ಸೀಬೆಹಣ್ಣು ತಿಂದ ನಂತರ ಯಾವುದೇ ಕಾರಣಕ್ಕೂ ಈ 5 ಆಹಾರಗಳನ್ನು ತಿನ್ನಲೇಬಾರದು
ಸೀಬೆಹಣ್ಣು: ಸೀಬೆಹಣ್ಣಿನಲ್ಲಿ ಪ್ರೋಟೀನ್, ಫೈಬರ್, ವಿಟಮಿನ್ ಎ, ವಿಟಮಿನ್ ಸಿ ಉತ್ತಮ ಪ್ರಮಾಣದಲ್ಲಿ ಕಂಡುಬರುತ್ತವೆ. ಸೀಬೆಹಣ್ಣನ್ನು ಪೇರಲ ಎಂತಲೂ ಕರೆಯುತ್ತಾರೆ. ನಮ್ಮಲ್ಲಿ ಕೆಲವರು ಪೇರಲ ತಿಂದ ಬಳಿಕ ಕೆಲವು ಸಾಮಾನ್ಯ ತಪ್ಪುಗಳನ್ನು ಮಾಡುತ್ತಾರೆ. ಆದರೆ, ಈ ಸಣ್ಣ ತಪ್ಪುಗಳು ನಿಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಉಂಟು ಮಾಡಬಹುದು. ಅಂತಹ ತಪ್ಪುಗಳು ಯಾವುವೆಂದರೆ...
ನೀರು: ಕೆಲವರು ಸೀಬೆಹಣ್ಣನ್ನು ತಿಂದ ತಕ್ಷಣ ನೀರನ್ನು ಕುಡಿಯುತ್ತಾರೆ. ಪೇರಲವು ತೂಕವನ್ನು ಕಡಿಮೆ ಮಾಡಲು ಕೆಲಸ ಮಾಡುತ್ತದೆ. ಆದರೆ, ಈ ಹಣ್ಣಿನೊಂದಿಗೆ ನೀರು ಕುಡಿಯುವುದರಿಂದ ಇದು ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡಬಹುದು. ಮಾಡಬಹುದು.
ಹಾಲು: ಕೆಲವರು ಸೀಬೆಹಣ್ಣಿನೊಂದಿಗೆ ಇಲ್ಲವೇ ಸೀಬೆಹಣ್ಣನ್ನು ತಿಂದ ಕೂಡಲೇ ಹಾಲು ಕುಡಿಯುತ್ತಾರೆ. ಆದರೆ, ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮವನ್ನು ಉಂಟು ಮಾಡಬಹುದು. ಮಾತ್ರವಲ್ಲ, ಉದರ ಸಂಬಂಧಿತ ಸಮಸ್ಯೆಗಳೂ ಕೂಡ ಹೆಚ್ಚಾಗಬಹುದು.
ಬಾಳೆಹಣ್ಣು: ಸೀಬೆಹಣ್ಣಿನೊಂದಿಗೆ ಅಪ್ಪಿತಪ್ಪಿಯೂ ಸಹ ಬಾಳೆಹಣ್ಣನ್ನು ಸೇವಿಸಬಾರದು. ಆರೋಗ್ಯ ತಜ್ಞರ ಪ್ರಕಾರ, ಒಂದೇ ಬಾರಿಗೆ ಹಲವ್ ಹಣ್ಣುಗಳನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರಲ್ಲೂ ಪೇರಲವನ್ನು ಸೇವಿಸುವಾಗ ಬಾಳೆಹಣ್ಣನ್ನು ಸೇವಿಸಬಾರದು ಎನ್ನಲಾಗುತ್ತದೆ.
ಮೊಸರು: ಪೇರಲ ಹಣ್ಣಿನೊಂದಿಗೆ ಮೊಸರು ಸೇವನೆಯಿಂದ ಇದು ಅತಿಸಾರದಂತಹ ಸಮಸ್ಯೆಗೆ ಕಾರಣವಾಗಬಹುದು.
ಮಜ್ಜಿಗೆ: ಸೀಬೆಹಣ್ಣನ್ನು ತಿಂದ ನಂತರ ಮಜ್ಜಿಗೆಯನ್ನು ಸೇವಿಸುವುದರಿಂದ ಅಸಿಡಿಟಿ ಸಮಸ್ಯೆ ಉಂಟಾಗುತ್ತದೆ. ಇದು ಹೊಟ್ಟೆ ನೋವಿಗೂ ಕಾರಣವಾಗಬಹುದು.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.