ಪಂದ್ಯ ಗೆದ್ದ ತಕ್ಷಣ ಧೋನಿ ಸ್ಟಂಪ್‌ ಕೈಗೆತ್ತಿಕೊಳ್ಳಲು ಕಾರಣ ಏನು ಗೊತ್ತಾ..? ಇದರ ಹಿಂದಿದೆ ಡಾರ್ಕ್‌ ಸೀಕ್ರೆಟ್‌

Sat, 24 Aug 2024-8:02 am,

ಮಹೇಂದ್ರ ಸಿಂಗ್ ಧೋನಿ ವಿಶ್ವ ಕ್ರಿಕೆಟ್ ಇತಿಹಾಸದಲ್ಲಿ ಬೆಸ್ಟ್ ಫಿನಿಶರ್ ಎಂದು ಹೆಸರು ಪಡೆದವರು. ಹಲವು ಪಂದ್ಯಗಳಲ್ಲಿ ಒತ್ತಡವನ್ನು ಶಾಂತವಾಗಿ ಎದುರಿಸಿ ತಂಡಕ್ಕೆ ಜಯ ತಂದುಕೊಟ್ಟು ‘ಮಿಸ್ಟರ್ ಕೂಲ್’ ಎಂದೇ ಗುರುತಿಸಿಕೊಂಡವರು.   

ಧೋನಿ ಸ್ಥಾನಕ್ಕೆ ಫಿನಿಶರ್ ಆಗಿ ಹಲವು ಆಟಗಾರರು ಬಂದಿದ್ದರು ಸಹ ಮಾಹಿ ಸ್ಥಾನವನ್ನು ಯಾರಿಂದಲೂ ಸಹ ತುಂಬಲು ಸಾಧಯವಾಗಲಿಲ್ಲ.  

ಎಲ್ಲಾ ಪಂದ್ಯದಲ್ಲಿಯೂ ಧೋನಿ ಪಂದ್ಯ ಗೆದ್ದ ತಕ್ಷಣ ಅವರು ಒಂದು ಕೆಲಸ ಮಾಡುತ್ತಾರೆ. ಅದು ಯಾಕೆ ಎಂದು ಇಂದಿಗೂ ಕೂಡ ಹಲವರಿಗೆ ತಿಳಿದಿಲ್ಲ.  

ಅಷ್ಟಕ್ಕೂ ಆ ಕೆಲಸ ಏನು ಅಂಥೀರಾ.. ಮಾಹಿ ಎದುರಾಳಿಯ ವಿರುದ್ಧ ಗೆದ್ದ ತಕ್ಷಣ, ಅವರು ಸ್ಟಂಪ್‌ಗಳನ್ನು ಕೈಗೆತ್ತಿಕೊಂಡು ಸಂಭ್ರಮಿಸುತ್ತಾರೆ.   

ಉಳಿದೆಲ್ಲ ಆಟಗಾರರು ಗೆಲುವಿನ ಖುಷಿಯಲ್ಲಿ ಮಿಂದೆದ್ದರೆ, ಮಾಹಿ ಮಾತ್ರ ಇನ್ನೊಂದೆಡೆ ಪ್ರತ್ಯೇಕವಾಗಿ ಸಂಭ್ರಮಿಸುತ್ತಿರುತ್ತಾರೆ. ಆದರೆ ಮಾಹಿ ಈ ರೀತಿ ಮಾಡಲು ಕಾರನ ಏನು? ಅವರು ನಿಜವಾಗಿಯೂ ಏನು ಮಾಡುತ್ತಾರೆ ಎಂಬ ಪ್ರಶ್ನೆ ಅನೇಕರಿಗಿದೆ.  

