Rashmika tattoo : ರಶ್ಮಿಕಾ ಕೈ ಮೇಲಿರುವ `Irreplaceable` ಟ್ಯಾಟೂ ಹಿಂದಿನ ಗುಟ್ಟೇನು ಗೊತ್ತೇ?
ನ್ಯಾಷನಲ್ ಕ್ರಷ್, ರಶ್ಮಿಕಾ ಮಂದಣ್ಣ ತಮ್ಮದೇ ಆದ ಫ್ಯಾನ್ ಬೇಸ್ ಹೊಂದಿರುವ ನಟಿ. ಅವರ ಕೈ ಮೇಲೆ Irreplaceable ಎಂಬ ಟ್ಯಾಟೂ ಇದೆ.
ತಮ್ಮ Irreplaceble ಟ್ಯಾಟೂ ಕುರಿತು ಸಂದರ್ಶನವೊಂದರಲ್ಲಿ ರಶ್ಮಿಕಾ ಅಚ್ಚರಿಯ ವಿಚಾರ ಹೇಳಿಕೊಂಡಿದ್ದಾರೆ.
ನನಗೆ ಟ್ಯಾಟೂ ಹಾಕಿಸಿಕೊಳ್ಳುವ ಯೋಚನೆ ಇರಲಿಲ್ಲ. ನಾನು ಕಾಲೇಜಿನಲ್ಲಿದ್ದಾಗ ಒಂದು ದಿನ ನನ್ನ ಸ್ನೇಹಿತನೊಬ್ಬ, ಹುಡುಗಿಯರು ಜಾಸ್ತಿ ನೋವು ಅನುಭವಿಸುವುದಿಲ್ಲ ಎಂದಿದ್ದ.
ಹುಡುಗಿಯರು ಒಂದು ಚಿಕ್ಕ ಸೂಜಿಗೆ ಕೂಡ ತುಂಬಾ ಹೆದರುತ್ತಾರೆ ಎಂದು ಮಾತನಾಡಿದ್ದ. ಅಂದು ಅವನ ಮಾತನ್ನ ನಾನು ಸೀರಿಯಸ್ ಆಗಿ ತಗೊಂಡೆ. ಅವನ ಮಾತಿಗೆ ತಿರುಗಿಬಿದ್ದು ನಾನು ನನ್ನ ಕೈ ಮೇಲೆ ಈ ಹಚ್ಚೆ ಹಾಕಿಸಿಕೊಂಡೆ.
ಟ್ಯಾಟೂ ಹಾಕಿಕೊಳ್ಳಲು ಹೋದೆ, ಆದರೆ ಏನು ಹಾಕಿಕೊಳ್ಳಬೇಕು ಎಂದು ನನಗೆ ತಿಳಿದಿರಲಿಲ್ಲ. ಯಾವಾಗಲೂ ನಾನು ನಾನಾಗಿಯೇ ಇರಲು ಇಷ್ಟಪಡುತ್ತೇನೆ.
ಪ್ರತಿಯೊಬ್ಬ ಮನುಷ್ಯನ ಸ್ಥಾನವನ್ನು ಯಾರು ತುಂಬಲಾರರು. ಅದೇ ಕಾರಣಕ್ಕೆ ʻIrreplacebleʼ ಎಂದು ಟ್ಯಾಟೂ ಹಾಕಿಸಿಕೊಂಡೆ ಎಂದು ರಶ್ಮಿಕಾ ಹೇಳಿದ್ದಾರೆ.