ಸಿನಿಮಾಗಾಗಿ ಸಂಪೂರ್ಣ ಲುಕ್ ಬದಲಾಯಿಸಿಕೊಂಡ ಸ್ಟಾರ್ ನಟಿ..! ಈಕೆ ಯಾರು ಅಂತ ಗೊತ್ತಾಯ್ತಾ..?
)
ಸೋಷಿಯಲ್ ಮೀಡಿಯಾ ಸೆನ್ಸೇಷನ್ ಮಾಳವಿಕಾ ಮೋಹನನ್ ಬಗ್ಗೆ ನಾವು ಹೇಳುತ್ತಿರುವುದು.. ನಿಜವಾಗಿ ಈ ಚೆಲುವೆ ಹಾಕುವ ಒಂದೊಂದು ಪೋಸ್ಟ್ ಸೋಷಿಯಲ್ ಮೀಡಿಯಾವನ್ನೇ ಅಲ್ಲೋಲಕಲ್ಲೋಲ ಮಾಡುತ್ತೆ..
)
ಈಕೆಯ ಅದಮ್ಯ ಸೌಂದರ್ಯ ಪಡ್ಡೆ ಹುಡುಗರನ್ನ ನಿದ್ದೆಯಿಲ್ಲದಂತೆ ಮಾಡುತ್ತದೆ. ಇನ್ಸ್ಟಾಗ್ರಾಮ್ ನಲ್ಲಿ ಆಗಾಗ ಹಾಟ್ ಫೋಟೋಗಳನ್ನು ಹಾಕುತ್ತಲೇ ಇರುತ್ತಾಳೆ ಈ ಚೆಲುವೆ.
)
ಮಾಳವಿಕಾ ಫೋಟೋ ಹಾಕಿದಾಗ ಹಲವು ನೆಟ್ಟಿಗರು ಸೌಂದರ್ಯ ಎನ್ನುವ ಪದಕ್ಕೆ ಇವಳೇ ಅರ್ಥ ಅಂತ ಕಾಮೆಂಟ್ ಮಾಡುತ್ತಲೇ ಇರುತ್ತಾರೆ.. ಅಷ್ಟು ಕ್ರೇಜಿ ಫ್ಯಾನ್ಸ್ ಈಕೆಗಿದ್ದಾರೆ..
ಸದ್ಯ ಈ ಚೆಲುವೆ ವಿಕ್ರಮ್ ಜೊತೆ ತಂಗಲಾನ್ ಸಿನಿಮಾದಲ್ಲಿ ನಟಿಸಿದ್ದಾರೆ.. ಇತ್ತೀಚಿಗೆ ನಟಿಯ ಫಸ್ಟ್ ಲುಕ್ ಅನ್ನು ಚಿತ್ರತಂಡ ರಿವೀಲ್ ಮಾಡಿತ್ತು.. ಪೋಸ್ಟರ್ ನೋಡಿ ನೆಟ್ಟಿಗರು ಒಂದು ಕ್ಷಣ ದಂಗಾಗಿದ್ದಾರೆ..
ಇದು ಮಾಳವಿಕಾನಾ..? ಅಂತ ಅನೇಕರು ಅನುಮಾನಿಸುತ್ತಿದ್ದಾರೆ.. ಈ ಸಿನಿಮಾದಲ್ಲಿ ಮಾಳವಿಕಾಗೆ ಬೆಸ್ಟ್ ರೋಲ್ ಸಿಕ್ಕಿದೆ ಎಂಬುದು ಒಳಗಿನ ಮಾತು.
ತಂಗಲಾನ್ ಸಿನಿಮಾದಲ್ಲಿ ಈಕೆ ಮಂತ್ರಗಾರ್ತಿ ಪಾತ್ರದಲ್ಲಿ ನಟಿಸಿದ್ದಾರೆ ಎಂದು ವರದಿಯಾಗಿದೆ. ಈ ಚಿತ್ರ ಆಗಸ್ಟ್ 15 ರಂದು ಬಿಡುಗಡೆಯಾಗಲಿದೆ.
ದಶಕದ ಹಿಂದೆ ಮಲಯಾಳಂನ ‘ಪಟ್ಟಂ ಪೋಲ್’ ಚಿತ್ರದ ಮೂಲಕ ಮಾಳವಿಕಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟರು. ದುಲ್ಕರ್ ಸಲ್ಮಾನ್ ಅಭಿನಯದ ಈ ಚಿತ್ರದ ನಿರ್ದೇಶಕ ಅಳಗಪ್ಪನ್.
2016ರಲ್ಲಿ ತೆರೆಕಂಡ ನಾನು ಮತ್ತು ವರಲಕ್ಷ್ಮಿ ಎಂಬ ಸಿನಿಮಾದ ಮೂಲಕ ಮಾಳವಿಕಾ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು.. ಈ ಸಿನಿಮಾ ಉತ್ತಮ ಪ್ರಶಂಸೆ ಪಡೆದಿತ್ತು.
ಈ ಚೆಲುವೆಗೆ ರಜನಿಕಾಂತ್ ಅಭಿನಯದ 'ಪೇಟಾ' ಚಿತ್ರ ಒಳ್ಳೆಯ ಜನಪ್ರಿಯತೆಯನ್ನು ತಂದುಕೊಟ್ಟಿತು. ದಳಪತಿ ವಿಜಯ್ ನಟನೆಯ ‘ಮಾಸ್ಟರ್’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ ಮಾಳವಿಕಾ.
ಸಧ್ಯ ಈ ಚೆಲುವೆ ಪ್ರಭಾಸ್ ನಟನೆಯ ಮುಂಬರುವ ಬಹುನಿರೀಕ್ಷಿತ ಸಿನಿಮಾ 'ರಾಜಾಸಾಬ್'ನಲ್ಲಿ ನಟಿಸುತ್ತಿದ್ದಾರೆ.. ಈ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಮಾಳವಿಕಾ ಮೋಡಿ ಮಾಡುವ ಸಾಧ್ಯತೆ ಇದೆ..