ಐಪಿಎಲ್‌ಗೆ ಗ್ಲಾಮರ್ ಟಚ್ ನೀಡಲಿದ್ದಾರೆ ಟೀಂ ಇಂಡಿಯಾದ ಈ ಆಟಗಾರರ ಪತ್ನಿಯರು

Tue, 01 Mar 2022-5:22 pm,

ಜಸ್ಪ್ರೀತ್ ಬುಮ್ರಾ ಅವರ ಯಾರ್ಕರ್ ಬಗ್ಗೆ ಎಲ್ಲರಿಗೂ ಗೊತ್ತು. ಜಸ್ಪ್ರೀತ್ ಬುಮ್ರಾ ಅವರು ತಮ್ಮ ಗೆಳತಿ ಸಂಜನಾ ಗಣೇಶನ್ ಅವರೊಂದಿಗೆ ಕಳೆದ ವರ್ಷವಷ್ಟೇ ಗೋವಾದಲ್ಲಿ ಸಪ್ತಪದಿ ತುಳಿದಿದ್ದಾರೆ.  30 ವರ್ಷದ ಸಂಜನಾ ಮಾಜಿ ಮಾಡೆಲ್ ಆಗಿದ್ದು, ಸ್ಪೋರ್ಟ್ಸ್ ಆಂಕರ್ ಕೂಡ ಆಗಿದ್ದಾರೆ. 

ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಆಟದ ಜೊತೆಗೆ ತಮ್ಮ ನಗುವಿನ ಕಾರಣದಿಂದಲೂ  ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಲ್ಲಿರುತ್ತಾರೆ. ಚಹಾಲ್ ಅವರ ಪತ್ನಿ ಧನಶ್ರೀ ವರ್ಮಾ ಸೌಂದರ್ಯ ಮಾತ್ರವಲ್ಲ ತಮ್ಮ ಮನಮೋಹಕ ನೃತ್ಯಕ್ಕೂ ಹೆಸರುವಾಸಿ.

ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಯಾರಿಗೆ ತಾನೇ  ಗೊತ್ತಿಲ್ಲ. ಬಾಲಿವುಡ್ ನಟಿ ಅನುಷ್ಕಾ ಸದಾ ಸುದ್ದಿಯಲ್ಲಿರುತ್ತಾರೆ. ಅವರು ಹಲವು ವರ್ಷಗಳಿಂದ ಕ್ರೀಡಾಂಗಣಕ್ಕೆ ಬಂದು ಕೊಹ್ಲಿಯನ್ನು ಪ್ರೋತ್ಸಾಹಿಸುತ್ತಿದ್ದಾರೆ. 

ಗ್ಲಾಮರ್ ವಿಚಾರಕ್ಕೆ ಬಂದರೆ ಗುಜರಾತ್ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಪತ್ನಿ ನತಾಶಾ ಸ್ಟಾಂಕೋವಿಕ್ ಹೆಸರು ಮುಂಚೂಣಿಯಲ್ಲಿರುತ್ತಾರೆ. ಮಗುವಿನ ತಾಯಿಯಾಗಿದ್ದರೂ ಅವರ ಗ್ಲಾಮರ್‌ಗೆ ಯಾವುದೇ ಕೊರತೆ ಇಲ್ಲ. ನತಾಶಾ ವೃತ್ತಿಯಲ್ಲಿ ನೃತ್ಯಗಾರ್ತಿ, ಹಾರ್ದಿಕ್ ತನ್ನ ಹೆಂಡತಿಯನ್ನು ತನಗೆ ಅದೃಷ್ಟ ಎಂದೇ  ಪರಿಗಣಿಸುತ್ತಾರೆ. 

ರೋಹಿತ್ ಶರ್ಮಾ ಪತ್ನಿ ರಿತಿಕಾ ಸಜ್ದೇ ಸದಾ ಸುದ್ದಿಯಲ್ಲಿರುತ್ತಾರೆ. ರಿತಿಕಾ ಮೈದಾನದಲ್ಲಿ ರೋಹಿತ್ ಶರ್ಮಾಗಾಗಿ ಪ್ರಾರ್ಥಿಸುತ್ತಿರುವುಡು ಅನೇಕ ಬಾರಿ ಬೆಳಕಿಗೆ ಬಂದಿದೆ. ರಿತಿಕಾ ಮೈದಾನದಲ್ಲಿದ್ದಾಗಲೆಲ್ಲ, ರೋಹಿತ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ರಿತಿಕಾ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link