ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೆ ಒಂದೇ ಒಂದು ಬಾರಿಯೂ ಔಟ್ ಆಗಿಲ್ಲ ಭಾರತದ ಈ 3 ಆಟಗಾರರು: ಯಾರವರು ಗೊತ್ತಾ?
ಕ್ರಿಕೆಟ್ ಇತಿಹಾಸದಲ್ಲಿ ಎಂತೆಂಥಾ ದಾಖಲೆಗಳನ್ನು ದಿಗ್ಗಜರು ಸೃಷ್ಟಿ ಮಾಡಿದ್ದಾರೆ. ಆದರೆ ಯಾವೊಬ್ಬ ಆಟಗಾರನಾದರೂ ಒಂದೂ ಬಾರಿಯೂ ಔಟ್ ಆಗದಿರಲು ಸಾಧ್ಯವೇ? ಈ ಪ್ರಶ್ನೆಗೆ ನಮ್ಮ ಉತ್ತರ ಸಾಧ್ಯ… ಇದಕ್ಕೆ ಕಾರಣ ಭಾರತದ ಈ ಮೂವರು ಆಟಗಾರರು.
ಟೀಂ ಇಂಡಿಯಾ ಪರ ಆಡಿರುವ ಈ ಮೂವರು ಕ್ರಿಕೆಟಿಗರನ್ನು ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೆ ಒಂದೇ ಒಂದು ಬಾರಿಯೂ ಔಟ್ ಮಾಡಲು ಸಾಧ್ಯವಾಗಿಲ್ಲ. ಅಂತಹ ಕ್ರಿಕೆಟಿಗರು ಯಾರೆಂದು ತಿಳಿದುಕೊಳ್ಳೋಣ.
ಟೀಂ ಇಂಡಿಯಾದ ಬ್ಯಾಟರ್ ಸೌರಭ್ ತಿವಾರಿ ಈ ಪಟ್ಟಿಯಲ್ಲಿ ಒಬ್ಬರಾಗಿದ್ದಾರೆ. ಇವರನ್ನು ಏಕದಿನ ಕ್ರಿಕೆಟ್’ನಲ್ಲಿ ವಿಶ್ವದ ಯಾವುದೇ ಬೌಲರ್ ಔಟ್ ಮಾಡಲು ಸಾಧ್ಯವಾಗಿಲ್ಲ. ಸೌರಭ್ ತಿವಾರಿ ಟೀಮ್ ಇಂಡಿಯಾ ಪರ ಆಡಿದ್ದು ಕೇವಲ ಮೂರು ಏಕದಿನ ಪಂದ್ಯಗಳನ್ನು. ಅದರಲ್ಲಿ ಎರಡು ಇನ್ನಿಂಗ್ಸ್’ಗಳಲ್ಲಿ ಮಾತ್ರ ಬ್ಯಾಟಿಂಗ್ ಮಾಡಿದ ಅವರು, ಔಟಾಗದೆ ಉಳಿದಿದ್ದಾರೆ. ಆ ಬಳಿಕ ತಂಡದಲ್ಲಿ ಹೆಚ್ಚಿನ ಅವಕಾಶ ಪಡೆದಿರಲಿಲ್ಲ.
ಫೈಜ್ ಫಜಲ್: ದೇಶೀಯ ಕ್ರಿಕೆಟ್’ನಲ್ಲಿ ಕಮಾಲ್ ಮಾಡಿದ್ದ ಫೈಜ್ ಫಜಲ್ ಟೀಂ ಇಂಡಿಯಾ ಪರ ಆಡಿದ್ದು ಒಂದೇ ಒಂದು ಏಕದಿನ ಪಂದ್ಯ. 2016ರಲ್ಲಿ ನಡೆದ ಈ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಅಜೇಯ 55 ರನ್ ಗಳಿಸಿದ್ದರು. ಆ ಬಳಿಕ ಅವರಿಗೆ ತಂಡದಲ್ಲಿ ಸ್ಥಾನ ಸಿಕ್ಕಿರಲಿಲ್ಲ.
ಭರತ್ ರೆಡ್ಡಿ: ಈ ಆಟಗಾರನ ಬಗ್ಗೆ ಇಂದಿನ ಜನರಿಗೆ ತಿಳಿದಿಲ್ಲದಿರಬಹುದು. ಭರತ್ ರೆಡ್ಡಿಯವರು ಟೀಂ ಇಂಡಿಯಾ ಪರ1978 ರಿಂದ 1981 ರವರೆಗೆ ಕ್ರಿಕೆಟ್ ಆಡಿದ್ದಾರೆ. ಆದರೆ ಈ ಸಂದರ್ಭದಲ್ಲಿ ಕೇವಲ 3 ಏಕದಿನ ಪಂದ್ಯಗಳನ್ನಾಡಿದ್ದರೆ, 2 ಬಾರಿ ಬ್ಯಾಟಿಂಗ್ ಮಾಡಲು ಅವಕಾಶ ಪಡೆಡೆದಿದ್ದರು. ಈ ಎರಡೂ ಬಾರಿ ಅಜೇಯರಾಗಿ ಉಳಿದಿದ್ದರು. ಆದರೆ ಇದಾದ ನಂತರ ಅವರನ್ನು ತಂಡದಿಂದಲೇ ಕೈಬಿಡಲಾಯಿತು.