Budh Gochar 2023: ಪರಮ ನೀಚ ಅವಸ್ಥೆ ತಲುಪಿದ ಗ್ರಹಗಳ ರಾಜಕುಮಾರ, `ಧನ ಸಾಮ್ರಾಜ್ಯ ಯೋಗ` ನಿರ್ಮಾಣ, 4 ರಾಶಿಗಳ ಜನರ ಮೇಲೆ ಅಪಾರ ಧನವೃಷ್ಟಿ!
ಮಿಥುನ ರಾಶಿ: ಧನ ಸಾಮ್ರಾಜ್ಯ ಯೋಗ ಮಿಥುನ ರಾಶಿಯ ಜಾತಕದವರ ಪಾಲಿಗೆ ಅತ್ಯಂತ ಶುಭ ಸಿದ್ಧ ಸಾಬೀತಾಗಲಿದೆ. ಏಕೆಂದರೆ ನಿಮ್ಮ ರಾಶಿಗೆ ಸುಖ ಹಾಗೂ ಸೌಕರ್ಯಗಳ ಅಧಿಪತಿ ಬುಧನಾಗಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ನಿಮ್ಮ ವೃತ್ತಿ ಜೀವನದಲ್ಲಿ ಅಪಾರ ಯಶಸ್ಸು ಸಿಗುವ ಸಾಧ್ಯತೆ ಇದೆ. ಯಾವುದಾದರೊಂದು ದಾಖಲೆ ಯಾವುದೇ ಒಂದು ಕಾರಣಾಂತರದಿಂದ ಸಿಲುಕಿಕೊಂಡಿದ್ದಾರೆ. ಅದು ತೆರವುಗೊಳ್ಳಲಿದೆ. ಒಂದು ವೇಳೆ ನಿಮ್ಮ ಕೆಲಸ ಸರ್ಕಾರಿ ಕ್ಷೇತ್ರಕ್ಕೆ ಸಂಬಂಧಿಸಿದ್ದರೆ ಅದರಲ್ಲಿ ನಿಮಗೆ ಯಶಸ್ಸು ಸಿಗಲಿದೆ ಜೊತೆಗೆ ನಿಮ್ಮ ಜೀವನಶೈಲಿಯ ಸೌಕರ್ಯಗಳಲ್ಲಿ ವೃದ್ಧಿಯ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.
ವೃಷಭ ರಾಶಿ: ಬುಧನ ಅತ್ಯಂತ ನೀಚಾವಸ್ಥೆಯಿಂದ ನಿರ್ಮಾಣಗೊಂಡ ಧನ ಸಾಮ್ರಾಜ್ಯ ಯೋಗ. ವೃಷಭ ರಾಶಿಯ ಜಾತಕದವರಿಗೆ ಅತ್ಯಂತ ಶುಭ ಸಾಬೀತಾಗಲಿದೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಅಪಾರ ಆರ್ಥಿಕ ಅಭಿವೃದ್ಧಿಯಾಗಲಿದೆ. ಈ ಅವಧಿಯಲ್ಲಿ ನಿಮ್ಮ ಹಣಕಾಸಿನ ಆದಾಯ ಹೆಚ್ಚಾಗಲಿದೆ. ಇನ್ನೊಂದೆಡೆ ನಿಮ್ಮ ಬುದ್ಧಿ, ಕಾರ್ಯಶಕ್ತಿ, ಜ್ಞಾಪಕ ಶಕ್ತಿ, ನಿಮ್ಮ ಭಾಷಾ ಶೈಲಿಯ ಅಧಿಪತಿ ಬುಧನಾಗಿದ್ದಾನೆ. ಈ ಯೋಗ ನಿಮ್ಮ ಲಾಭ ಭಾವದಲ್ಲಿ ನಿರ್ಮಾಣಗೊಳ್ಳುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಆಕಸ್ಮಿಕ ಧನಲಾಭ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಹಳೆ ಹೂಡಿಕೆಗಳಿಂದಲೂ ಕೂಡ ನಿಮಗೆ ಲಾಭ ಸಿಗಲಿದೆ. ಈ ಅವಧಿಯಲ್ಲಿ ನಿಮ್ಮ ಇಷ್ಟಾರ್ಥಗಳು ನೆರೆವೇರಲಿದ್ದು, ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಅಪಾರ ಸುಧಾರಣೆ ಕಂಡುಬರಲಿದೆ.
