ಹುರಿದ ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಹಲವಾರು ಪ್ರಯೋಜನಗಳು
ಬೆಳ್ಳುಳ್ಳಿ ಅಡುಗೆಯಲ್ಲಿ ಬಳಸುವ ಕೆಲವು ಅಗತ್ಯ ಪದಾರ್ಥಗಳಲ್ಲಿ ಒಂದಾಗಿದೆ. ಬೆಳ್ಳುಳ್ಳಿ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದನ್ನು ಹುರಿದು ತಿನ್ನುವುದರಿಂದ ಹೆಚ್ಚು ಆರೋಗ್ಯ ಪ್ರಯೋಜನಗಳಿವೆ.
ಹುರಿದ ಬೆಳ್ಳುಳ್ಳಿ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ನಿಮ್ಮ ಆಹಾರದಲ್ಲಿ ಹುರಿದ ಬೆಳ್ಳುಳ್ಳಿಯನ್ನು ಸೇರಿಸುವುದು ರಕ್ತದೊತ್ತಡವನ್ನು ಕಡಿಮೆ ಮಾಡಲು ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಹುರಿದ ಬೆಳ್ಳುಳ್ಳಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ. ಬೆಳ್ಳುಳ್ಳಿ ನಿಮ್ಮ ದೇಹದ ನೈಸರ್ಗಿಕ ರಕ್ಷಣಾ ಕಾರ್ಯವಿಧಾನಗಳನ್ನು ಬಲಪಡಿಸುತ್ತದೆ. ಸಾಮಾನ್ಯವಾಗಿ ನಮ್ಮನ್ನು ಕಾಡುವ ನೆಗಡಿ ಕೆಮ್ಮನ್ನೂ ಇದು ಗುಣಪಡಿಸುತ್ತದೆ.
ಹುರಿದ ಬೆಳ್ಳುಳ್ಳಿ ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯಲ್ಲಿ ಪ್ರಯೋಜನಕಾರಿ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
ತಾಜಾ ಬೆಳ್ಳುಳ್ಳಿಯನ್ನು ಆರಿಸಿ. ಬೆಳ್ಳುಳ್ಳಿಯನ್ನು ಸಿಪ್ಪೆ ಸುಲಿದು ಇಟ್ಟುಕೊಳ್ಳಿ. ಆಲಿವ್ ಎಣ್ಣೆಯನ್ನು ಚಿಮುಕಿಸಿ, ಕಾದ ತವಾ ಮೇಲೆ ಸುಮಾರು 30-40 ನಿಮಿಷಗಳ ಕಾಲ ಹುರಿಯಿರಿ. ಬೆಳ್ಳುಳ್ಳಿ ಮೃದು ಮತ್ತು ಗೋಲ್ಡನ್ ಆಗುವವರೆಗೆ ಹುರಿದು ಸೇವಿಸಿ.