ಇದೇ ನೋಡಿ ವಿಶ್ವದ ಅತ್ಯಂತ ಐಷಾರಾಮಿ ಮನೆ: ಇದರ ಬೆಲೆ ಎಷ್ಟು ಗೊತ್ತಾ..?
ಅಮೆರಿಕದಲ್ಲಿ ನಿರ್ಮಿಸಲಾದ ಈ ಐಷಾರಾಮಿ ಮನೆ ತುಂಬಾ ದೊಡ್ಡದಾಗಿದೆ. ಇಲ್ಲಿ ಎಲ್ಲ ರೀತಯ ಸೌಲಭ್ಯಗಳು ಲಭ್ಯವಿವೆ. ರಾಜ-ಮಹಾರಾಜರೇ ಇದರ ಮುಂದೆ ತಲೆಬಾಗಿದ್ದಾರೆ. ವಿಶ್ವದ ಅತ್ಯಂತ ದುಬಾರಿ ಮತ್ತು ಐಷಾರಾಮಿ ಮನೆ ಮುಂದಿನ ದಿನಗಳಲ್ಲಿ ಹರಾಜಾಗಲಿದೆ. ನಿಮಗೆ ಬೇಕಾದರೆ ಹರಾಜಿನಲ್ಲಿ ಬಿಡ್ ಮಾಡುವ ಮೂಲಕ ನೀವು ಈ ಮನೆಯಲ್ಲಿ ವಾಸಿಸುವ ಸುಯೋಗವನ್ನು ಪಡೆಯಬಹುದು.
ವರದಿಗಳ ಪ್ರಕಾರ, ಕ್ಯಾಲಿಫೋರ್ನಿಯಾದ ಸುಂದರವಾದ ಪರ್ವತ ಪ್ರದೇಶದಲ್ಲಿ ನಿರ್ಮಿಸಲಾದ ಈ ಮನೆಯ ಹೆಸರು ‘ದಿ ಒನ್’. ಇದರ ವಿಸ್ತೀರ್ಣ ಸುಮಾರು 10 ಸಾವಿರ ಚದರ ಅಡಿ ಇದೆ. ಈ ಮನೆಯಲ್ಲಿ 21 ಐಷಾರಾಮಿ ಬೆಡ್‌ರೂಮ್‌ಗಳು, 4 ಈಜುಕೊಳಗಳು, 45 ಆಸನಗಳ ಸಿನಿಮಾ ಹಾಲ್, 30 ಕಾರ್ ಪಾರ್ಕಿಂಗ್ ಗ್ಯಾರೇಜ್, ರನ್ನಿಂಗ್ ಟ್ರ್ಯಾಕ್, ಒಳಾಂಗಣ ಸ್ಪಾ, ಬ್ಯೂಟಿ ಸಲೂನ್ ಇದೆ. ಈ ಮನೆ ಎಲ್ಲಾ ಕಡೆಯಿಂದ ತೆರೆದಿರುತ್ತದೆ ಮತ್ತು ಅಲ್ಲಿಂದ ಇಡೀ ನಗರದ ಸುಂದರ ನೋಟವನ್ನು ಸವಿಯಬಹುದು. ಈ ಮನೆಯ ಸಮೀಪವೇ ಹಾಲಿವುಡ್ ತಾರೆ ಜೆನ್ನಿಫರ್ ಅನಿಸ್ಟನ್ ಮತ್ತು ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ವಾಸಿಸುತ್ತಿದ್ದಾರೆ.
ವರದಿಯ ಪ್ರಕಾರ ನೀವು ಈ ಐಷಾರಾಮಿ ಮನೆ(ವಿಶ್ವ ಅತ್ಯಂತ ದುಬಾರಿ ಮನೆ) ಖರೀದಿಸಲು ಬಯಸಿದರೆ, ಕೇವಲ 500 ಮಿಲಿಯನ್ ಅಮೆರಿಕನ್ ಡಾಲರ್(ಸುಮಾರು 37 ಲಕ್ಷ ಕೋಟಿ ರೂ.ಗಿಂತಲೂ ಹೆಚ್ಚು)ಹಣ ಪಾವತಿಸಬೇಕು. ಆದರೆ ಈ ಮನೆಯ ಮಾಲೀಕರು ಬಿಡ್‌ಗಾಗಿ ಆರಂಭಿಕ ಬೆಲೆಯನ್ನು ನಿಗದಿಪಡಿಸಿದ್ದಾರೆ. ನೀವು ಈ ಮನೆಯನ್ನು ಇದಕ್ಕಿಂತಲೂ ಅಗ್ಗದಲ್ಲಿ ಪಡೆಯಬಹುದು. ಇದನ್ನು ಹರಾಜು ಮಾಡಲು ಕಾರಣ ಮನೆಯ ಮಾಲೀಕ ಹೊಂದಿರುವ ದೊಡ್ಡ ಮೊತ್ತದ ಸಾಲ. ಹೀಗಾಗಿ ಸಾಲ ತೀರಿಸಲು ಆತ ತನ್ನ ನಿಗದಿತ ಬೆಲೆಗಿಂತ ಕಡಿಮೆ ಬೆಲೆಗೆ ಮನೆ ಮಾರಲು ಸಿದ್ಧನಾಗಿದ್ದಾನೆಂದು ತಿಳಿದುಬಂದಿದೆ.