ಧನು ರಾಶಿ: ಧನು ರಾಶಿಯ ಜಾತಕದವರ ಪಾಲಿಗೆ ಧನ ಸಾಮ್ರಾಜ್ಯ ಯೋಗ ವೃತ್ತಿಜೀವನ ಮತ್ತು ವ್ಯಾಪಾರದ ದೃಷ್ಟಿಯಿಂದ ಅತ್ಯಂತ ಲಾಭಪ್ರದ ಸಿದ್ಧವಾಗಲಿದೆ. ಏಕೆಂದರೆ ನಿಮ್ಮ ಗೋಚರ ಜಾತಕದ ಕೇಂದ್ರ ಭಾವದಲ್ಲಿ ನೀಚ್ ಭಂಗ್ ರಾಜಯೋಗ ಹಾಗೂ ಹಂಸ ರಾಜಯೋಗ ನಿರ್ಮಾಣಗೊಂಡಿವೆ. ಇದಲ್ಲದೆ ಬುಧನ ಸಪ್ತಮ ದೃಷ್ಟಿ ನಿಮ್ಮ ವೃತ್ತಿಜೀವನದ ಭಾವದ ಮೇಲೆ ನೆಟ್ಟಿದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಎಲ್ಲಾ ಭೌತಿಕ ಸುಖಗಳು ಪ್ರಾಪ್ತಿಯಾಗಲಿವೆ. ಈ ಅವಧಿಯಲ್ಲಿ ನೀವು ಆಸ್ತಿಪಾಸ್ತಿಯನ್ನು ಕೂಡ ಖರೀದಿಸಬಹುದು. ವೃತ್ತಿಜೀವನ ಹಾಗೂ ವ್ಯಾಪಾರದಲ್ಲಿ ಉನ್ನತಿಯ ಯೋಗ ನಿರ್ಮಾಣಗೊಳ್ಳುತ್ತಿದೆ.
ಕನ್ಯಾ ರಾಶಿ: ನಿಮ್ಮ ಆರ್ಥಿಕ ಸ್ಥಿತಿಯ ದೃಷ್ಟಿಕೋನದಿಂದ ಧನ ಸಾಮ್ರಾಜ್ಯ ಯೋಗ ನಿಮಗೆ ಅತ್ಯಂತ ಶುಭಫಲದಾಯಿ ಸಾಬೀತಾಗಲಿದೆ. ಕರ್ಮ ಭಾವದ ಅಧಿಪತಿಯಾಗಿ ಬುಧ ಈ ಯೋಗವನ್ನು ನಿರ್ಮಿಸುತ್ತಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ನಿಮ್ಮ ಬಾಳಸಂಗಾತಿಯ ಸಂಪೂರ್ಣ ಬೆಂಬಲ ಸಿಗಲಿದೆ. ಅಲ್ಲದೆ ಈ ಅವಧಿಯಲ್ಲಿ ನಿಮ್ಮ ಬಾಳಸಂಗಾತಿಯ ಅಭಿವೃದ್ಧಿ ಕೂಡ ನೆರವೇರಲಿದೆ. ನಿರುದ್ಯೋಗಿಗಳಿಗೆ ನೌಕರಿ ಸಿಗುವ ಎಲ್ಲಾ ಸಾಧ್ಯತೆಗಳಿವೆ, ಒಂದು ವೇಳೆ ನೀವು ಗುತ್ತಿಗೆದಾರರಾಗಿದ್ದರೆ, ನಿಮ್ಮ ಪಾಲಿಗೆ ಈ ಅವಧಿ ಅತ್ಯಂತ ಅದ್ಭುತ ಸಾಬೀತಾಗಲಿದೆ. ನಿಮ್ಮ ಪ್ರಯತ್ನವನ್ನು ಮುಂದುವರೆಸಿ.(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)