ಟೀಂ ಇಂಡಿಯಾ ಕೋಚ್ ಕುರಿತು ಬಿಸಿಸಿಐ ಶಾಕಿಂಗ್ ನಿರ್ಧಾರ... ಗಂಭೀರ್ ವಜಾ! ರೋಹಿತ್ ಶರ್ಮಾ ಆರಾಧ್ಯ ದೈವವೆನ್ನುವ ದಿಗ್ಗಜನಿಗೆ ಮುಂದಿನ ಜವಾಬ್ದಾರಿ!
ನ್ಯೂಜಿಲೆಂಡ್ ವಿರುದ್ಧ ಭಾರತ ತಂಡ ಹೀನಾಯ ಸೋಲು ಕಂಡ ಬಳಿಕ ಬಿಸಿಸಿಐ ಎಚ್ಚೆತ್ತುಕೊಂಡಿದೆ. ಗೌತಮ್ ಗಂಭೀರ್ ಅವರ ವರ್ತನೆಯಿಂದ ಅಸಮಾಧಾನಗೊಂಡಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಮುಂಬರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಗಂಭೀರ್‌ಗೆ ಅಗ್ನಿಪರೀಕ್ಷೆಯಾಗಲಿದೆ. ಈ ಟೆಸ್ಟ್ ನಲ್ಲಿ ಟೀಂ ಇಂಡಿಯಾ ವಿಫಲವಾದರೆ ಗಂಭೀರ್ ಶಿಕ್ಷೆಗೆ ಗುರಿಯಾಗಲಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಹೀನಾಯವಾಗಿ ಸೋತರೆ ಭಾರತ ತಂಡದ ಕೋಚ್ ಬದಲಾಗುವುದು ಖಚಿತ ಎಂಬ ವರದಿಗಳಿವೆ. ಟೆಸ್ಟ್, ಏಕದಿನ ಮತ್ತು ಟಿ20 ತಂಡಗಳಿಗೆ ವಿಶೇಷ ಕೋಚ್ ನೇಮಕ ಮಾಡಲು ಬಿಸಿಸಿಐ ಮುಂದಾಗಿದೆ.
ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಭಾರತ ಸೋತರೆ ಟೆಸ್ಟ್ ತಂಡದ ಮುಖ್ಯ ಕೋಚ್ ಹುದ್ದೆಯಿಂದ ಗೌತಮ್ ಗಂಭೀರ್ ಅವರನ್ನು ವಜಾ ಮಾಡುವ ಸಾಧ್ಯತೆ ಇದೆ. ಮುಂಬರುವ ಚಾಂಪಿಯನ್ಸ್ ಟ್ರೋಫಿಯವರೆಗೆ ಅವರು ಏಕದಿನ ತಂಡದ ಕೋಚ್ ಆಗಿ ಮುಂದುವರಿಯುವ ಸಾಧ್ಯತೆಯಿದೆ.
ಚಾಂಪಿಯನ್ಸ್ ಟ್ರೋಫಿಯಲ್ಲೂ ಟೀಂ ಇಂಡಿಯಾ ಕಳಪೆ ಪ್ರದರ್ಶನ ನೀಡಿದರೆ ಗೌತಮ್ ಗಂಭೀರ್ ಗೇಟ್ ಪಾಸ್ ಪಡೆಯುವ ಸಾಧ್ಯತೆ ಇದೆ.
ನವೆಂಬರ್ 22 ರಿಂದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಸರಣಿಯಲ್ಲಿ ಉಭಯ ತಂಡಗಳು ಐದು ಪಂದ್ಯಗಳನ್ನು ಆಡಲಿದ್ದು, ಭಾರತ 4-0 ಅಂತರದಲ್ಲಿ ಗೆದ್ದರೆ ಮಾತ್ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ತಲುಪಲಿದೆ.
ಭಾರತ ಫೈನಲ್‌ಗೆ ಲಗ್ಗೆ ಇಡದಿದ್ದರೆ, ಗೌತಮ್ ಗಂಭೀರ್ ಪ್ರದರ್ಶನದ ಬಗ್ಗೆ ಮತ್ತೆ ಪ್ರಶ್ನೆಗಳು ಉದ್ಭವಿಸುತ್ತವೆ. ಆದ್ದರಿಂದ, ಭಾರತದ ಟೆಸ್ಟ್ ಕೋಚ್ ಹುದ್ದೆಯನ್ನು ಉಳಿಸಿಕೊಳ್ಳಲು ಗೌತಮ್ ಗಂಭೀರ್ ಆಸ್ಟ್ರೇಲಿಯಾದಲ್ಲಿ ದೊಡ್ಡ ಗೆಲುವಿನ ಅಗತ್ಯವಿದೆ.
ಇನ್ನೊಂದೆಡೆ ಗಂಭೀರ್ ಅವರನ್ನು ವಜಾಗೊಳಿಸಿದರೆ ವಿವಿಎಸ್ ಲಕ್ಷ್ಮಣ್ ಅವರನ್ನು ಕೋಚ್ ಆಗಿ ನೇಮಕಗೊಳಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ವಿವಿಎಸ್ ಲಕ್ಷ್ಮಣ್ ಅವರನ್ನು ತಮ್ಮ ಆರಾಧ್ಯ ದೈವವೆಂದು ಪರಿಗಣಿಸುತ್ತಾರೆ.