ಈ ಐಷಾರಾಮಿ ಮನೆಯ ಒಳಭಾಗವನ್ನು ಚಿತ್ರ ನಿರ್ಮಾಪಕ ನೈಲ್ ನಿಯಾಮಿ ವಿನ್ಯಾಸಗೊಳಿಸಿದ್ದಾರೆ. ಅವರು ಈ ಕೆಲಸವನ್ನು ಪೂರ್ಣಗೊಳಿಸಲು ಸುಮಾರು 7 ವರ್ಷಗಳನ್ನು ತೆಗೆದುಕೊಂಡರು. ಈ ಭವ್ಯವಾದ ಮನೆಯ ವಿನ್ಯಾಸ ಮತ್ತು ಒಳಾಂಗಣದ ಬಗ್ಗೆ ಚರ್ಚಿಸಿ ಅಂತಿಮಗೊಳಿಸಲಾಯಿತು. ಈಗ ಮನೆಯ ಮಾಲೀಕರು ಮೊದಲ ಬಾರಿಗೆ ವಿಶ್ವದ ಅತ್ಯಂತ ಐಷಾರಾಮಿ ಮನೆಯ ಚಿತ್ರಗಳನ್ನು ಸಾರ್ವಜನಿಕರಿಗಾಗಿ ಬಿಡುಗಡೆ ಮಾಡಿದ್ದಾರೆ. ಜನರು ಈ ಮನೆಯ ಸೌಂದರ್ಯ ಮತ್ತು ಸೌಲಭ್ಯಗಳನ್ನು ನೋಡಿ ಮಂತ್ರಮುಗ್ಧರಾಗಿದ್ದಾರೆ.
ಅಮೆರಿಕದ ಅತ್ಯಂತ ದುಬಾರಿ ಮನೆ ಮಾರಾಟದ ದಾಖಲೆಯ ಬಗ್ಗೆ ನೋಡುವುದಾದರೆ ಈ ಸಾಧನೆಯು ಬಿಲಿಯನೇರ್ ಕೆನ್ ಗ್ರಿಫಿನ್ ಹೆಸರಿನಲ್ಲಿದೆ. ಅವರು ಮ್ಯಾನ್‌ಹ್ಯಾಟನ್‌ನಲ್ಲಿ 238 ಮಿಲಿಯನ್ ಅಮೆರಿಕನ್ ಡಾಲರ್ ಗೆ ಪೆಂಟ್‌ಹೌಸ್ ಅನ್ನು ಖರೀದಿಸಿದ್ದರು. ಇದು ಅಮೆರಿಕದಲ್ಲಿ ಖರೀದಿಸಿದ ಅತ್ಯಂತ ದುಬಾರಿ ಮನೆಯಾಗಿದೆ. ಪ್ರಪಂಚದ ದಾಖಲೆಯನ್ನು ನೋಡುವುದಾದರೆ ಚೀನಾದ ಉದ್ಯಮಿಯೊಬ್ಬರು ಬ್ರಿಟನ್‌ನಲ್ಲಿ ಮೆಗಾ ಮ್ಯಾನ್ಷನ್ ಖರೀದಿಸಲು 275 ಮಿಲಿಯನ್ ಅಮೆರಿಕನ್ ಡಾಲರ್ ಒಪ್ಪಂದ ಮಾಡಿಕೊಂಡಿದ್ದಾರೆ. ಆದರೆ ಸೌದಿ ರಾಜಕುಮಾರ 300 ಮಿಲಿಯನ್ ಅಮೆರಿಕನ್ ಡಾಲರ್ ಗೆ ಫ್ರೆಂಚ್ ರೆಸಾರ್ಟ್ ಅನ್ನು ಖರೀದಿಸಿದ್ದಾರೆ. ಸದ್ಯ ಈ ಐಷಾರಾಮಿ ಮನೆ ಅತಿಹೆಚ್ಚು ಬೆಲೆಗೆ ಮಾರಾಟವಾದರೆ ಸೌದಿ ರಾಜಕುಮಾರನ ಹೆಸರಿನಲ್ಲಿರುವ ದಾಖಲೆ ಧೂಳಿಪಟವಾಗಲಿದೆ.