QR Code ತಯಾರಿಸಿದ್ದು ಯಾರು, ಎಲ್ಲಿ ಇದು ಮೊದಲ ಬಾರಿಗೆ ಬಳಕೆಗೆ ಬಂತು? ಇಲ್ಲಿದೆ ವಿವರ

Tue, 25 Jan 2022-12:25 pm,

1. QR Code ಸಂಪೂರ್ಣ ಹೆಸರು - QR Code ವಿಸ್ತ್ರತ ರೂಪ 'Quick Response Code'. ಈ ಕೋಡ್ ನಲ್ಲಿ ಒಂದು ನಿಶ್ಚಿತ ಸರಕಿನ ಸಂಪೂರ್ಣ ಮಾಹಿತಿ ಬರೆಯಲಾಗಿರುತ್ತದೆ. ಉದಾಹರಣೆಗೆ, ಆ ಸರಕಿನ ಬೆಲೆ, ತಯಾರಿಸಿದ ಕಂಪನಿಯ ಹೆಸರು, ತಯಾರಾದ ಸಮಯ, ಎಕ್ಸ್ ಪೈರಿ ದಿನಾಂಕ ಇತ್ಯಾದಿ. 

2. ಇಂಟರ್ನೆಟ್ ಮೂಲಕ ಓದಲಾಗುತ್ತದೆ QR - ಇಂಟರ್ನೆಟ್ ಮಾಧ್ಯಮದ ಮೂಲಕ QR ಕೋಡ್ ಯಾವುದೇ ವಿಷಯದ/ಸರಕಿನ ಬಗ್ಗೆ ನಿಖರವಾದ ಮಾಹಿತಿಯನ್ನು ನೀಡುತ್ತದೆ. ಈ ಕೋಡ್ ಅನ್ನು ಮೊಬೈಲ್ ಅಥವಾ ಸ್ಕ್ಯಾನರ್ ಮೂಲಕ ಸ್ಕ್ಯಾನ್ ಮಾಡಲಾಗುತ್ತದೆ. ನೀವು ಸ್ಕ್ಯಾನ್ ಮಾಡಿದ ತಕ್ಷಣ ಎಲ್ಲಾ ಅದರಲ್ಲಿ ಅಡಗಿರುವ ಎಲ್ಲಾ ಮಾಹಿತಿಗಳು ಹೊರಬರುತ್ತವೆ.

3. ಬಾರ್ ಕೋಡ್ ನ ಆಧುನಿಕ ರೂಪ - QR ಕೋಡ್ ಬಾರ್ ಕೋಡ್‌ನ ಆಧುನಿಕ ರೂಪವಾಗಿದೆ. 1960 ರ ದಶಕದಲ್ಲಿ, ಜಪಾನ್‌ನಲ್ಲಿ ದೊಡ್ಡ ಸೂಪರ್‌ಮಾರ್ಕೆಟ್‌ಗಳನ್ನು ಪ್ರಾರಂಭಿಸಲಾಯಿತು ಎಂದು ಹೇಳಲಾಗುತ್ತದೆ, ಅವುಗಳಲ್ಲಿ ಶಾಪಿಂಗ್ ಮಾಡಲು ಜನರು ಗುಂಪುಗೂಡಲು ಪ್ರಾರಂಭಿಸಿದರು. ಇಂತಹ ಪರಿಸ್ಥಿತಿಯಲ್ಲಿ, ಕೈಯಿಂದ ಬಿಲ್‌ಗಳನ್ನು ಮಾಡುವಾಗ ಕ್ಯಾಷಿಯರ್‌ನ ಸ್ಥಿತಿ ಹದಗೆಡುತ್ತಿತ್ತು. ಕೈ ಮತ್ತು ಮಣಿಕಟ್ಟಿನ ನೋವಿನಿಂದ ಅವರಿಗೆ ತೊಂದರಯಾಗಳು ಶುರುವಾಯ್ತು. ಈ ಸಮಸ್ಯೆಯನ್ನು ನಿಭಾಯಿಸಲು ಬಾರ್‌ಕೋಡ್‌ಗಳನ್ನು ಪರಿಚಯಿಸಲಾಗಿದೆ.

