ವಿಶ್ವದ ಏಕೈಕ ತೇಲುವ ಅಂಚೆ ಕಚೇರಿ.. 70 ವರ್ಷಗಳಿಂದ ಹೌಸ್‌ಬೋಟ್‌ ನಿಂದ ಅಂಚೆ ಸೇವೆಸಲ್ಲಿಸುತ್ತಿದೆ!!

Thu, 18 Jul 2024-8:41 pm,

ಜಗತ್ತಿನಲ್ಲಿರುವ ವಿಶೇಷಗಳಲ್ಲಿ ಇಲ್ಲೊಂದು ವಿಶೇಷ ಅಂಚೆ ಕಚೇರಿ ಇದೆ. ಆದರೆ ಇದರ ವಿಶೇಷತೆ ಏನೆಂದರೆ ಈ ಅಂಚೆ ಕಚೇರಿ ಇರುವುದು ನೀರಿನ ಮೇಲೆ, ಹೇಗೆ ಎನ್ನುವುದರ ಬಗ್ಗೆ ಇಲ್ಲಿದೆ ತಿಳಿದುಕೊಳ್ಳಿ. 

ಇಲ್ಲೊಂದು ಅಂಚೆ ಕಚೇರಿ ನೀರನ್ನು ಮೇಲೆ ತೇಲುತ್ತಾ 70 ವರ್ಷಗಳಿಂದ ಅಂಚೆ ಸೇವೆಯನ್ನು ನಡೆಸಿಕೊಂಡು ಬಂದಿದೆ. 

ನೀವು ಭಾರತದಲ್ಲಿ ವಾಸಿಸುವುದಾದರೆ ಇದನ್ನು ನೋಡಲು ದೂರವೇನು ಹೋಗಬೇಕಿಲ್ಲ, ಈ ಅಂಚೆ ಕಚೇರಿ ಕಾಶ್ಮೀರದ ಶ್ರೀನಗರದಲ್ಲಿದೆ. 

ಶ್ರೀನಗರದ ದಾಲ್ ಸರೋವರದ ಪರ್ವತಗಳ ನಡುವೆ ಈ ಅಂಚೆ ಕಚೇರಿ ಇದೆ. ಇದು ಅಂಚೆ ಸೇವೆಯನ್ನು ಒದಗಿಸುವುದು ಮಾತ್ರವಲ್ಲದೆ ಒಂದು ಅದ್ಭುತ ದೃಶ್ಯವನ್ನು ಸವಿಯುವಂತೆ ಮಾಡುತ್ತದೆ 

ಇದಕ್ಕೆ ಫ್ಲೋಟಿಂಗ್ ಪೋಸ್ಟ್ ಆಫೀಸ್ ಎಂದು ಕರೆಯುತ್ತಾರೆ ಮತ್ತು ಇದು 1953 ರಲ್ಲಿ ಕೆಲಸ ಪ್ರಾರಂಭಿಸಿ, 1970ರಲ್ಲಿ ಅಧಿಕೃತವಾಗಿ ಕಾರ್ಯಾರಂಭಿಸಿತು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link