ಬೆಂಗಳೂರಿನ ಈ ಸುಂದರಿ ಕಂಡ್ರೆ ಪ್ಯಾನ್‌ ಇಂಡಿಯಾ ನಟಿಯರಿಗೆ ನಡುಕ ಹುಟ್ಟುತ್ತೆ..! ಅಬ್ಬಬ್ಬಾ... ಈಕೆ ಸೌಂದರ್ಯವೇ ಒಂದು ಹಬ್ಬ..

Sat, 17 Aug 2024-7:43 pm,

ಈ ಸುಂದರಿ ಈಗ ಇಂಡಸ್ಟ್ರಿಯಲ್ಲಿ ಕ್ರೇಜಿ ಹೀರೋಯಿನ್. ಹುಟ್ಟಿದ್ದು ಬೆಂಗಳೂರಿನಲ್ಲಿ ಆದರೆ ಬೆಳೆದದ್ದು ಹೈದರಾಬಾದ್‌ನಲ್ಲಿ.   

ಮಾಡೆಲ್ ಆಗಿ ವೃತ್ತಿ ಜೀವನ ಆರಂಭಿಸಿದ ಈ ಮೋಹನಾಂಗಿ ನಾಯಕಿಯಾಗಿ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದಾರೆ. ತೆಲುಗು, ತಮಿಳಿನಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ.  

ಕಳೆದ ಕೆಲವು ವರ್ಷಗಳಿಂದ ಈ ಚೆಲುವೆಗೆ ಸರಿಯಾದ ಅವಕಾಶಗಳು ಸಿಕ್ಕಿರಲಿಲ್ಲ. ಕೈಯಲ್ಲಿ ಬಿಗ್‌ ಪ್ರಾಜೆಕ್ಟ್‌ಗಳಿದ್ದರೂ ಸಹ ಸ್ಟಾರ್‌ಗಿರಿ ಬರುತ್ತಿಲ್ಲ. ಇದರಿಂದಾಗಿ ಈ ನಟಿಯ ವೃತ್ತಿಜೀವನ ಈಗ ಅತಂತ್ರ ಸ್ಥಿತಿಯಲ್ಲಿದೆ.   

ಆದರೆ ಸಧ್ಯ ಬ್ಯೂಟಿ ನಟಿಸುತ್ತಿರುವ ಎರಡು ಬಿಗ್‌ ಸಿನಿಮಾಗಳು ಈಕೆಯ ಭವಿಷ್ಯ ನಿರ್ಧಾರ ಮಾಡಲಿವೆ.. ಅದರಲ್ಲಿ ಒಂದು ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಪ್ರಭಾಸ್, ಇನ್ನೊಂದು ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಸಿನಿಮಾ.   

ಈ ಎರಡು ಸಿನಿಮಾಗಳು ಹಿಟ್ ಆದಲ್ಲಿ ಈ ಬ್ಯೂಟಿಗೆ ಸ್ಟಾರ್ ನಾಯಕಿಯರ ಪಟ್ಟಿಗೆ ಸೇರುತ್ತಾರೆ. ಈ ಚೆಲುವೆ ಬೇರೆ ಯಾರೂ ಅಲ್ಲ ನಿಧಿ ಅಗರ್ವಾಲ್.   

ಇಂದು ನಿಧಿ (ಶನಿವಾರ ಆಗಸ್ಟ್ 17) ಹುಟ್ಟುಹಬ್ಬ. ಈ ಸಂದರ್ಭದಲ್ಲಿ, ಅನೇಕ ಸೆಲೆಬ್ರಿಟಿಗಳು, ಅಭಿಮಾನಿಗಳು ಮತ್ತು ನೆಟಿಜನ್‌ಗಳು ಶುಭಾಶಯಗಳನ್ನು ಕೋರುತ್ತಿದ್ದಾರೆ.   

ಈ ವೇಳೆ ಅವರ ಬಾಲ್ಯದ ಫೋಟೋಗಳು ಮತ್ತು ವೀಡಿಯೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ..   

ನಿಧಿ ಅಗರ್ವಾಲ್ ತೆಲುಗು ಚಿತ್ರಗಳಲ್ಲಿ ಕಾಣಿಸಿಕೊಂಡು ಎರಡು ವರ್ಷಗಳಿಗಿಂತ ಹೆಚ್ಚು ಕಳೆದಿದೆ. ಪ್ರಸ್ತುತ, ಅವರು ಹರಿಹರ ವೀರ ಮಲ್ಲು ಮತ್ತು ಪ್ರಭಾಸ್ ರಾಜಸಾಬ್ ಚಿತ್ರದಲ್ಲಿ ಪವನ್ ಕಲ್ಯಾಣ್ ಜೊತೆಗೆ ನಟಿಸುತ್ತಿದ್ದಾರೆ.   

ಇಂದು ನಿಧಿ ಹುಟ್ಟುಹಬ್ಬದ ಪ್ರಯುಕ್ತ ಹರಿಹರ ವೀರ ಮಲ್ಲು ಚಿತ್ರತಂಡ ಪ್ರಮುಖ ಅಪ್ಡೇಟ್ ನೀಡಿದೆ. ಚಿತ್ರದಲ್ಲಿ ನಿಧಿ ಪಾತ್ರದ ಹೊಸ ಪೋಸ್ಟರ್ ಬಿಡುಗಡೆ ಮಾಡಿದೆ. ರಾಜಾಸಾಬ್ ಸೆಟ್‌ನಲ್ಲಿ, ನಿರ್ಮಾಪಕರು ನಿಧಿ ಅಗರ್ವಾಲ್ ಅವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಯೋಜಿಸಿದ್ದರು.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link