Vegetable Peelings: ಈ ತರಕಾರಿಯ ಸಿಪ್ಪೆಯಲ್ಲಿದೆ ಭರಪೂರ ಪೋಷಕಾಂಶ
ಆಲೂಗಡ್ಡೆಯ ಸಿಪ್ಪೆಯಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಶಿಯಂ ಮತ್ತು ಮೆಗ್ನೀಶಿಯಂ ಅಂಶಗಳಿದ್ದು, ಇದು ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ. ಅದರ ಸಿಪ್ಪೆಯನ್ನು ತೆಗೆದು ಬೇಯಿಸಿದರೆ, ಆ ಪೌಷ್ಟಿಕಾಂಶಗಳು ಸಿಗುವುದಿಲ್ಲ.
ಕುಂಬಳಕಾಯಿ ಸಾಂಬಾರು ಅಥವ ಪಲ್ಯ ಮಾಡುವಾಗಲೂ ಅದರ ಸಿಪ್ಪೆಯನ್ನು ತೆಗೆಯಬೇಡಿ. ಇದರ ಸಿಪ್ಪೆಯಲ್ಲಿ ಸಾಕಷ್ಟು ಪ್ರಮಾಣದ ಕಬ್ಬಿಣ, ವಿಟಮಿನ್ ಎ, ಪೊಟ್ಯಾಶಿಯಂ ಇದ್ದು, ಇದು ನಮ್ಮ ದೇಹಕ್ಕೆ ಅಗತ್ಯವಾಗಿರುತ್ತದೆ.
ಟೊಮೆಟೊಗಳನ್ನು ಹೆಚ್ಚಿನ ಅಡುಗೆಯಲ್ಲಿ ಬಳಸಲಾಗುತ್ತದೆ. ಇದರ ಸಿಪ್ಪೆಯಲ್ಲಿಯೂ ಸಾಕಷ್ಟು ಪೌಷ್ಟಿಕಾಂಶವಿರುತ್ತದೆ. ಆದ್ದರಿಂದ, ಟೊಮೇಟೊವನ್ನು ಬೇಯಿಸುವಾಗ ಸಿಪ್ಪೆ ತೆಗೆಯುವ ತಪ್ಪನ್ನು ಮಾಡಬೇಡಿ.
ಸೌತೆಕಾಯಿಯ ಸಿಪ್ಪೆ ತೆಗೆಯುವುದು ಎಂದರೆ ಅದರ ಅರ್ಧಕ್ಕಿಂತ ಹೆಚ್ಚು ಪೌಷ್ಟಿಕಾಂಶವನ್ನು ವ್ಯರ್ಥ ಮಾಡುವುದು ಎಂದರ್ಥ . ಸಲಾಡ್ ಅಥವಾ ಮೊಸರು ಬಜ್ಜಿಯಲ್ಲಿ ಬಳಸುವಾಗ ಅದರ ಸಿಪ್ಪೆಯನ್ನು ತೆಗೆಯಬೇಡಿ. ಸಿಪ್ಪೆ ಸಮೇತ ಸೇವಿಸಿದರೂ ಇದರ ರುಚಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.