Breast Cancer: ಈ 5 ಅಂಶಗಳು ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು!
ಹಾರ್ಮೋನ್ ಅಂಶಗಳು ಸ್ತನ ಕ್ಯಾನ್ಸರ್ ಅಪಾಯದ ಮೇಲೆ ಪರಿಣಾಮ ಬೀರಬಹುದು. ಈಸ್ಟ್ರೊಜೆನ್‌ನಂತಹ ಹಾರ್ಮೋನ್‌ಗಳಿಗೆ ದೀರ್ಘಕಾಲ ಒಡ್ಡಿಕೊಳ್ಳುವುದು ಸ್ತನ ಬೆಳವಣಿಗೆ ಮತ್ತು ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಹಾರ್ಮೋನುಗಳಿಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು.
BRCA1 ಮತ್ತು BRCA2ನಂತಹ ಕೆಲವು ಜೀನ್ ರೂಪಾಂತರಗಳನ್ನು ಆನುವಂಶಿಕವಾಗಿ ಪಡೆದ ಮಹಿಳೆಯರು ಸ್ತನ ಮತ್ತು ಅಂಡಾಶಯದ ಕ್ಯಾನ್ಸರ್‍ನ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ.
ಸ್ತನ ಕ್ಯಾನ್ಸರ್ ಅಪಾಯವು ವಯಸ್ಸಿನೊಂದಿಗೆ ಹೆಚ್ಚಾಗುತ್ತದೆ. 50 ವರ್ಷಗಳ ನಂತರ ಹೆಚ್ಚಿನ ಸ್ತನ ಕ್ಯಾನ್ಸರ್ ರೋಗನಿರ್ಣಯ ಮಾಡಲಾಗುತ್ತದೆ.
ಹತ್ತಿರದ ಕುಟುಂಬದ ಸದಸ್ಯ ಅಂದರೆ ತಾಯಿ, ಸಹೋದರಿ, ಮಗಳು ಸ್ತನ ಕ್ಯಾನ್ಸರ್ ಹೊಂದಿದ್ದರೆ, ನೀವು ಸಹ ಹೆಚ್ಚಿನ ಅಪಾಯವನ್ನು ಹೊಂದಿರುತ್ತೀರಿ.
ಕೆಲವು ಜೀವನಶೈಲಿಯ ಅಂಶಗಳು ಅಂದರೆ ಅತಿಯಾದ ತೂಕ ಅಥವಾ ಬೊಜ್ಜು, ನಿಯಮಿತವಾಗಿ ವ್ಯಾಯಾಮ ಮಾಡದಿರುವುದು ಮತ್ತು ಮದ್ಯಪಾನ ಮಾಡುವುದು ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.