ಈ ಪ್ರಶ್ನೆಗೆ ಧೋನಿ ಸಂದರ್ಶನವೊಂದರಲ್ಲಿ ಉತ್ತರಿಸಿದ್ದಾರೆ. “ನಾನು ಸ್ಟಂಪ್‌ಗಳನ್ನು ಗೆಲುವಿನ ಸಂಕೇತವಾಗಿ ತೆಗೆದುಕೊಳ್ಳುತ್ತೇನೆ. ನಾನು ಪಂದ್ಯಕ್ಕೆ ಹೇಗೆ ತಯಾರಿ ನಡೆಸಿದೆ? ನಾವು ಹೇಗೆ ಹೋರಾಡಿ ಗೆದ್ದೆವು? ಅಂತಹ ವಿಷಯಗಳನ್ನು ನೆನಪಿಟ್ಟುಕೊಳ್ಳಲು ನಾನು ಸ್ಟಂಪ್‌ಗಳನ್ನು ನನ್ನೊಂದಿಗೆ ಒಯ್ಯುತ್ತೇನೆ.  

ಈ ರೀತಿ ತಗೆದುಕೊಂಡು ಹೋದ ಸ್ಟಂಪ್‌ಗಳನ್ನು ನಾನು ನನ್ನ ಮನೆಯಲ್ಲಿ ವಿಶೇಷ ಜಾಗದಲ್ಲಿ ಇರಿಸಿದ್ದೇನೆ," ಎಂದು ಧೋನಿ ಹೇಳಿದ್ದಾರೆ.   

ಧೋನಿಗೆ ಈ ಸಭ್ಯಾಸ ಅಷ್ಟೆ ಅಲ್ಲ, ಬೈಕ್ ಎಂದರೆ ಕೂಡ ತುಂಬಾ ಇಷ್ಟ ಎಂಬುದು ಎಲ್ಲರಿಗೂ ಗೊತ್ತು. ಆದರೆ ಧೋನಿ ಹಾಗೂ ಸ್ಟಂಪ್ ನಡುವಿನ  ಲವ್ ಸ್ಟೋರಿ ಕೆಲವರಿಗೆ ಮಾತ್ರ ಗೊತ್ತು.  

ಆದರೆ, 2015ರಲ್ಲಿ ಐಸಿಸಿ ಆಟಗಾರರು ಮೈದಾನದಲ್ಲಿ ಸ್ಟಂಪ್ ಕೊಂಡೊಯ್ಯುವುದನ್ನು ನಿಷೇಧಿಸಿತ್ತು.   

ಐಸಿಸಿ ಸುಮಾರು ರೂ.8 ಲಕ್ಷಗಳನ್ನು ಖರ್ಚು ಮಾಡಿದ ನಂತರ ಈ ನಿಯಮವನ್ನು ತಂದಿತು ಮತ್ತು ಸೀಸದ ಸ್ಟಂಪ್‌ಗಳನ್ನು ಬಳಸಲು ಪ್ರಾರಂಭಿಸಿತು. ಆದರೆ ನೆನಪಿಗಾಗಿ ಸ್ಟಂಪ್ ತೆಗೆದುಕೊಳ್ಳಲು ಬಯಸಿದ್ದ ಧೋನಿಗೆ ಇದು ಸಮಸ್ಯೆಯಾಯಿತು.   

ಇದರೊಂದಿಗೆ ಧೋನಿ ಐಸಿಸಿಗೆ ವಿಶೇಷ ಮನವಿ ಮಾಡಿದರು. ಆಟಗಾರರಿಗೆ ಮರದ ಸ್ಟಂಪ್‌ಗಳನ್ನು ಲಭ್ಯವಾಗುವಂತೆ ಧೋನಿ ಕೇಳಿದ್ದರು ಎಂದು ವರದಿಗಳು ಬಂದವು, ಆದರೆ ಐಸಿಸಿ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸದ ಕಾರಣ ಧೋನಿ ಹಾಗೂ ಸ್ಟಂಪ್‌ ಲವ್‌ ಸ್ಟೋರಿಗೆ ಬ್ರೇಕ್‌ ಬಿದ್ದಿತ್ತು.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link