Jaggery: ಈ ವಿಶೇಷ ಬೆಲ್ಲದ ಬೆಲೆ ಬರೋಬ್ಬರಿ ಒಂದು ಲಕ್ಷ ರೂಪಾಯಿ!! ಆರೋಗ್ಯಕ್ಕೂ ಸಖತ್ ಉಪಯೋಗ

Mon, 28 Nov 2022-10:33 am,

ಸಹರಾನ್‌ಪುರದ ರೈತ ಸಂಜಯ್ ಸೈನಿ 101 ಬೆಲ್ಲ ತಯಾರಿಸಿ ವಿಶಿಷ್ಟ ದಾಖಲೆ ನಿರ್ಮಿಸಿದ್ದಾರೆ. ಅವರು ಮೀರತ್‌ನಲ್ಲಿ ವಿವಿಧ ರೀತಿಯ ಬೆಲ್ಲವನ್ನು ಪ್ರದರ್ಶಿಸುವ ಮೂಲಕ ತಮ್ಮ ಸ್ಟಾಲ್ ನ್ನು ಜನಪ್ರಿಯಗೊಳಿಸಿದ್ದಾರೆ. ಅವರು ತಯಾರಿಸಿದ ಬೆಲ್ಲ ಕೆ.ಜಿ.ಗೆ ಹನ್ನೊಂದು ಸಾವಿರ ರೂಪಾಯಿಗೆ ಮಾರಾಟವಾಗುತ್ತಿದೆ. ಮುಂದಿನ ದಿನಗಳಲ್ಲಿ ಬೆಲ್ಲದ ಬೆಲೆ ಕೆ.ಜಿ.ಗೆ ಒಂದು ಲಕ್ಷ ರೂ.ವರೆಗೆ ಬರಬಹುದು ಎನ್ನುತ್ತಾರೆ ರೈತ.

ಸಂಜಯ್ ಸೈನಿ ಅವರು ಕೆಜಿಗೆ 11000 ರೂ ಬೆಲೆಯ ಬೆಲ್ಲವನ್ನು ತಯಾರಿಸಿದ್ದಾರೆ. ಮುಂದಿನ ದಿನಗಳಲ್ಲಿ ಕೆಜಿಗೆ ಒಂದು ಲಕ್ಷ ಬೆಲೆಯ ಬೆಲ್ಲವನ್ನು ತಯಾರಿಸುವುದಾಗಿ ಹೇಳಿಕೊಂಡಿದ್ದಾರೆ. ಇಲ್ಲಿಯವರೆಗೆ 101 ಬಗೆಯ ಬೆಲ್ಲವನ್ನು ತಯಾರಿಸುವ ಮೂಲಕ ರೈತ ಸಂಜಯ್ ಸೈನಿ ವ್ಯಾಪಾರಕ್ಕೆ ಹೊಸ ಆಯಾಮ ನೀಡಿದ್ದಾರೆ.

ಬೆಲ್ಲ, ಪೇಠವನ್ನು ಮಾರಾಟ ಮಾಡುತ್ತಿದ್ದ ಸಂಜಯ್ ಸೈನಿ, ಮುಂದಿನ ದಿನಗಳಲ್ಲಿ ಬೆಲ್ಲದ ಜಿಲೇಬಿಯನ್ನೂ ತಯಾರಿಸುವುದಾಗಿ ಹೇಳಿಕೊಂಡಿದ್ದಾರೆ. ಬೆಲ್ಲವು ಆರೋಗ್ಯಕ್ಕೆ ಬಹಳ ಒಳ್ಳೆಯದು. ಬೆಲ್ಲದ ಜೊತೆ ಮೆಂತ್ಯವನ್ನು ಬಳಸಿದರೆ ಸಂಧಿವಾತಕ್ಕೆ ಭಾರೀ ಒಳ್ಳೆಯದು ಎಂದು ಸಂಜಯ್ ಸೈನಿ ಹೇಳಿದರು. ಅಷ್ಟೇ ಅಲ್ಲದೆ, ಶುಂಠಿ, ಕೊತ್ತಂಬರಿ ಸೊಪ್ಪು ಸೇರಿಸಿ ಬೆಲ್ಲವನ್ನು ಮಧ್ಯಾಹ್ನ ಸೇವಿಸಿದರೆ ಪಿತ್ತದ ಕಾಯಿಲೆ ಕೂಡ ಬರುವುದಿಲ್ಲ. ಸಾಯಂಕಾಲ ಲವಂಗ, ಮಸಿ, ಒಣ ಶುಂಠಿ ಮತ್ತು ಕರಿಮೆಣಸಿನ ಜೊತೆ ಬೆಲ್ಲವನ್ನು ಬಳಸಿದರೆ ಕಫವು ಸಮಸ್ಯೆಯೂ ದೂರವಾಗುತ್ತದೆ ಎಂದು ಹೇಳುತ್ತಾರೆ.

ಸಂಜಯ್ ಅವರು ರೈತನು ಸುಗಂಧ ಮತ್ತು ಚಿನ್ನದ ಬೂದಿಯೊಂದಿಗೆ ಈ ಬೆಲ್ಲವನ್ನು ತಯಾರಿಸಿದ್ದಾರೆ. ಚಿನ್ನದ ಬೂದಿ ಇರುವ ಬೆಲ್ಲದ ಬೆಲೆ ಕೆಜಿಗೆ ಹನ್ನೊಂದು ಸಾವಿರ ರೂಪಾಯಿ. ಇದಲ್ಲದೇ ಇಂಗು, ಸೊಪ್ಪುಗಳನ್ನು ಸೇರಿಸಿ ಬೆಲ್ಲವನ್ನೂ ತಯಾರಿಸಿದ್ದಾರೆ ಈ ರೈತ. ಒಣ ಹಣ್ಣುಗಳನ್ನೂ ಬೆರೆಸಿ ಬೆಲ್ಲ ತಯಾರಿಸಿದ್ದು ಮಾರುಕಟ್ಟೆಯಲ್ಲಿ ಭರ್ಜರಿ ಮಾರಾಟವಾಗುತ್ತಿದೆ.

ಈಗ ಜನರು ತಮ್ಮ ಮನೆಯ ಕಾರ್ಯಕ್ರಮಗಳಲ್ಲಿಯೂ ಸಹ ಸಂಜಯ್ ಅವರು ತಯಾರಿಸಿದ ಬೆಲ್ಲವನ್ನು ಬಳಸುತ್ತಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link