ಈ ಸಲ ಕಪ್ ನಮ್ದೆ..!! IPL ಟ್ರೋಫಿ ಪಡೆದೇ ತೀರುತ್ತೇವೆ ಅಂತಾ ಪಣತೊಟ್ಟಿದ್ದಾರೆ RCBಯ ಈ 5 ಆಟಗಾರರು
ಆರ್ ಸಿ ಬಿ ನಾಯಕರಾಗಿದ್ದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಈ ಬಾರಿಯ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂಬ ನಿರೀಕ್ಷೆಯಿದೆ. ಇಷ್ಟು ದಿನ ಸುಮ್ಮನಿದ್ದ ವಿರಾಟ್ ಬ್ಯಾಟ್ ಈಗ ಬಿರುಸಾಗಿ ಮಾತನಾಡುತ್ತಿರುವುದು ತಂಡಕ್ಕೆ ಸಂತಸದ ವಿಚಾರ. ಕೊಹ್ಲಿ 223 ಐಪಿಎಲ್ ಪಂದ್ಯಗಳಲ್ಲಿ 6624 ರನ್ ಗಳಿಸಿದ್ದಾರೆ.
ಆಸ್ಟ್ರೇಲಿಯಾದ ಮಾರಣಾಂತಿಕ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಗಾಯದ ಕಾರಣ ಕೊಂಚ ರೆಸ್ಟ್’ನಲ್ಲಿದ್ದರು. ಇದೀಗ ಐಪಿಎಲ್’ನಲ್ಲಿ ಪುನರಾಗಮನಕ್ಕೆ ಸಿದ್ಧರಾಗಿದ್ದಾರೆ. ಮ್ಯಾಕ್ಸ್‌ವೆಲ್ 110 ಐಪಿಎಲ್ ಪಂದ್ಯಗಳಲ್ಲಿ 2319 ರನ್ ಗಳಿಸಿದ್ದಾರೆ.
ದಕ್ಷಿಣ ಆಫ್ರಿಕಾದ ಈ ಬ್ಯಾಟ್ಸ’ಮನ್ ಈ ವರ್ಷವೂ ಆರ್‌ಸಿಬಿ ಪರ ಆಡಲಿದ್ದಾರೆ. ಈ ಬಾರಿಯೂ ಐಪಿಎಲ್‌ನಲ್ಲಿ ಅವರ ಬ್ಯಾಟಿಂಗ್ ಶೈಲಿ ಅಬ್ಬರಿಸಿದರೆ ಆರ್ ಸಿ ಬಿ ಗೆಲ್ಲುವುದು ಖಚಿತ. ಇವರು 116 ಐಪಿಎಲ್ ಪಂದ್ಯಗಳಲ್ಲಿ 3403 ರನ್ ಗಳಿಸಿದ್ದಾರೆ.
ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಕೂಡ RCB ಪರ ಪ್ರಮುಖ ಪಾತ್ರ ವಹಿಸಲಿದ್ದಾರೆ. ಸಿರಾಜ್ ಆರ್‌ಸಿಬಿಯ ಪ್ರಮುಖ ವೇಗದ ಬೌಲರ್‌ಗಳಲ್ಲಿ ಒಬ್ಬರು. ಸಿರಾಜ್ 65 ಐಪಿಎಲ್ ಪಂದ್ಯಗಳಲ್ಲಿ 59 ವಿಕೆಟ್ ಪಡೆದಿದ್ದಾರೆ.
ಹರ್ಷಲ್ ಪಟೇಲ್ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಕಬಳಿಸುವ ಮೂಲಕ ಚೆನ್ನೈನ ಡ್ವೇನ್ ಬ್ರಾವೋ ಅವರನ್ನು ಸರಿಗಟ್ಟಿದ್ದಾರೆ. ಅವರು ಐಪಿಎಲ್ ಋತುವಿನಲ್ಲಿ ಅತಿ ಹೆಚ್ಚು 32 ವಿಕೆಟ್ಗಳನ್ನು ಪಡೆದ್ದಾರೆ. ಐಪಿಎಲ್‌ನಲ್ಲಿ 78 ಪಂದ್ಯಗಳನ್ನು ಆಡಿರುವ ಅವರು 97 ವಿಕೆಟ್‌ಗಳನ್ನು ಪಡೆದಿದ್ದಾರೆ.