4. ಬಾರ್ ಕೋಡ್ (Bar Code) ವ್ಯಾಪ್ತಿ  - 1974 ರಲ್ಲಿ ಬಾರ್ಕೋಡ್ನ ಆವಿಷ್ಕಾರವು ಈ ಸಮಸ್ಯೆಯನ್ನು ಸ್ವಲ್ಪಮಟ್ಟಿಗೆ ಪರಿಹರಿಸಿತು, ಆದರೆ ಅದರ ಬಳಕೆ ಹೆಚ್ಚಾದಂತೆ ಅದರ ನ್ಯೂನತೆಗಳು ಸಹ ಮುಂಚೂಣಿಗೆ ಬಂದವು. ಬಾರ್‌ಕೋಡ್‌ಗಳು 20 ಅಂಕೆಗಳು ಅಥವಾ ಅಕ್ಷರಗಳವರೆಗೆ ಮಾತ್ರ ಮಾಹಿತಿಯನ್ನು ಒದಗಿಸಬಹುದು, ಆದರೆ ಕೆಲ ಸಂಗತಿಗಳಿಗೆ ಇನ್ನೂ ಹೆಚ್ಚಿನ ಮಾಹಿತಿಯ ಅಗತ್ಯ ಬೀಳಲಾರಂಭಿಸಿತು.

5. ಜಪಾನ್ ಮೂಲದ ಕಂಪನಿಯಿಂದ ಅವಿಷ್ಕಾರ -ಜಪಾನಿನ ಕಂಪನಿಯಾಗಿರುವ ಡೆನ್ಸೊ ವೇವ್ ಕಾರ್ಪೊರೇಷನ್ ಈ ಸಮಸ್ಯೆಯನ್ನು ಪರಿಹರಿಸಲು ತನ್ನ ಕೆಲಸ ಪ್ರಾರಂಭಿಸಿತು ಪುನರಾವರ್ತಿತ ವೈಫಲ್ಯಗಳ ನಂತರವೂ ಕಂಪನಿಯು ತನ್ನ ಈ ಪ್ರಾಜೆಕ್ಟ್ ಕೈಬಿಡಲಿಲ್ಲ ಮತ್ತು QR ಕೋಡ್‌ಗಳನ್ನು ರಚಿಸುವಲ್ಲಿ ಯಶಸ್ಸನ್ನು ಪಡೆಯಿತು. ಮಸಾಹಿಕೊ ಹರಾ ಈ ಪ್ರಾಜೆಕ್ಟ್ ತಂಡದ ಮುಂದಾಳತ್ವ ವಹಿಸಿದ್ದರು.

6. ಮಸಾಹಿಕೊ ಹರಾ ಮೊದಲ ಬಾರಿಗೆ ಈ QR Code ರಚಿಸಿದರು - QR ಕೋಡ್ ಅನ್ನು ಅಭಿವೃದ್ಧಿಪಡಿಸಿದ ಕೀರ್ತಿ ಮಸಾಹಿಕೊ ಹರಾ ಅವರಿಗೆ ಸಲ್ಲುತ್ತದೆ. ಈ ಕೋಡ್ ಹೆಚ್ಚಿನ ಪ್ರಮಾಣದ ಮಾಹಿತಿಯನ್ನು ಉಳಿಸಲು ಮಾತ್ರವಲ್ಲ, ಇದನ್ನು ಯಾವುದೇ ಕೋಡ್‌ಗಿಂತ ಹತ್ತು ಪಟ್ಟು ವೇಗವಾಗಿ ಓದಬಹುದು.

7. QR Code ವೈಶಿಷ್ಟ್ಯ - ಮೊದಲ ಬಾರಿಗೆ, ಆಟೋಮೊಬೈಲ್, ಔಷಧೀ ಮತ್ತು ಚಿಲ್ಲರೆ ಉದ್ಯಮಗಳಲ್ಲಿ ದಾಸ್ತಾನುಗಳನ್ನು ಪತ್ತೆಹಚ್ಚಲು QR ಕೋಡ್‌ಗಳನ್ನು ಬಳಸಲಾಯಿತು. ಇಂದು ಇದನ್ನು ಟಿಕೆಟ್‌ನಿಂದ ಆನ್‌ಲೈನ್ ಪಾವತಿಯವರೆಗೆ ಎಲ್ಲಾ ಕಡೆಗೆ ಬಳಸಲಾಗುತ್ತಿದೆ. ಇದು ಮಾತ್ರವಲ್ಲದೆ, ಈಗ ಜನರು ತಮ್ಮದೇ ಆದ QR ಕೋಡ್ ಅನ್ನು ಸಹ ರಚಿಸಬಹುದು. ಕ್ಯೂಆರ್ ಕೋಡ್‌ನಿಂದ ಹಲವು ಪ್ರಯೋಜನಗಳಿವೆ. ಅವುಗಳ ಮೇಲೆ ಧೂಳು ಮತ್ತು ಮಣ್ಣಿನ ಪರಿಣಾಮ ಉಂಟಾಗುವುದಿಲ್ಲ. ಕ್ಯೂಆರ್ ಕೋಡ್ ಸ್ವಲ್ಪ ಹರಿದರೂ ಅಥವಾ ಕತ್ತರಿಸಿದರೂ ಸ್ಕ್ಯಾನರ್ ಸಹಾಯದಿಂದ ಅದನ್ನು ನೀವು ಓದಬಹುದು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link