಾಜ್ಯಗಳಿಗೆ ಹೋಲಿಸಿದರೆ ಪುದುಚೇರಿಯಲ್ಲಿ ಮದ್ಯದ ಬೆಲೆ ಕಡಿಮೆ ಎಂದೇ ಹೇಳಲಾಗಿದೆ.
ವಿಶೇಷವೆಂದರೆ, ಪುದುಚೇರಿಯ ಕೇಂದ್ರಾಡಳಿತ ಪ್ರದೇಶವು ಪ್ರವಾಸೋದ್ಯಮವನ್ನು ಅವಲಂಬಿಸಿದೆ. ಈ ವರ್ಷ ಏಪ್ರಿಲ್‌ನಲ್ಲಿ ಪುದುಚೇರಿ ಆಡಳಿತ ಮದ್ಯದ ಮೇಲಿನ 7.5 ವಿಶೇಷ ಕೋವಿಡ್ ಶುಲ್ಕವನ್ನು ರದ್ದುಪಡಿಸಿತ್ತು.
ಏಪ್ರಿಲ್ 7 ರಂದು, ಲೆಫ್ಟಿನೆಂಟ್ ಗವರ್ನರ್ ತಮಿಳುಸಾಯಿ ಸುಂದರರಾಜನ್ ಅವರು ಮದ್ಯದ ಬೆಲೆಯನ್ನು ಕಡಿಮೆ ಮಾಡುವ ಪ್ರಸ್ತಾಪಕ್ಕೆ ಅನುಮೋದನೆ ನೀಡಿದ್ದರು. ಇದರ ನಂತರ ಮದ್ಯದ ಬೆಲೆಯನ್ನು ಕಡಿಮೆ ಮಾಡಲಾಗಿತ್ತು. ಎಲ್ಲಾ ಪಬ್‌ಗಳು, ಮದ್ಯದಂಗಡಿಗಳು ಮತ್ತು ರೆಸ್ಟೋರೆಂಟ್‌ಗಳಿಗೆ ಸುರಕ್ಷತಾ ನಿಯಮಗಳನ್ನು ಪಾಲಿಸುವಂತೆ ಆದೇಶಿಸಲಾಗಿತ್ತು. ಇದರ ನಂತರ, ರಾಜ್ಯದ ಎಲ್ಲೆಡೆ ಅಗ್ಗದ ಮದ್ಯ ಲಭ್ಯವಿತ್ತು. ಆದರೆ ಇದರಿಂದಾಗಿ ರಾಜ್ಯವು ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ತೊಂದರೆ ಅನುಭವಿಸುವಂತಾಗಿತ್ತು.
ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ವಿಶೇಷವಾಗಿ ತಮಿಳುನಾಡಿನಿಂದ ಪುದುಚೇರಿಯವರೆಗೆ ಜನರು ಬರುವುದನ್ನು ತಡೆಯಲು ಕಳೆದ ವರ್ಷ ಮೇ ತಿಂಗಳಲ್ಲಿ ವಿಶೇಷ ಶುಲ್ಕವನ್ನು ವಿಧಿಸಲಾಗಿತ್ತು.
ಇನ್ನೊಂದೆಡೆ, ಗುವಾಹಟಿಯಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಒಂದು ತಿಂಗಳ ಕಾಲ ಆನ್‌ಲೈನ್‌ನಲ್ಲಿ ಮದ್ಯ ಮಾರಾಟ ಮಾಡಲು ಅಸ್ಸಾಂ ಸರ್ಕಾರ ನಿರ್ಧರಿಸಿದೆ. ಇದು ಯಶಸ್ವಿಯಾದರೆ ಅದು ಇಡೀ ರಾಜ್ಯದಲ್ಲಿ ಜಾರಿಗೆ ಬರಲಿದೆ ಎಂದು ರಾಜ್ಯ ಸಚಿವ ಪಿಜುಶ್ ಹಜಾರಿಕಾ ತಿಳಿಸಿದ್ದಾರೆ.