ಟೀಂ ಇಂಡಿಯಾದ ಮತ್ತೊಬ್ಬ ಕ್ರಿಕೆಟಿಗನ ದಾಂಪತ್ಯ ಅಂತ್ಯ! ಮದ್ವೆಯಾದ 4 ವರ್ಷಕ್ಕೆ ಡಿವೋರ್ಸ್? ಪತ್ನಿ ಜೊತೆಗಿನ ಎಲ್ಲಾ ಫೋಟೋ ಡಿಲೀಟ್ ಮಾಡಿದ ​ಸ್ಟಾರ್ ಪ್ಲೇಯರ್

Sat, 04 Jan 2025-5:02 pm,

ಟೀಂ ಇಂಡಿಯಾದ ಸ್ಟಾರ್ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಮತ್ತು ಅವರ ಪತ್ನಿ ಧನಶ್ರೀ ವರ್ಮಾ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂದು ಸುದ್ದಿ ಹಬ್ಬುತ್ತಿದೆ.

ಕಳೆದ ವರ್ಷ 2024ರಲ್ಲಿ, ಭಾರತದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ನಟಿ ನತಾಶಾ ಸ್ಟಾಂಕೋವಿಕ್ ವಿಚ್ಛೇದನ ಘೋಷಿಸಿದ್ದರು. ಈಗ ಹೊಸ ವರ್ಷದ ಸಂದರ್ಭದಲ್ಲೇ ಯುಜ್ವೇಂದ್ರ ಚಹಾಲ್ ಮತ್ತು ಧನಶ್ರೀ ವರ್ಮಾ ಸುದ್ದಿ ಸಂಚಲನವನ್ನು ಸೃಷ್ಟಿಸಿದೆ.

 

ಯುಜ್ವೇಂದ್ರ ಚಹಾಲ್ ಮತ್ತು ಧನಶ್ರೀ ವರ್ಮಾ ಇಬ್ಬರೂ Instagram ನಲ್ಲಿ ಪರಸ್ಪರ ಅನ್‌ಫಾಲೋ ಮಾಡಿಕೊಂಡಿದ್ದಾರೆ. ಯುಜುವೇಂದ್ರ ಚಹಾಲ್ ಅವರು ಧನಶ್ರೀ ವರ್ಮಾ ಅವರೊಂದಿಗಿನ ಒಂದು ಚಿತ್ರವನ್ನು ಹೊರತುಪಡಿಸಿ ಮತ್ತೆಲ್ಲಾ ಫೋಟೋಗಳನ್ನು ತೆಗೆದುಹಾಕಿದ್ದಾರೆ. ಇದು ವದಂತಿಗೆ ಮತ್ತಷ್ಟು ಪುಷ್ಟಿ ನೀಡಿದೆ.

 

ವಿಚ್ಛೇದನದ ವದಂತಿಗಳು ನಿಜವೆಂದು ದಂಪತಿಗಳ ಹತ್ತಿರದ ಮೂಲವೊಂದು ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದೆ. "ವಿಚ್ಛೇದನವು ಅಂತಿಮವಾಗಿದೆ.  ಅಧಿಕೃತವಾಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಇನ್ನು ಇದಕ್ಕೆ ಕಾರಣಗಳು ಇನ್ನೂ ತಿಳಿದಿಲ್ಲ, ಆದರೆ ಪ್ರತ್ಯೇಕ ಜೀವನವನ್ನು ನಡೆಸಲು ನಿರ್ಧರಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ.

 

ಯುಜ್ವೇಂದ್ರ ಚಹಾಲ್ ಮತ್ತು ಧನಶ್ರೀ ವರ್ಮಾ 2020 ರಲ್ಲಿ ವಿವಾಹವಾದರು. ಪ್ರೀತಿಯಿಂದ ಯುಜಿ ಎಂದು ಕರೆಯಲ್ಪಡುವ ಯುಜ್ವೇಂದ್ರ ಅವರು ಅತ್ಯುತ್ತಮ ಭಾರತೀಯ ಕ್ರಿಕೆಟಿಗರಾಗಿದ್ದಾರೆ. ಅವರ ಪತ್ನಿ ಧನಶ್ರೀ ನೃತ್ಯ ಸಂಯೋಜಕಿಯಾಗಿದ್ದಾರೆ. ಅ

 

ಧನಶ್ರೀ ವರ್ಮಾ ಅವರು 2024 ರಲ್ಲಿ ಡ್ಯಾನ್ಸ್ ರಿಯಾಲಿಟಿ ಶೋ 'ಝಲಕ್ ದಿಖ್ಲಾ ಜಾ 11' ನಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ, ನಿರೂಪಕರಾದ ಗೌಹರ್ ಖಾನ್ ಮತ್ತು ರಿಥ್ವಿಕ್ ಧಂಜನಿ ಅವರು ಯುಜ್ವೇಂದ್ರ ಚಹಾಲ್ ಅವರೊಂದಿಗಿನ ಪ್ರೇಮಕಥೆಯ ಬಗ್ಗೆ ಧನಶ್ರೀ ವರ್ಮಾ ಅವರನ್ನು ಕೇಳಿದಾಗ, ಧನಶ್ರೀ ಚಾಹಲ್‌ಗೆ ಡ್ಯಾನ್ಸ್‌ ಕಲಿಸುತ್ತಿದ್ದ ಸಂದರ್ಭದಲ್ಲಿ ಪ್ರೀತಿ ಮೂಡಿತ್ತು ಎಂದು ಹೇಳಿದ್ದರು.

 

ZEENEWS TRENDING STORIES

By continuing to use the site, you agree to the use of cookies. You can find out more by Tapping this link