ಅಗ್ಗದ ಬೆಲೆ ಮಾರಾಟವಾಗುತ್ತಿದೆ ಮಾರುತಿಯ ಈ 5 ಕಾರುಗಳು: ಭರ್ಜರಿ ಮೈಲೇಜ್ ಕೂಡ ಕೊಡುತ್ತೆ!

Mon, 07 Nov 2022-11:14 am,

ನೀವು ಹೆಚ್ಚು ಮಾರಾಟವಾಗುವ ಹ್ಯಾಚ್‌ಬ್ಯಾಕ್ ಸೆಗ್‌ಮೆಂಟ್ ಕಾರಾದ ಸ್ವಿಫ್ಟ್‌ನ CNG ಮಾದರಿಯನ್ನು ಸಹ ಖರೀದಿಸಬಹುದು. ಇದರ ಆರಂಭಿಕ ಎಕ್ಸ್ ಶೋ ರೂಂ ಬೆಲೆ 7.77 ಲಕ್ಷ ರೂ. ಈ ಕಾರು ಒಂದು ಕೆಜಿ ಸಿಎನ್‌ಜಿಯಲ್ಲಿ 30.90 ಕಿ.ಮೀ ವರೆಗೆ ಪ್ರಯಾಣಿಸಬಹುದು. ಈ ಕಾರಿನಲ್ಲಿ ನೀವು ಅನೇಕ ಉತ್ತಮ ವೈಶಿಷ್ಟ್ಯಗಳನ್ನು ಪಡೆಯುತ್ತೀರಿ.

ಮಾರುತಿಯ ವ್ಯಾಗನ್ಆರ್ ಭಾರತದ ಅತ್ಯಂತ ಪ್ರಸಿದ್ಧ ಕಾರುಗಳಲ್ಲಿ ಒಂದಾಗಿದೆ. ಈ ಕಾರು ಒಂದು ಕೆಜಿ ಸಿಎನ್‌ಜಿಯಲ್ಲಿ 34.05 ಕಿ.ಮೀ. ಓಡುತ್ತದೆ, ಇದರ ಎಕ್ಸ್ ಶೋ ರೂಂ ಬೆಲೆ (ದೆಹಲಿ) 6.34 ಲಕ್ಷ ರೂ. ಇದರಿಂದಾಗಿ ನೀವು ಈ ಕಾರನ್ನು ನಿಮ್ಮ ಪಟ್ಟಿಯಲ್ಲಿ ಸೇರಿಸಿಕೊಳ್ಳಬಹುದು.

ಅತಿ ಹೆಚ್ಚು ಮೈಲೇಜ್ ನೀಡುವ ಕಾರುಗಳಲ್ಲಿ ಒಂದಾದ ಮಾರುತಿಯ ಈ ಮಾದರಿಯನ್ನು ಸಹ ನೀವು ಖರೀದಿಸಬಹುದು. ಈ ಕಾರು 31.12 ಕಿಮೀ/ಕೆಜಿ ಮೈಲೇಜ್ ನೀಡುತ್ತದೆ. ಈ ಕಾರಿನ ಎಕ್ಸ್ ಶೋ ರೂಂ ಬೆಲೆ 8.14 ಲಕ್ಷ ರೂ. ಈ ಕಾರು 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನಲ್ಲಿ ಲಭ್ಯವಿದೆ. S-CNG ನಲ್ಲಿ, ಕಾರನ್ನು ಎರಡು ಟ್ರಿಮ್‌ಗಳಲ್ಲಿ ನೀಡಲಾಗುತ್ತದೆ - LXI ಮತ್ತು VXI.

ಮಾರುತಿಯ ಕಾಂಪ್ಯಾಕ್ಟ್ ಸೆಡಾನ್ ಡಿಜೈರ್ ಈಗ ಸಿಎನ್‌ಜಿಯಲ್ಲಿ ಲಭ್ಯವಿದೆ. ನೀವು ಈ ಕಾರನ್ನು ಸಹ ಪರಿಗಣಿಸಬಹುದು. ಈ ಕಾರು 31.12 ಕಿಮೀ/ಕೆಜಿ ಮೈಲೇಜ್ ನೀಡುತ್ತದೆ. ಈ ಕಾರಿನ ಎಕ್ಸ್ ಶೋ ರೂಂ ಬೆಲೆ 8.14 ಲಕ್ಷ ರೂ. ಕಂಪನಿಯು ಇದನ್ನು ಭಾರತದ ಅತ್ಯಂತ ಇಂಧನ ದಕ್ಷತೆ ಮತ್ತು ಅತ್ಯಂತ ಶಕ್ತಿಶಾಲಿ CNG ಸೆಡಾನ್ ಎಂದು ಬಣ್ಣಿಸಿದೆ.

ಮಾರುತಿ ಸಿಲೋರಿಯೊ ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಕಾರುಗಳಲ್ಲಿ ಒಂದಾಗಿದೆ. ಈ ಕಾರು ನಿಮ್ಮ ಬಜೆಟ್‌ಗೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ. ಅಲ್ಲದೆ, ಈ ಶ್ರೇಣಿಯಲ್ಲಿ ಬರುವ ಅನೇಕ ಕಾರುಗಳಿಗಿಂತ ಈ ಕಾರಿನ ಮೈಲೇಜ್ ಉತ್ತಮವಾಗಿದೆ. ಒಂದು ಕಿಲೋಗ್ರಾಂನಲ್ಲಿ, ಈ ಕಾರು 35.60 ಕಿಮೀ ಪ್ರಯಾಣವನ್ನು ಪೂರ್ಣಗೊಳಿಸುತ್ತದೆ. ಇದರ ದೆಹಲಿ ಎಕ್ಸ್ ಶೋ ರೂಂ ಆರಂಭಿಕ ಬೆಲೆ 6.58 ಲಕ್ಷ ರೂ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link