ಈ ಛಾಯಾಗ್ರಾಹಕನ ಮಗಳ ಅಂದವನ್ನ ಸೆರೆ ಹಿಡಿಯಲು ಕ್ಯಾಮರಾ ಪುಣ್ಯ ಮಾಡಿರಬೇಕು..! ಅಂದಹಾಗೆ ಈಕೆ ಯಾರ್‌ ಗೊತ್ತೆ..?

Sun, 01 Sep 2024-5:19 pm,

ಈಕೆ ಹೆಸರು ಮಾಳವಿಕಾ ಮೋಹನನ್.. ಮಲಯಾಳಿ ಕುಟ್ಟಿ ತಮ್ಮ ಕ್ಯೂಟ್‌ ಲುಕ್‌ನಿಂದ ದಕ್ಷಿಣ ಸಿನಿರಂಗದಲ್ಲಿ ಜನಪ್ರಿಯರಾಗಿದ್ದಾರೆ. ನಾನು ಮತ್ತು ವರಲಕ್ಷ್ಮಿ ಎಂಬ ಕನ್ನಡ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ ಎಂಟ್ರಿ ಕೊಟ್ಟರು.  

ಸಧ್ಯ ಟಾಲಿವುಡ್‌ನಲ್ಲಿ ಮಿಂಚಲು ರೆಡಿಯಾಗಿರುವ ಈಕೆ, ಶೀಘ್ರದಲ್ಲೇ ರೆಬೆಲ್ ಸ್ಟಾರ್ ಪ್ರಭಾಸ್ ಅಭಿನಯದ ಮಾರುತಿ ನಿರ್ದೇಶನದ 'ದಿ ರಾಜಾ ಸಾಬ್' ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.  

ಮಾಳವಿಕಾ ಮೋಹನನ್ ಖ್ಯಾತ ಸಿನಿಮಾಟೋಗ್ರಾಫರ್ ಮೋಹನನ್ ಅವರ ಪುತ್ರಿಯಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟು ತಮ್ಮ ವಿಶೇಷ ಪ್ರತಿಭೆಯಿಂದ ಮನ್ನಣೆ ಗಳಿಸಿದರು.  

ವಿಜಯ್ ಅಭಿನಯದ 'ಮಾಸ್ಟರ್' ಚಿತ್ರದ ಮೂಲಕ ಮಾಳವಿಕಾ ಮೋಹನನ್ ಸ್ಟಾರ್ ಹೀರೋಯಿನ್ ಸ್ಥಾನ ಗಿಟ್ಟಿಸಿಕೊಂಡರು.  

ಮಾಳವಿಕಾ ಮೋಹನನ್ ಮೊದಲ ಚಿತ್ರ 2013 ರಲ್ಲಿ ಮಲಯಾಳಂನ 'ಪಟ್ಟಂ ಪೋಲ್' ಚಿತ್ರದ ಮೂಲಕ ನಾಯಕಿಯಾಗಿ ಸಿನಿಲೋಕಕ್ಕೆ ಪಾದಾರ್ಪಣೆ ಮಾಡಿದರು.   

ಅದರ ನಂತರ, ಈ ನಟಿ ನಿರ್ಣಾಕಂ ಚಿತ್ರದಲ್ಲಿ ತಮ್ಮ ಅಭಿನಯದ ಮೂಲಕ ಸಿನಿ ಪ್ರೇಕ್ಷಕರ ಗಮನಸೆಳೆದರು.. ಸ್ಯಾಂಡಿವುಡ್ ನಲ್ಲೂ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.  

ಇಶಾನ್ ಖಟ್ಟರ್ ಜೊತೆ 'ಬಿಯಾಂಡ್ ದಿ ಕ್ಲೌಡ್ಸ್' ಎಂಬ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಶೀಘ್ರದಲ್ಲೇ ಇನ್ನಷ್ಟು ಬಾಲಿವುಡ್ ಪ್ರಾಜೆಕ್ಟ್‌ಗಳೊಂದಿಗೆ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ..  

ಇತ್ತೀಚೆಗಷ್ಟೇ ‘ತಂಗಳನ್’ ಸಿನಿಮಾ ಮೂಲಕ ತಮಿಳು ಮತ್ತು ತೆಲುಗು ಪ್ರೇಕ್ಷಕರ ಮುಂದೆ ಬಂದಿತ್ತು. ಈ ಸಿನಿಮಾದಲ್ಲಿ ಮಾಳವಿಕಾ ನಟಸಿದ್ದರು. ಈ ಸಿನಿಮಾ ಅಷ್ಟಾಗಿ ಮನರಂಜನೆ ನೀಡಲಿಲ್ಲ.      

ಸದ್ಯದಲ್ಲೇ ಪ್ರಭಾಸ್ ಜೊತೆ 'ದಿ ರಾಜಾ ಸಾಬ್' ಸಿನಿಮಾದ ಮೂಲಕ ಮಾಳವಿಕಾ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚಲು ರೆಡಿಯಾಗಿದ್ದಾರೆ..  

ಪ್ರಭಾಸ್ ಅಭಿನಯದ ‘ದಿ ರಾಜಾ ಸಾಬ್’ ಚಿತ್ರದ ಮೂಲಕ ನಾಯಕಿಯಾಗಿ ಮಾಳವಿಕಾ ಮೋಹನನ್ ಅವರ ವೃತ್ತಿಜೀವನಕ್ಕೆ ಎಷ್ಟರ ಮಟ್ಟಿಗೆ ತಿರುವುದು ಸಿಗುತ್ತೆ ಎಂಬುದನ್ನು ಕಾದು ನೋಡಬೇಕಿದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link