ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಒಂದೂ ಪಂದ್ಯವನ್ನು ಸೋಲದೆ 2 ಬಾರಿ ವಿಶ್ವಕಪ್ ಗೆದ್ದಿದೆ ಈ 2 ತಂಡ: ಯಾವುದದು ಗೊತ್ತಾ?
ನಾವಿಂದು ಈ ವರದಿಯಲ್ಲಿ ಒಂದೇ ಒಂದೂ ಪಂದ್ಯವನ್ನು ಸೋಲದೆ 2 ಬಾರಿ ವಿಶ್ವಕಪ್ ಟ್ರೋಫಿ ಗೆದ್ದ 2 ತಂಡಗಳ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ. ಅಂದಹಾಗೆ ಕಳೆದ 48 ವರ್ಷಗಳಲ್ಲಿ ಕೇವಲ ಐದು ತಂಡಗಳು ವಿಶ್ವಕಪ್ ಗೆಲ್ಲುವಲ್ಲಿ ಯಶಸ್ವಿಯಾಗಿವೆ.
ಈ ಐದು ತಂಡಗಳಲ್ಲಿ ಎರಡು ತಂಡಗಳು ಮಾತ್ರ ಎರಡು ಬಾರಿ ವಿಶ್ವಕಪ್ ಗೆದ್ದಿದೆ. ಆ ತಂಡಗಳೆಂದರೆ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್. ಈ ತಂಡಗಳು ಅಜೇಯರಾಗುವ ಮೂಲಕ ಪ್ರಶಸ್ತಿಯನ್ನು ಭದ್ರಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ.
ಭಾರತವು 2023ರ ವಿಶ್ವಕಪ್’ನಲ್ಲಿ ಅಜೇಯವಾಗಿ ಟ್ರೋಫಿ ಗೆಲ್ಲುವ ಕನಸನ್ನು ಹೊತ್ತಿತ್ತು. ಆದರೆ ಆ ಕನಸು ಕೊನೆಹಂತದಲ್ಲಿ ಮುಗ್ಗರಿಸಿತ್ತು.
ವೆಸ್ಟ್ ಇಂಡೀಸ್ 1975ರಲ್ಲಿ ಇಂಗ್ಲೆಂಡ್’ನಲ್ಲಿ ಪ್ರಶಸ್ತಿ ಗೆದ್ದಾಗ ಮೊದಲ ODI ವಿಶ್ವಕಪ್ ವಿಜೇತರಾಗಿ ಹೊರಹೊಮ್ಮಿತು. ಕೆರಿಬಿಯನ್ ತಂಡವು ಪಂದ್ಯಾವಳಿಯಲ್ಲಿ ಆಡಿದ ಎಲ್ಲಾ ಐದು ಪಂದ್ಯಗಳನ್ನು ಗೆದ್ದಿತ್ತು. ಕ್ಲೈವ್ ಲಾಯ್ಡ್ ತಂಡವು 1975 ರ ವಿಶ್ವಕಪ್’ನಲ್ಲಿ ಶ್ರೀಲಂಕಾ, ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾವನ್ನು ಎದುರಿಸಿತ್ತು.
ವೆಸ್ಟ್ ಇಂಡೀಸ್ 1979ರ ವಿಶ್ವಕಪ್’ನಲ್ಲಿ ಕೂಡ ತಂಡ ತನ್ನ ಪ್ರಾಬಲ್ಯವನ್ನು ಮುಂದುವರೆಸಿತು. ಈ ಬಾರಿ ಕೂಡ ಅಜೇಯವಾಗಿ ಟ್ರೋಫಿ ಗೆದ್ದಿತ್ತು.
ಆಸ್ಟ್ರೇಲಿಯಾ 2003ರಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಾಗ ಅಜೇಯ ODI ವಿಶ್ವಕಪ್ ಗೆದ್ದ ಎರಡನೇ ತಂಡವಾಯಿತು. ದಕ್ಷಿಣ ಆಫ್ರಿಕಾದಲ್ಲಿ ನಡೆದ ಸುದೀರ್ಘ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯವು 11 ಪಂದ್ಯಗಳನ್ನು ಗೆದ್ದುಕೊಂಡಿತ್ತು.
ವೆಸ್ಟ್ ಇಂಡೀಸ್‌ನಂತೆ, ಆಸೀಸ್ ಕೂಡ ಮತ್ತೊಮ್ಮೆ ಸೋಲನ್ನು ಅನುಭವಿಸದೆ ಏಕದಿನ ವಿಶ್ವಕಪ್ ಗೆದ್ದ ತಂಡವಾಯಿತು, ಕೆರಿಬಿಯನ್ ದ್ವೀಪಗಳಲ್ಲೇ ಆಸ್ಟ್ರೇಲಿಯಾ ಈ ಸಾಧನೆಯನ್ನು ಮಾಡಿತ್ತು.